ಬಸ್ ಚಾಲಕನ ಕನ್ನಡ ಪ್ರೇಮ.!

ಬಸ್ ಚಾಲಕನ ಕನ್ನಡ ಪ್ರೇಮ.!

ಸಾರಿಗೆ ಬಸ್ ಚಾಲಕರೊಬ್ಬರು ರಾಜ್ಯೋತ್ಸವ ಹಿನ್ನಲೆ ಸರ್ಕಾರಿ ಬಸ್’ನ್ನು ಸಂಪುರ್ಣವಾಗಿ ಕನ್ನಡಮವಾಗಿಸುವ ಮೂಲಕ ಗಮನ ಸೆಳೆದಿದ್ದಾರೆ.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಬಸ್ ಡಿಪೋ ಚಾಲಕ ನಾಗಪ್ಪ ಉಪ್ಪಿನ್‌ ಎಂಬುವವರು ತಮ್ಮ ಸ್ವಂತ ದುಡ್ಡಲ್ಲಿ ಬಸ್ ಗೆ ಸುಂದರವಾಗಿ ಅಲಂಕಾರ ಮಾಡಿದ್ದಾರೆ. ಸರ್ಕಾರಿ ಬಸ್ ಗೆ ಕನ್ನಡದ ಬಾವುಟ ಕಟ್ಟಿ, ಕೆಂಪು-ಅರಿಶೀಣದ ಬಲೂನ್’ಗಳಿಂದ ಶೃಂಗಾರ ಮಾಡಿದಲ್ಲದೆ, ಬಸ್ ಹೊರಗಡೆ ಮತ್ತು ಒಳಗಡೆ ಕನ್ನಡ ಸಾಹಿತಿಗಳ ಪೋಟೊ ಅಂಟಿಸುವುದರ ಜೊತೆಗೆ ಪ್ರಯಾಣಿಕರಿಗೆ ಬಸ್ ನಲ್ಲಿ ಪ್ರಯಾಣಿಸುವಾಗ ಕನ್ನಡ ಹಾಡುಗಳನ್ನ ಹಾಕುವ ಮೂಲಕ ಕನ್ನಡ ಪ್ರೀತಿ ಮೇರೆದಿದ್ದಾರೆ.

ಇನ್ನು ಚಾಲಕ ನಾಗಪ್ಪ ಉಪ್ಪಿನ್‌ ಅವರ ಕನ್ನಡ ಪ್ರೇಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ‌.

Share this post

Post Comment