ಬೀದರ್‌ ನ್ಯೂಸ್‌ ರೌಂಡಪ್‌ | ಒಂದೇ ಕ್ಲಿಕ್ ನಲ್ಲಿ ಜಿಲ್ಲೆಯ ಪ್ರಮುಖ ಸುದ್ದಿಗಳು | 21-09-2024

ಬೀದರ್‌ ನ್ಯೂಸ್‌ ರೌಂಡಪ್‌ | ಒಂದೇ ಕ್ಲಿಕ್ ನಲ್ಲಿ ಜಿಲ್ಲೆಯ ಪ್ರಮುಖ ಸುದ್ದಿಗಳು | 21-09-2024

ಬೀದರ್‌ ನ್ಯೂಸ್‌ ರೌಂಡಪ್‌ 

1.ಕಾರಂಜಾ ಡ್ಯಾಂ ಭರ್ತಿ,ರೈತರು ಹೈರಾಣು

ಕಾರಂಜಾ ಡ್ಯಾಂ ಭರ್ತಿಯಾಗಿ ಹಿನ್ನೀರಿನ ನೀರಿನಲ್ಲಿ 30 ಗ್ರಾಮಗಳ ಪ್ರದೇಶ ಜಲಾವೃತವಾಗಿದ್ದು, ಕಬ್ಬು, ತೊಗರಿ, ಸೋಯಾಬಿನ್‌ ಇತರೆ ಬೆಳೆಗಳು ಸಂಪೂರ್ಣ ನೀರು ಪಾಲಾಗಿವೆ. ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಇದುರೆಗೆ ನಯಾಪೈಸೆ ಪರಿಹಾರ ಬಂದಿಲ್ಲ ಎಂದು ರೈತರು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. 

2. ಬೀದರ್‌ ನಗರದ ಬಹಮನಿ ಕೋಟೆ ಮೇಲೆ ಏರ್‌ ಶೋ 

ಬೀದರ್‌ ನಗರದ ಬಹಮನಿ ಕೋಟೆ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಭಾರತೀಯ ವಾಯುಪಡೆ ಸಹಯೋಗದಲ್ಲಿ ಏರ್ಪಡಿಸಿದ ಏರ್‌ ಶೋ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತ್ತು .

ಬೀದರನ ಸೂರ್ಯಕಿರಣ ಏರೋಬ್ಯಾಟಿಕ್ ತಂಡದಿಂದ ಆಕರ್ಷಕ ಏರ್ ಶೋ ನಡೆಯಿತು. ಸೂರ್ಯಕಿರಣ ತಂಡದ ನಾಯಕ ಗುರುಪ್ರಿತಸಿಂಗ್ ದಿಲ್ಲೋನ್ ನೇತೃತ್ವದಲ್ಲಿ ನಡೆದ ಏರ್ ಶೋ ಕಾರ್ಯಕ್ರಮದಲ್ಲಿ 9 ಸೂರ್ಯಕಿರಣ ವಿಮಾನಗಳು ವಿವಿಧ ರೀತಿಯಲ್ಲಿ ಆಕರ್ಷಕ ಪ್ರದರ್ಶನ ನೀಡುವ ಮೂಲಕ ನೋಡುಗರನ್ನು ಮಂತ್ರಮುಗ್ದರನ್ನಾಗಿಸಿದವು.

 ಸೂರ್ಯಕಿರಣ ವಿಮಾನಗಳು ಆಕಾಶದಲ್ಲಿ ಮೇಲಿನಿಂದ ಕೆಳಗೆ. ಪರಸ್ಪರ ಮುಖಾಮುಖಿ ಕ್ರಾಸಿಂಗ್, ಬ್ಯಾರಲ್ ರೋಲ್ ಸೇರಿದಂತೆ ಕೇಸರಿ, ಬಿಳಿ, ಹಸಿರು ಬಣ್ಣ ಹಾಗೂ ವಿವಿಧ ವೈಮಾನಿಕ ಪ್ರದರ್ಶನ ನೋಡುಗರನ್ನು ಮೂಕವಿಸ್ಮಿತಗೊಳಿಸಿ ಆಕಾಶದಲ್ಲಿ ಚಿತ್ತಾರಗಳನ್ನು ಮೂಡಿಸಿದವು. 

 

3. ಸೆಪ್ಟೆಂಬರ್ 23ಕ್ಕೆ ಅಹಲ್ಯಾಬಾಯಿ ಹೋಳ್ಕರ್ ಜಯಂತೋತ್ಸವ

ಕೇಶವ ಕಾರ್ಯ ಸಂವರ್ಧನಾ ಸಮಿತಿ ವತಿಯಿಂದ ರಾಜಮಾತಾ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜಯಂತೋತ್ಸವವನ್ನು ಸಪ್ಟೆಂಬರ್ 23ರಂದು ಪೂಜ್ಯ ಡಾ. ಚೆನ್ನಬಸವ ಪಟ್ಟದ ದೇವರ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

 ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಗಾಯಕರು ಹಾಗೂ ಬೀದರ್ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ರೇಖಾ ಅಪ್ಪಾರಾವ್ ಸೌದಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸಹ ಪ್ರಚಾರಕರಾದ ಪ್ರವೀಣ್ ಕುಮಾರ್ ಜೋಶಿ ಅವರು ಆಗಮಿಸಲಿದ್ದಾರೆ ಎಂದು ಸಂಘದ ಉಪಾಧ್ಯಕ್ಷ ನಾಗೇಶ್ ಚಿನ್ನಾರೆಡ್ಡಿ ತಿಳಿಸಿದರು.

 

4. ಔರಾದ್‌ನಲ್ಲಿ ಅದ್ದೂರಿ ಶಿಕ್ಷಕರ ದಿನ ಆಚರಣೆ

ಔರಾದ ಪಟ್ಟಣದ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ 2024-25ನೇ ಸಾಲಿನ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,ಶಾಸಕ ಪ್ರಭು ಚವ್ಹಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಔರಾದ(ಬಿ) ಕ್ಷೇತ್ರದಲ್ಲಿ ಶಿಕ್ಷಣ ರಂಗ ಸಾಕಷ್ಟು ಸುಧಾರಿಸಿದೆ. ಪ್ರತಿ ವರ್ಷ ಫಲಿತಾಂಶದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ಆದರೆ ಈ ವರ್ಷ ಕಡಿಮೆಯಾಗಿರುವುದಕ್ಕೆ ಬೇಸರವಿದೆ. ಎಲ್ಲ ಶಿಕ್ಷಕರು ಫಲಿತಾಂಶ ಸುಧಾರಣೆಗೆ ಪ್ರಯತ್ನಿಸಬೇಕು. ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿಯೂ ಸಾಧಿಸಬೇಕೆಂಬ ಉದ್ದೇಶದಿಂದ ಔರಾದ್‌ನಲ್ಲಿ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ. ಇದರ ಸದ್ಬಳಕೆಯಾಗಬೇಕು. ನಮ್ಮ ಕ್ಷೇತ್ರದ ಮಕ್ಕಳು ಕೂಡ ರಾಜ್ಯಮಟ್ಟದಲ್ಲಿ ಗೆಲುವು ಸಾಧಿಸಬೇಕು ಎಂದ್ರು

 

 5. ನಾಳೆ ಸಿದ್ಧಾಂತ ಶಿಖಾಮಣಿ ಗ್ರಂಥ ಅರ್ಪಣೆ ಅಭಿಯಾನ ಸಮಾರೋಪ 

 

ನಾಳೆ ಬೆಳಿಗ್ಗೆ ಬೆಲ್ದಾಳೆ ಕನ್ವೆನ್ಷನ್ ಹಾಲ್ ನಲ್ಲಿ, ಶ್ರಾವಣ ಶಿವ ದರ್ಶನ ಸಂಚಾರ ಸಮಾರೋಪ ಹಾಗೂ ಸಿದ್ಧಾಂತ ಶಿಖಾಮಣಿ ಗ್ರಂಥ ಅರ್ಪಣೆ ಅಭಿಯಾನ ಸಮಾರೋಪ ಹಾಗೂ ಶ್ರೀ ಜಗದ್ಗುರು ಪಂಚಾಚಾರ್ಯ ರಾಷ್ಟೀಯ ಪುರಸ್ಕಾರ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಶೈಲ ಜಗದ್ಗುರುಗಳು ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

 

6. 930 ಕೆ. ಜಿ ಅಕ್ರಮ ಪಡಿತರ ಅಕ್ಕಿ ವಶಕ್ಕೆ  

ಮನ್ನಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಗೂಡ್ಸ್ ಆಟೋದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನ ಖಚಿತ ಮಾಹಿತಿಯೊಂದಿಗೆ ಬೀದ‌ರ್ ಆಹಾರ ನಿರೀಕ್ಷಕರು, ಬೀದರ್ ಗ್ರಾಮೀಣ ತಹಶೀಲ್ದಾರರು ಪೋಲಿಸ್ ಇಲಾಖೆಯ ಸಹಾಯದೊಂದಿಗೆ ಅಕ್ರಮವಾಗಿ ಸಾಗಿಸುತ್ತಿದ್ದ 930 kg ಅಕ್ಕಿ ಹಾಗೂ ಒಂದು ಗೂಡ್ಸ್ ಆಟೋವನ್ನು ವಶ ಪಡಿಸಿಕೊಂಡು, ಆರೋಪಿಯನ್ನ ಬಂಧಿಸಿದ್ದಾರೆ.

 

7. ಜಿಲ್ಲೆಯಲ್ಲಿ ಮುಂದುವರೆದ ವರುಣನ ಅರ್ಭಟ 

ಕಳೆದ 24 ಗಂಟೆಯಲ್ಲಿ ಬೀದರ್‌ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು ,ಅಲ್ಲಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದ್ದು,ರೈತರ ಬೆಳೆಗಳಿಗೆ ಅಸರೆಯಾಗಿದೆ.

ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 31 ಎಮ್‌ ಎಮ್‌ ಮಳೆ ದಾಖಲಾಗಿದ್ದು,ಬಗದಲ್‌ ಹೋಬಳಿಯಲ್ಲಿ ಅತಿ ಹೆಚ್ಚು ಅಂದ್ರೆ 120 ಎಮ್‌ ಎಮ್‌ ಮಳೆ ದಾಖಲಾಗಿದೆ.

ಜಿಲ್ಲೆಯ ಹುಮನಾಬಾದ ತಾಲ್ಲೂಕಿನಲ್ಲಿ 72 ಎಮ್‌ ಎಮ್‌ ,ಚಿಟಗುಪ್ಪಾ 45 ಎಮ್‌ ಎಮ್‌,ಬಸವಕಲ್ಯಾಣ 43,ಬೀದರ್‌ 40ಎಮ್‌ ಎಮ್‌,ಭಾಲ್ಕಿ 17 ಎಮ್‌ ಎಮ್, ಹುಲಸೂರು 5 ಎಮ್‌ ಎಮ್‌,ಕಮಲನಗರ 3 ಎಮ್‌,ಎಮ್‌.ಔರಾದ 1 ಎಮ್‌ ಎಮ್‌ ಮಳೆ ದಾಖಲಾಗಿದ್ದು,ಮೋಡ ಕವಿದ ವಾತಾವರಣ ಮುಂದುವರೆದಿದ್ದೆ.

 

8. ಡಾ. ರಘು ಕೃಷ್ಣಮೂರ್ತಿ ಅವರಿಗೆ ಪ್ರತಿಷ್ಠಿತ ವಿ.ಕೆ. ಅಚೀವರ್ಸ್ ಪ್ರಶಸ್ತಿ

 

ಬೀದರ್‌ನ ಡಾ. ಕೃಷ್ಣಮೂರ್ತಿ ಆಸ್ಪತ್ರೆ ಮತ್ತು ಪುನಶ್ಚೇತನ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ರಘು ಕೃಷ್ಣಮೂರ್ತಿ ಅವರಿಗೆ ಪ್ರತಿಷ್ಠಿತ ವಿ.ಕೆ. ಅಚೀವರ್ಸ್ ಪ್ರಶಸ್ತಿ ಲಭಿಸಿದೆ. ಆರೋಗ್ಯ ಮತ್ತು ಸಾಮಾಜಿಕ ಸೇವೆಯಲ್ಲಿ ಅವರ ಬಹುಮುಖ್ಯ ಕೊಡುಗೆಗಳನ್ನು ಪರಿಗಣಿಸಿ ಈ ಗೌರವವನ್ನು ನೀಡಲಾಗಿದ್ದು,ಬೀದರ್‌ ನ ಹಲವು ನಾಗರಿಕರು ಅಭಿನಂದನೆಯನ್ನು ಸಲ್ಲಿಸಿದ್ದಾರೆ..

 

9. ಸಾವಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ

 ಕಮಲನಗರ ತಾಲ್ಲೂಕಿನ ಸಾವಳಿ ಗ್ರಾಮದ ಶಾಲೆಯಲ್ಲಿನ ಆವರಣದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಶಾಸಕ ಪ್ರಭು ಚವ್ಹಾಣ ಭೇಟಿ ನೀಡಿ ಮಕ್ಕಳ ಸಂಖ್ಯೆ, ಹಾಜರಾತಿ, ಊಟದ ವ್ಯವಸ್ಥೆಯನ್ನು ಗಮನಿಸಿದರು. ಇಲ್ಲಿಯು ಮಕ್ಕಳ ಸಂಖ್ಯೆ ಕಡಿಮೆಯಿರುವುದಕ್ಕೆ ಸ್ಥಳದಲ್ಲಿದ್ದ ಅಂಗನವಾಡಿ ಸಿಬ್ಬಂದಿಯ ವಿರುದ್ಧ ಕಿಡಿಕಾರಿದರು.

ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರಿಗೆ ವಿತರಿಸುವ ಆಹಾರ ಪದಾರ್ಥಗಳನ್ನು ತೆರೆದು ನೋಡಿದಾಗ ಕಳಪೆ ಗುಣಮಟ್ಟದ ಆಹಾರ ವಸ್ತುಗಳು ಕಾಣಿಸಿದವು. ಆಹಾರ ಉತ್ಪನ್ನಗಳು ಸರಿಯಾಗಿ ಇದ್ದರೆ ಮಾತ್ರ ಮಕ್ಕಳು ಮತ್ತು ಮಹಿಳೆಯರಿಗೆ ನೀಡಬೇಕು. ಇಲ್ಲವೆ ಹಿಂದುರಿಗಿಸಿ ಸಂಬAಧಪಟ್ಟವರ ಗಮನಕ್ಕೆ ತರಬೇಕು. ಕಳಪೆ ಆಹಾರದಿಂದ ಮಕ್ಕಳಿಗೆ ಏನಾದರೂ ಆದರೆ ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲವೆಂದು ಎಚ್ಚರಿಸಿದರು.

 

10. ವ್ಯಕ್ತಿ ಮರ್ಮಾಂಗ ಕೊಯ್ಯಲು ಯತ್ನ

ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಯುವಕನ ಮರ್ಮಾಂಗವನ್ನ ಪತಿ ಕತ್ತರಿಯಲ್ಲಿ ಕತ್ತರಿಸಲು ಯತ್ನಿಸಿದ ವಿಚಿತ್ರ ಘಟನೆ ಜಿಲ್ಲೆಯಲ್ಲಿ ನಲ ನಡೆದಿದೆ. 

28 ವರ್ಷದ ಸುನೀಲ್ ಹಲ್ಲೆಗೊಳಗಾದ ಯುವಕ.ಬೀದರ್ ತಾಲೂಕಿನ ಬಂಬುಳಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪತ್ನಿ ಅನ್ಯ ಯುವಕನ ಜೊತೆ ಮನೆಯಲ್ಲಿದ್ದಾಗ ರೆಡ್ ಹ್ಯಾಂಡ್ ಆಗಿ ಪತಿಯ ಕೈಗೆ ಸಿಕ್ಕಿಬಿದ್ದಿದ್ದು, ಕೋಪಗೊಂಡ ಪತಿ ತನ್ನ ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಯುವಕನನ್ನು ಮನೆಯಲ್ಲಿಯೇ ಕೂಡಿ ಹಾಕಿದ್ದಾನೆ

. ಈ ಯುವಕನಿಗೆ ರಾತ್ರಿಯಿಡಿ ಥಳಿಸಿ ಚಿತ್ರ ಹಿಂಸೆ ಕೊಟ್ಟಿದ್ದು, ನಂತರ ಕತ್ತರಿಯಿಂದ ಮರ್ಮಾಂಗವನ್ನು ಕೊಯ್ಯಲು ವ್ಯಕ್ತಿ ಯತ್ನಿಸಿದ್ದಾನೆ. ಸದ್ಯ ಜೀವಾಪಾಯದಿಂದ ಪಾರಾಗಿರುವ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Share this post

Post Comment