Category: ಬೀದರ್

ಬೀದರ್‌ :  ಬೆಳೆ ವಿಮೆ ನೋಂದಣಿಗೆ ಅವಕಾಶ ,ತೋಟಗಾರಿಕೆಯಿಂದ ಮಹತ್ವದ ಸೂಚನೆ

ನ್ಯೂಸ್‌ ಡೆಸ್ಕ್‌ ಬೀದರ್‌   :- 2024-25ನೇ ಸಾಲಿನ ಹಿಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಹೂಕೋಸು ಮತ್ತು ಹಸಿ ಮೆಣಸಿನಕಾಯಿ (ನೀ) ಬೆಳೆಗಳಿಗೆ ವಿಮೆ ನೋಂದಣಿ ಮಾಡಲು ಅವಕಾಶ ಇರುತ್ತದೆ.  ವಿಮಾ ನೊಂದಣಿಗೆ ನವೆಂಬರ್.15 ಕೊನೆಯ ದಿನಾಂಕವಾಗಿರುತ್ತದೆ. ಬೆಳೆ ಸಾಲ ಪಡೆಯದ ಮತ್ತು ಬೆಳೆ ಸಾಲ ಪಡೆದ ರೈತರು ವಿಮೆ…
ಮಾಲಿನ್ಯ ರಹಿತ ದೀಪಾವಳಿ ಅಚರಣೆ : ಡಿಸಿ  ಶಿಲ್ಪಾ ಶರ್ಮಾ

ನ್ಯೂಸ್‌ ಡೆಸ್ಕ್‌ ಬೀದರ್‌ :   ದೀಪಾವಳಿ ಹಬ್ಬದಲ್ಲಿ ಹಸಿರು ಪಟಾಕಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಪಟಾಕಿಗಳನ್ನು ಮಾರಾಟ ಮಾಡುವುದು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.  ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪಟಾಕಿ ವ್ಯಾಪಾರಸ್ಥರು ಮತ್ತು ಅಂಗಡಿಗಳ ಮಾಲೀಕರೊಂದಿಗೆ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದರು.  ಹಸಿರು ಪಟಾಕಿಗಳನ್ನು ಹೊರತುಪಡಿಸಿ ಬೇರೆ ಪಟಾಕಿಗಳನ್ನು ಬಳಸುವಂತಿಲ್ಲ ಎಂದು…
ಗಾಂಧಿ ಗಂಜ್ ಬ್ಯಾಂಕ್ ನ ಸುವರ್ಣ ಮಹೋತ್ಸವ ಆಚರಣೆ

ಬೀದರ್ ನಗರದ ಸಿಂದೋಲ್ ಕಲ್ಯಾಣ ಮಂಟಪದಲ್ಲಿ ಗಾಂಧಿ ಗಂಜ್ ಬ್ಯಾಂಕ್ ನ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಸಹಕಾರಿ ಬ್ಯಾಂಕುಗಳಿಗೆ ಹನ್ನೆರಡನೇ ಶತಮಾನದ ಬಸವಣ್ಣನವರ ಕಾಯಕ ಮತ್ತು ದಾಸೋಹತತ್ವ ಪ್ರೇರಣೆಯಾಗಬೇಕು.ಬಸವಣ್ಣನವರು ಆರ್ಥಿಕತೆಗೆ ಬಹಳ ಒತ್ತು ಕೊಟ್ಟಿದ್ದರು.…
ಬೀದರ್  ವಿವಿಗೆ ಡಾ ಬಿ ಆರ್ ಅಂಬೇಡ್ಕರ್ ಹೆಸರಿಡುವಂತೆ  ಮನವಿ

ದಲಿತ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಬೀದರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಬೀದರ್ ವಿಶ್ವವಿದ್ಯಾಲಯಕ್ಕೆ ಡಾ. ಬಿ ಆರ್ ಅಂಬೇಡ್ಕರ್ ಹೆಸರಿಡುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಲಿತ ವಿದ್ಯಾರ್ಥಿ ಪರಿಷತ್ ಮುಖಂಡ ಸಂದೀಪ್ ಕಾಂಟೆ, ಜಗತ್ತಿನಲ್ಲಿಯೇ ಹೆಚ್ಚಿನ ವಿದ್ಯಾರ್ಹತೆ ಪಡೆದ ಬಾಬಾ ಸಾಹೇಬರ ಹೆಸರನ್ನು ಬೀದರ್ ವಿಶ್ವವಿದ್ಯಾಲಯಕ್ಕೆ ಇಡಬೇಕು ಇಲ್ಲದಿದ್ದರೆ ನೌಬಾದ್…
ಸಸಿ ನೆಡುವ ಹಾಗೂ ರಾಷ್ಟ್ರಧ್ವಜದ ಮಹತ್ವದ ಕುರಿತು ಕಾರ್ಯಕ್ರಮ ಮಕ್ಕಳಲ್ಲಿ ದೇಶಭಕ್ತ ಮೂಡಿಸಿ : ಶಿವಶರಣಪ್ಪ ವಾಲಿ

ಬೀದರ್ ನಗರದ ಗಾಂಧಿ ಗಂಜ್ ಕೋ ಆಪರೇಟಿವ್ ಬ್ಯಾಂಕ್ ನ ಸುವರ್ಣ ಮಹೋತ್ಸವದ ಅಂಗವಾಗಿ, ಭಾರತ್ ಸೇವಾದಳ ಹಾಗೂ ಗಾಂಧಿ ಗಂಜ್ ಕೋ- ಆಪರೇಟಿವ್ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ಬಸವನಗರ ಉದ್ಯಾನವನದಲ್ಲಿ ಸಸಿ ನೆಡುವ ಕಾರ್ಯ ಹಾಗೂ ರಾಷ್ಟ್ರಧ್ವಜದ ಮಹತ್ವದ ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಹಕಾರ ಸಂಘಗಳ ಉಪ ನಿಬಂಧಕಿ ಮಂಜುಳಾ, ಕರ್ನಾಟಕದ…
ಬ್ರಿಟಿಷರ ನಾಡಿನಲ್ಲಿ ಕನ್ನಡದ ಕಂಪು ಮೊಳಗಿಸಿದ : ಅದೀಶ್‌ ವಾಲಿ

ಊತ್ತರ ಕರ್ನಾಟಕ ನ್ಯೂಸ್‌ ಡೆಸ್ಕ್‌  ಬೀದ‌ರ್ : ಕನ್ನಡ ಎಂದ್ರೆ ಸಾಕು ಇದು ಸ್ಥಳೀಯ ಭಾಷೆ ಮನೆಯಲ್ಲಿ ಬಿಟ್ಟರೆ ಮಾತ್‌ ಯಾವುದಕ್ಕೂ ಕನ್ನಡ ಬೇಕಾಗಿಲ್ಲ ಎನ್ನುವ ಕಾಲವಿದ್ದು ಅದ್ರೆ ಅದೀಶ್‌ ವಾಲಿ ಬ್ರಿಟಿಷ್‌ ನಾಡಿನಲ್ಲಿ ಕನ್ನಡದ ಕಂಪು ವೊಳಗಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ನಮ್ಮ ಕನ್ನಡದ ಹುಡುಗ ಆಧಿಶ್ ರಜನೀಶ್…
ರಕ್ತದಾನ ಶ್ರೇಷ್ಠದಾನ ಶಾಸಕರ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡವರಿಗೆ ಉಚಿತ ರಕ್ತ ದೊರೆಯುವಂತಾಗುವ ನಿಟ್ಟಿನಲ್ಲಿ ರಕ್ತದಾನ ಶಿಬಿರ ಸೆ. 30 ಬೀದರ್ ದಕ್ಷಿಣ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ 50ನೇ ಜನ್ಮದಿನದ ಪ್ರಯುಕ್ತ ಡಾ. ಶೈಲೇಂದ್ರ ಬೆಲ್ದಾಳೆ ಅವರ ಅಭಿಮಾನಿ ಬಳಗದಿಂದ ದಿ. ಸೆ. 30 ರಂದು, ಸ್ಥಳ ಬೆಲ್ದಾಳೆ ಕಲ್ಯಾಣ ಮಂಟಪದಲ್ಲಿ ಬಡ ಜನರಿಗೆ ಉಪಯುಕ್ತವಾಗುವ…
ಬೀದರ್‌ ನ್ಯೂಸ್‌ ರೌಂಡಪ್‌ | ಒಂದೇ ಕ್ಲಿಕ್ ನಲ್ಲಿ ಜಿಲ್ಲೆಯ ಪ್ರಮುಖ ಸುದ್ದಿಗಳು | 21-09-2024

ಬೀದರ್‌ ನ್ಯೂಸ್‌ ರೌಂಡಪ್‌  1.ಕಾರಂಜಾ ಡ್ಯಾಂ ಭರ್ತಿ,ರೈತರು ಹೈರಾಣು ಕಾರಂಜಾ ಡ್ಯಾಂ ಭರ್ತಿಯಾಗಿ ಹಿನ್ನೀರಿನ ನೀರಿನಲ್ಲಿ 30 ಗ್ರಾಮಗಳ ಪ್ರದೇಶ ಜಲಾವೃತವಾಗಿದ್ದು, ಕಬ್ಬು, ತೊಗರಿ, ಸೋಯಾಬಿನ್‌ ಇತರೆ ಬೆಳೆಗಳು ಸಂಪೂರ್ಣ ನೀರು ಪಾಲಾಗಿವೆ. ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಇದುರೆಗೆ ನಯಾಪೈಸೆ ಪರಿಹಾರ ಬಂದಿಲ್ಲ ಎಂದು ರೈತರು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.  2. ಬೀದರ್‌…
ಬೀದರ್ ಕೋಟೆಯ ಮೇಲೆ ಸೆ.21ರಂದು ಏರ್ ಶೋ ಕಾರ್ಯಕ್ರಮ

ಊತ್ತರ ಕರ್ನಾಟಕ ನ್ಯೂಸ್‌ ಡೆಸ್ಕ್‌  ಬೀದ‌ರ್: ಭಾರತೀಯ ವಾಯುಪಡೆ ಬೀದರ್ ವತಿಯಿಂದ ಬೀದರ್ ಕೋಟೆಯ ಮೇಲೆ ಏರ್ ಶೋ ಕಾರ್ಯಕ್ರಮವನ್ನು ಸೇ.‌೨೧ ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸೆ.21ರಂದು ಶನಿವಾರ ಮಧ್ಯಾಹ್ನ 3 ಗಂಟೆಗೆ ನಡೆಯುವ ಈ ಏರ್ ಶೋ ಕಾರ್ಯಕ್ರಮ ಬೀದ‌ರ್ ನಗರದ ಎಲ್ಲಾ ಶಾಲಾ- ಕಾಲೇಜುಗಳ…
ಬಿಜೆಪಿ ಮಂಡಲ ಯುವ ಮೋರ್ಚಾ ವತಿಯಿಂದ  ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ

ಬೀದರ್ ದಕ್ಷಿಣ ಕ್ಷೇತ್ರದ ಮನ್ನಾಏಖೇಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ  ಪ್ರಧಾನಿ ಸನ್ಮಾನ್ಯ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಬಿಜೆಪಿ ಮಂಡಲ ಯುವ ಮೋರ್ಚಾ ವತಿಯಿಂದ ಏರ್ಪಡಿಸಿದ್ದ  ಹಣ್ಣು ಹಂಪಲು ವಿತರಣೆ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು.     ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಸಹ ಉಸ್ತುವಾರಿ ಸುಧಾಕರ ರೆಡ್ಡಿ, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ…