ಬೀದರ್ ಜಿಲ್ಲಾ ಪೋಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು,ನಗರದ ದಿನ ದಯಾಳ್ ಬಡಾವಣೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ..ವೈದ್ಯರ ಸಲಹೆ ಇಲ್ಲದೇ ಬಳಸುವ ಮಾತ್ರೆಗಳು ಹಾಗೂ ಸಿರಪ್ ಗಳನ್ನು ಮಾರಾಟ ಮಾಡುತ್ತಿದ್ದ,ಮೂವರನ್ನು ಪೋಲಿಸರು ವಶಕ್ಕೆ ಪಡೆದ್ದು ಎನ್ ಡಿ ಪಿ ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ,ನ್ಯಾಯಾಂಗ್ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪ್ರತಿಕಾಗೋಷ್ಠಿಯಲ್ಲಿ ಪೋಲಿಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.
ದಾಳಿಯಲ್ಲಿ 375 ಗ್ರಾಂ ಗಾಂಜಾ,174 ಮಾದಕ ಗುಳಿಗೆಗಳು ಹಾಗೂ 69 ಸಿರಫ್ ಬಾಟಲಿಗಳೂ ಹಾಗೂ ಕೃತ್ಯಕ್ಕೆ ಬಳಸಲಾದ ವಾಹನ ಮತ್ತು ಮೊಬೈಲ್ ಸೇರಿ 54,078 ರೂಪಾಯಿ ಬೆಲೆವುಳ್ಳ ಮಾಲು ಜಪ್ತಿ ಮಾಡಲಾಗಿದ್ದು,ಕಾರ್ಯಾಚರಣೆಯಲ್ಲಿ ಭಾಗಿಯಾಗಿದ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಪ್ರಶಂಶೆ ವ್ಯಕ್ತಪಡಿಸಿದ್ದಾರೆ.