BREAKING: ಕಲಬುರ್ಗಿಯಲ್ಲಿ ಕುಖ್ಯಾತ ದರೋಡೆ ಕೋರನ ಮೇಲೆ ಪೊಲೀಸರಿಂದ ಫೈರಿಂಗ್, ಅರೆಸ್ಟ್

BREAKING: ಕಲಬುರ್ಗಿಯಲ್ಲಿ ಕುಖ್ಯಾತ ದರೋಡೆ ಕೋರನ ಮೇಲೆ ಪೊಲೀಸರಿಂದ ಫೈರಿಂಗ್, ಅರೆಸ್ಟ್

ಕಲಬುರ್ಗಿ: ಜಿಲ್ಲೆಯಲ್ಲಿ ಕುಖ್ಯಾತ ದರೋಡೆಕೋರನ ಮೇಲೆ ಪೊಲೀಸರು ಫೈರಿಂಗ್ ಮಾಡಿ, ಆರೋಪಿಯನ್ನು ಬಂಧಿಸಿರುವಂತ ಘಟನೆ ಕಲಬುರ್ಗಿ ಉಪನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕಲಬುರ್ಗಿ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಕುಖ್ಯಾತ ದರೋಡೆಕೋರ ಅವತಾರ್ ಸಿಂಗ್ ಎಂಬಾತನನ್ನು ಬಂದಿಸೋದಕ್ಕೆ ಕಲಬುರ್ಗಿ ಸಬ್ ಅರ್ಬನ್ ಠಾಣೆಯ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಗಳು ತೆರಳಿದ್ದಾರೆ. ಪೊಲೀಸರು ಬಂಧಿಸೋದಕ್ಕೆ ಬಂದಿರುವಂತ ವಿಷಯ ತಿಳಿದಂತ ದರೋಡೆಕೋರ ಅವತಾರ್ ಸಿಂಗ್ ತಪ್ಪಿಸಿಕೊಳ್ಳೋದಕ್ಕೆ ಪ್ರಯತ್ನಿಸಿದ್ದಾನೆ. ಅಲ್ಲದೇ ಪೊಲೀಸರ ಮೇಲೆ ಹಲ್ಲೆಗೆ ಯತ್ನಿ ನಡೆಸಿದ್ದಾನೆ.

ಪೊಲೀಸರ ಮೇಲೆ ಹಲ್ಲೆ ಮಾಡಿ, ಪರಾರಿಯಾಗಲು ಯತ್ನಿಸಿದಂತ ಕುಖ್ಯಾತ ದರೋಡೆಕೋರ ಅವತಾರ್ ಸಿಂಗ್ ಕಾಲಿಗೆ ಕಲಬುರ್ಗಿ ಅರ್ಬನ್ ಠಾಣೆಯ ಇನ್ಸ್ ಪೆಕ್ಟರ್ ಸಂತೋಷ್ ತಟ್ಟೆಪಲ್ಲಿ ಅವರು ಆತ್ಮರಕ್ಷಣೆಗಾಗಿ ಕಾಲಿಗೆ ಗುಂಡೇಟು ನೀಡಿ ಬಂಧಿಸಿದ್ದಾರೆ.ಅಂದಹಾಗೇ ದರೋಡೆಕೋರ ಅವತಾರ್ ಸಿಂಗ್ ವಿರುದ್ಧ ಕಲಬುರ್ಗಿಯ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದಾವೆ.

ವರದಿ : ಶ್ರಿಕಾಂತ್ ಬಿರಾಳ್ ,ಕಲಬುರಗಿ

 

Share this post

Post Comment