Category: ರಾಜ್ಯ
ಬೆಂಗಳೂರು: ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ನೀಡಿದ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ಹೈಕೋರ್ಟ್, ಇದೀಗ ಮತ್ತೆ ಮುಂದೂಡಿಕೆ ಮಾಡಿದ್ದು, ಸೆ. 09ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದೆ. ಶನಿವಾರ (ಆ.31) ಸುದೀರ್ಘ ವಿಚಾರಣೆಯ ಬಳಿಕ ಅರ್ಜಿ ವಿಚಾರಣೆಯನ್ನು ಕೋರ್ಟ್ ಸೆಪ್ಟಂಬರ್ 02ಕ್ಕೆ ಮುಂದೂಡಿತು.…
ಸೋಮವಾರ(ಸೆ.2) ನಟ ಸುದೀಪ್ ಅವರ 51ನೇ ಜನ್ಮದಿನ. ಈ ವರ್ಷ ಬೆಂಗಳೂರಿನ ಜಯನಗರದಲ್ಲಿರುವ ಎಂಇಎಸ್ ಮೈದಾನದಲ್ಲಿ ತಮ್ಮ ಜನ್ಮದಿನವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳಲು ಸುದೀಪ್ ನಿರ್ಧರಿಸಿದ್ದಾರೆ. ತಮ್ಮ ಮನೆಯ ಬಳಿ ಜನ್ಮದಿನದ ಆಚರಣೆಗೆ ಅವಕಾಶ ಇಲ್ಲ ಎಂದು ಸುದೀಪ್ ಶನಿವಾರ(ಆ.31) ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಳೆದ ವರ್ಷ ಅಭಿಮಾನಿಗಳ ಸಮ್ಮುಖದಲ್ಲಿ ಪ್ರಿಯಾ ಹಾಗೂ ಸುದೀಪ್ ಅವರ ಸ್ನೇಹಿತರು ನಂದಿ ಲಿಂಕ್ಸ್…
ಕಲಬುರ್ಗಿ: ಜಿಲ್ಲೆಯಲ್ಲಿ ಕುಖ್ಯಾತ ದರೋಡೆಕೋರನ ಮೇಲೆ ಪೊಲೀಸರು ಫೈರಿಂಗ್ ಮಾಡಿ, ಆರೋಪಿಯನ್ನು ಬಂಧಿಸಿರುವಂತ ಘಟನೆ ಕಲಬುರ್ಗಿ ಉಪನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಲಬುರ್ಗಿ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಕುಖ್ಯಾತ ದರೋಡೆಕೋರ ಅವತಾರ್ ಸಿಂಗ್ ಎಂಬಾತನನ್ನು ಬಂದಿಸೋದಕ್ಕೆ ಕಲಬುರ್ಗಿ ಸಬ್ ಅರ್ಬನ್ ಠಾಣೆಯ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಗಳು ತೆರಳಿದ್ದಾರೆ. ಪೊಲೀಸರು ಬಂಧಿಸೋದಕ್ಕೆ ಬಂದಿರುವಂತ ವಿಷಯ ತಿಳಿದಂತ…
ಕಲಬುರಗಿ: ಜಿಲ್ಲೆಯಾದ್ಯಂತ ಸತತ ಎರಡನೇ ದಿನವಾದ ಭಾನುವಾರವೂ ಭಾರಿ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಚಂದ್ರಂಪಳ್ಳಿ, ಬೆಣ್ಣೆತೊರಾ ಜಲಾಶಯಗಳಿಂದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಕಾಳಗಿ ಪಟ್ಟಣದಲ್ಲಿ ರೌದ್ರಾವತಿ ನದಿ ಉಕ್ಕಿ ಹರಿಯುತ್ತಿದ್ದು, ನದಿ ಪಕ್ಕದ ನೀಲಕಂಠೇಶ್ವರ ದೇವಸ್ಥಾನದಲ್ಲಿ ನೀರು ನುಗ್ಗಿದೆ. ಇದರಿಂದ ದೈನಂದಿನ ಪೂಜೆ ಪುರಸ್ಕಾರ ಕಾರ್ಯಗಳಲ್ಲಿ ವ್ಯತ್ಯಯವಾಗಿದೆ. ಕಲಬುರಗಿ ನಗರದಲ್ಲಿ ರಾತ್ರಿಯಿಂದಲೇ ಮಳೆ ಸುರಿಯುತ್ತಿರುವುದರಿಂದ ಜನಜೀವನ…
ಕಲಬುರಗಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಯಮ ಉಲ್ಲಂಘಿಸಿ ವಿಶೇಷ ಆತಿಥ್ಯ ಪಡೆದಿದ್ದ ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಅವರ ಮ್ಯಾನೇಜರ್ ನಾಗರಾಜ್‌ನನ್ನು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಶನಿವಾರ ಕರೆ ತರಲಾಯಿತು. ಪ್ರಕರಣದಲ್ಲಿ 11ನೇ ಆರೋಪಿ ಯಾಗಿದ್ದು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಸಿಎಆರ್ ಪೊಲೀಸರು ಭದ್ರತೆಯಲ್ಲಿ ಕರೆ ತಂದರು. ಮತ್ತೊಬ್ಬ…
ರಾಜ್ಯಪಾಲರು ತಮ್ಮ ಮುಂದೆ ಬಾಕಿ ಇರುವ ಇತರ ಪ್ರಕರಣಗಳಲ್ಲೂ ವಿಚಾರಣೆಗೆ ಅನುಮತಿ ನೀಡುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷ ಶನಿವಾರ ‘ರಾಜಭವನ ಚಲೋ’ ನಡೆಸಿತು. ಆ ಮೂಲಕ ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ ಸಂದರ್ಭದಲ್ಲಿ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷವು ರಾಜಭವನದ ವಿರುದ್ಧ ಮತ್ತೊಂದು ಸುತ್ತಿನ ಸಂಘರ್ಷ ನಡೆಸಿದೆ.…
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 16ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ. ಅರವಿಂದ ಪನಗಾರಿಯ ಹಾಗೂ ಸದಸ್ಯರೊಂದಿಗೆ ಸಭೆ ನಡೆಸಿ 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿದ್ದಾರೆ. ಸಚಿವ ಸಂಪುಟದ ಸದಸ್ಯರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಸರ್ಕಾರದ ಹಿರಿಯ…
ಜೈಲಿನಲ್ಲಿ ರಾಜಾತಿಥ್ಯ ಅನುಭವಿಸಿದ ನಟ ದರ್ಶನ್ ನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದ್ದು, ದರ್ಶನ್ ನನ್ನು ಕರೆದೊಯ್ದಿದ್ದ ಪೊಲೀಸ್ ಪಡೆ ಜೈಲು ತಲುಪಿದೆ. ದರ್ಶನ್ ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಬಳಿಕ ಬ್ಯಾರೆಕ್ ಗೆ ಕರೆದೊಯ್ಯಲಾಗುತ್ತದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಗರೇಟು ಸೇವನೆ, ಟೀ ಸೇವನೆ ಸೇರಿದಂತೆ ವಿಡಿಯೋ ಕಾಲ್ ಮಾಡುತ್ತಾ ಐಷಾರಾಮಿ ವೈಭೋಗ ಅನುಭವಿಸುತ್ತಿದ್ದ ದರ್ಶನ್…
ಅಪಾಯಕಾರಿ ಭೂಗತ ಅಪರಾಧಿಗಳೊಂದಿಗೆ ನಟ ದರ್ಶನ್ ಒಡನಾಟ ಹೊಂದಿದ್ದಾರೆ ಎಂದು ನಟ ಚೇತನ್ ಅಹಿಂಸ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ರೌಡಿಗಳೊಂದಿಗಿನ ದರ್ಶನ್ರ ಚಿತ್ರವನ್ನು ಸಮರ್ಥಿಸಿಕೊಂಡ ಸುಮಲತಾ ‘ಕ್ರಿಮಿನಲ್ಸ್ ಹೊರತುಪಡಿಸಿ ಬೇರೆ ಯಾರು ಜೈಲಿನಲ್ಲಿದ್ದಾರೆ’ ಎಂದು ಹೇಳಿದ್ದಾರೆ. ಸೆರೆವಾಸಕ್ಕೊಳಗಾದವರ ಅಪರಾಧಗಳಲ್ಲಿ ಕಾನೂನುಬಾಹಿರತೆ ಮತ್ತು…
ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಆರೋಪದ ಮೇಲೆ ಏಳು ಮಂದಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಜೈಲರ್ ಶರಣಬಸಪ್ಪ ಅಮೀನ್ ಗಢ, ಪ್ರಭು ಎಸ್ , ಅಸಿಸ್ಟೆಂಟ್ ಜೈಲರ್ ತಿಪ್ಪೆಸ್ವಾಮಿ, ಶ್ರೀಕಾಂತ್, ಹೆಡ್ ವಾರ್ಡರ್ ವೆಂಕಪ್ಪ ಕುರ್ತಿ , ಸಂಪತ್ ಕುಮಾರ್, ವಾರ್ಡರ್ ಬಸಪ್ಪ ತೇಲಿ ಅಮಾನತಿಗೊಳಗಾದ ಅಧಿಕಾರಿಗಳಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ…