Category: ರಾಜ್ಯ
ಕನ್ನಡದ ಖ್ಯಾತ ಚಿತ್ರ ನಿರ್ದೇಶಕ ಗುರು ಪ್ರಸಾದ್ (52) ಆತ್ಮಹತ್ಯೆ ನಿಜಕ್ಕೂ ಆಘಾತಕಾರಿಯಾಗಿದೆ. ಮಠ, ಏದ್ದೇಳು ಮಂಜುನಾಥ್ ಮತ್ತಿತರ ಸೂಪರ್ ಹಿಟ್ ಚಿತ್ರಗಳ ಪ್ರತಿಭಾವಂತ ನಿರ್ದೇಶಕರಾಗಿದ್ದ ಗುರು ಪ್ರಸಾದ್ ಆತ್ಮಹತ್ಯೆಗೆ ಸಾಲವೇ ಕಾರಣ ಎನ್ನಲಾಗಿದೆ. ನವೆಂಬರ್ 2 ಅವರ ಹುಟ್ಟುಹಬ್ಬವಿತ್ತು. ಆದರೆ, 3-4ದಿನಗಳ ಹಿಂದೆಯೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಕೊಳತೆ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.…
ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಬಿಜೆಪಿಯು ಸೋಮವಾರ ರಾಜ್ಯಾದಾದ್ಯಂತ ಪ್ರತಿಭಟನೆ ನಡೆಸಲಿದೆ. ವಕ್ಫ್ ಆಸ್ತಿ ಕುರಿತ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕು, ಅಧಿಕಾರ ದುರ್ಬಳಕೆ ಕುರಿತು ಸಿಬಿಐ ತನಿಖೆ ನಡೆಸಬೇಕು ಮತ್ತು ವಿವಾದಕ್ಕೆ ಕಾರಣವಾದ ಸಚಿವ ಜಮೀರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂಬ ಆಗ್ರಹಗಳನ್ನು ಮುಂದಿಟ್ಟುಕೊಂಡು ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ತಾಲೂಕುಗಳ ತಾಲೂಕು ಕಚೇರಿ…
ಸಾರಿಗೆ ಬಸ್ ಚಾಲಕರೊಬ್ಬರು ರಾಜ್ಯೋತ್ಸವ ಹಿನ್ನಲೆ ಸರ್ಕಾರಿ ಬಸ್’ನ್ನು ಸಂಪುರ್ಣವಾಗಿ ಕನ್ನಡಮವಾಗಿಸುವ ಮೂಲಕ ಗಮನ ಸೆಳೆದಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಬಸ್ ಡಿಪೋ ಚಾಲಕ ನಾಗಪ್ಪ ಉಪ್ಪಿನ್ ಎಂಬುವವರು ತಮ್ಮ ಸ್ವಂತ ದುಡ್ಡಲ್ಲಿ ಬಸ್ ಗೆ ಸುಂದರವಾಗಿ ಅಲಂಕಾರ ಮಾಡಿದ್ದಾರೆ. ಸರ್ಕಾರಿ ಬಸ್ ಗೆ ಕನ್ನಡದ ಬಾವುಟ ಕಟ್ಟಿ, ಕೆಂಪು-ಅರಿಶೀಣದ ಬಲೂನ್’ಗಳಿಂದ ಶೃಂಗಾರ ಮಾಡಿದಲ್ಲದೆ,…
ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪ್ರತಿಷ್ಠೆ ಪಾಲಿಟಿಕ್ಸ್ ನಡೆಯುತ್ತಲೇ ಇದೆ. ಕಾಂಗ್ರೆಸ್ ಯೋಜನೆ ಹಾಗೂ ಭರವಸೆಗಳ ವಿರುದ್ಧ ಪಿಎಂ ಮೋದಿ ಆಗಾಗ್ಗೆ ಟ್ವೀಟಾಸ್ತ್ರ ಪ್ರಯೋಗ ಮಾಡುತ್ತಲೇ ಇರ್ತಾರೆ. ಎರಡು ಪಕ್ಷಗಳ ನಡುವಿನ ಬಹಿರಂಗ ಕಿತ್ತಾಟದ ಸಮರ ಈಗ ಮತ್ತೊಮ್ಮೆ ಸುದ್ದಿಯಾಗುತ್ತಿದೆ. ಕಾಂಗ್ರೆಸ್ ಗ್ಯಾರಂಟಿ ಜಾರಿ ಬಗ್ಗೆ ಆರಂಭದಿಂದಲೂ ಕಾಲೆಳೆಯುತ್ತ ಬಂದಿರುವ ಬಿಜೆಪಿ, ಬಹಿರಂಗವಾಗಿ ಸಾಕಷ್ಟು ಬಾರಿ…
69ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಯಿ ಭುವನೇಶ್ವರಿಗೆ ಪುಷ್ಪ ನಮನ ಸಲ್ಲಿಸಿ, ರಾಷ್ಟ್ರ ಧ್ವಜ ಹಾಗೂ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಬಳಿಕ ವಿವಿಧ ಕನ್ನಡ ನಾಡಿನ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ…
ಎಷ್ಟೇ ಕತ್ತಲಿದ್ದರೂ ಸಹ ಒಂದು ಪುಟ್ಟ ಹಣತೆ ಅದನ್ನು ನಾಶಪಡಿಸಬಲ್ಲದು. ಅದರರ್ಥ ಬೆಳಕಿನ ಎದುರು ಎಂದಿಗೂ ಕತ್ತಲೆ ಸರಿಸಾಟಿಯಲ್ಲ. ಸತ್ಯದ ಎದುರು ಸುಳ್ಳು ನಿಲ್ಲಲಾರದು. ಒಳಿತಿನ ಎದುರು ಕೆಡುಕು ಹೋರಾಡಲಾರದು. ಪ್ರಾಮಾಣಿಕತೆಯ ಎದುರು ಸತ್ಯನಿಷ್ಠೂರತೆ ಹಾಗೂ ಅರಿವಿನ ಎದುರು ಮೌಢ್ಯವು ನಿಲ್ಲಲಾರದು. ಇವೆಲ್ಲವನ್ನೂ ಹೊಳೆಯಿಸುವುದು ಈ ದೀಪಾವಳಿ ಹಬ್ಬ. ನವಸಮಾಜದ ಎಲ್ಲಾ ಓದುಗರಿಗೂ ಸಹ ನಮ್ಮ…
ನೂರಾರು ಮರ ಕಡಿದ ‘ಟಾಕ್ಸಿಕ್‘ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದ್ದು, ಕಾನೂನು ಕ್ರಮಕ್ಕೆ ಸಚಿವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ. ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ‘ಟಾಕ್ಸಿಕ್’ ಎಂಬ ಚಲನಚಿತ್ರದ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾನಿಗೊಳಿಸಿರುವ ವಿಚಾರ ಗಂಭೀರ ಚಿಂತೆ ಮೂಡಿಸಿದೆ. ಸ್ಯಾಟೆಲೈಟ್ ಚಿತ್ರಗಳಿಂದ ಈ ಅಕ್ರಮ ಕೃತ್ಯವು ಸ್ಪಷ್ಟವಾಗಿ ಕಾಣುತ್ತಿದ್ದು,…
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಗೆ ಹೈಕೋರ್ಟ್ ಇಂದು (ಅ.30) ಮಧ್ಯಂತರ ಜಾಮೀನು ನೀಡಿದೆ. ಅನಾರೋಗ್ಯದ ಆಧಾರದ ಮೇಲೆ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದ್ದು, 131 ದಿನಗಳ ಬಳಿಕ ದರ್ಶನ್ ಜೈಲಿನಿಂದ ಹೊರಬರಲಿದ್ದಾರೆ. ಇಷ್ಟು ದಿನ ಕತ್ತಲೆ ಕೋಣೆಯಲ್ಲಿದ್ದ ದರ್ಶನ್ ಬಾಳಲ್ಲಿ…
ಕಲಬುರಗಿ ತಾಲೂಕಿನ ಫರತಾಬಾದ್ ಗ್ರಾಮದಲ್ಲಿನ ಬೆಳೆಹಾನಿ ಪ್ರದೇಶಗಳಿಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಲಬುರಗಿ ಪ್ರವಾಸದಲ್ಲಿರುವ ಛಲವಾದಿ ನಾರಾಯಣ ಸ್ವಾಮಿ ಅವರು, ಕಲಬುರಗಿ ಜಿಲ್ಲೆಯ ಫರತಾಬಾದ್ ಸೇರಿದಂತೆ ವಿವಿಧೆಡೆ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ರೈತರೊಂದಿಗೆ ಚರ್ಚಿಸಿ ಬೆಳೆ…
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸೈಯದ್ ಅಜೀಂಪೀರ್ ಖಾದ್ರಿ ಅವರೊಂದಿಗೆ ಬುಧವಾರ ಬೆಂಗಳೂರಿನಿಂದ ಅವರ ಹುಟ್ಟೂರಾದ ಶಿಗ್ಗಾಂವ್‌ಗೆ ತೆರಳಿ ನಾಮಪತ್ರ ಹಿಂಪಡೆಯುವಂತೆ ಮನವೊಲಿಸುವ ಸಾಧ್ಯತೆಯಿದೆ. ಕಾಂಗ್ರೆಸ್ ಪಕ್ಷವು ಯಾಸಿರ್ ಅಹಮದ್ ಖಾನ್ ಅವರಿಗೆ ಉಪಚುನಾವಣೆ ಟಿಕೆಟ್ ನೀಡಿದ್ದರಿಂದ ಅಸಮಾಧಾನಗೊಂಡ ಖಾದ್ರಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಖಾದ್ರಿ…