Category: ರಾಷ್ಟ್ರ
ಮಂಗಳವಾರ ಐಸಿಸಿ, ಭಾರತದ ಕ್ರಿಕೆಟ್ ಅಭಿಮಾನಿಗಳು ಖುಷಿ ಪಡುವ ಸುದ್ದಿಯನ್ನು ನೀಡಿದೆ. ಐಸಿಸಿ ನೂತನ ಅಧ್ಯಕರಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ಕಿರಿಯ ಅಧ್ಯಕ್ಷ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಐಸಿಸಿ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ ಐದನೇ ಭಾರತೀಯ ಎಂಬ ಹಿರಿಮೆ ಸಹ ಇವರದ್ದಾಗಿದೆ. ಐಸಿಸಿ ಅಧ್ಯಕ್ಷರ ಹುದ್ದೆಗೆ ಏರಲು…
ಹಿರಿಯ ಐಪಿಎಸ್ ಅಧಿಕಾರಿ ಬಿ. ಶ್ರೀನಿವಾಸನ್ ಅವರನ್ನು ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) ಮುಖ್ಯಸ್ಥರನ್ನಾಗಿ ಮಂಗಳವಾರ ನೇಮಿಸಲಾಗಿದೆ. ಶ್ರೀನಿವಾಸನ್ ಅವರು ಬಿಹಾರ ಕೆಡರ್ ನ 1992ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದಾರೆ. ‘ಶ್ರೀನಿವಾಸನ್ ಅವರನ್ನು ಎನ್‌ಎಸ್‌ಜಿ ಮಹಾ ನಿರ್ದೇಶಕರನ್ನಾಗಿ ನೇಮಿಸಲು ಕೇಂದ್ರ ಸಚಿವ ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ. ಅವರ ಅಧಿಕಾರ ಅವಧಿಯು 2027ರ ಆಗಸ್ಟ್…
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿವಾಹ ಕುರಿತ ಪ್ರಶ್ನೆ ಮತ್ತೆ ಮತ್ತೆ ಎದುರಾಗುತ್ತಲೇ ಇದೆ. ಈ ಬಾರಿ ಕಾಶ್ಮಿರದ ವಿದ್ಯಾರ್ಥಿನಿಯರು 54 ವರ್ಷದ ರಾಹುಲ್ ಅವರನ್ನು ಈ ಪ್ರಶ್ನೆ ಕೇಳಿದ್ದಾರೆ. ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದ ತುಣುಕು ಯುಟ್ಯೂಬ್ ಮೂಲಕ ಪ್ರಸಾರಗೊಂಡಿದೆ. ವಿದ್ಯಾರ್ಥಿನಿಯರ ಇಕ್ಕಟ್ಟಿನ ಪ್ರಶ್ನೆಗೆ ಉತ್ತರಿಸಿದ ರಾಹುಲ್, ‘ಮದುವೆಯಾಗು ಎಂಬ ಒತ್ತಡವನ್ನು…
ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ ದೇಶೀಯ, ಅಂತಾರಾಷ್ಟ್ರೀಯ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್ ಪಂದ್ಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. 38 ವರ್ಷದ ಶಿಖರ್ ಧವನ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ತಂಡದಲ್ಲಿ ಅವರು ಸ್ಥಾನ ಪಡೆದಿರಲಿಲ್ಲ. ನಾನು ನನ್ನ ಕ್ರಿಕೆಟ್ ಅಧ್ಯಾಯವನ್ನು ಕೊನೆಗೊಳಿಸುತ್ತಿದ್ದೇನೆ. ಅಸಂಖ್ಯಾತ ನೆನಪುಗಳು…
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರ್ ನಲ್ಲಿ ತೀವ್ರ ಪ್ರತಿಭಟನೆ ನಡೆಸಿ ರೈಲು ನಿಲ್ದಾಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿ ರೈಲು ಸಂಚಾರ ತಡೆದು ಕಲ್ಲು ತೂರಾಟಕ್ಕೆ ಕಾರಣವಾಗಿದ್ದ ಖಾಸಗಿ ಶಾಲೆಯ ನರ್ಸರಿ ತರಗತಿಯ 4 ವರ್ಷದ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದ ಮರುದಿನವಾದ ಇಂದು ಬುಧವಾರ ಪರಿಸ್ಥಿತಿ ಸಹಜತೆಗೆ ಮರಳುತ್ತಿದೆ. ಯಾವುದೇ…
ಇಂದು ಆಗಸ್ಟ್ 20, ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 80ನೇ ವರ್ಷದ ಜಯಂತಿ. ಈ ಸಂದರ್ಭದಲ್ಲಿ ಅವರ ಪುತ್ರ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ದೆಹಲಿಯ ವೀರ ಭೂಮಿಯಲ್ಲಿರುವ ಅವರ ಸಮಾಧಿ ಸ್ಥಳಕ್ಕೆ ತೆರಳಿ ಗೌರವ ನಮನ ಸಲ್ಲಿಸಿದರು. ಇಂದು ದೆಹಲಿಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದರೂ ಅದನ್ನು…
ವಿಶ್ವ ಆನೆ ದಿನವು ಆನೆಗಳನ್ನು ರಕ್ಷಿಸಲು ಸಮುದಾಯದ ವ್ಯಾಪಕ ಪ್ರಯತ್ನಗಳನ್ನು ಪ್ರಶಂಸಿಸಲು ಒಂದು ಸಂದರ್ಭವಾಗಿದೆ. ಅದೇ ಸಮಯದಲ್ಲಿ, ಆನೆಗಳು ಅಭಿವೃದ್ಧಿ ಹೊಂದಲು ಅನುಕೂಲಕರವಾದ ಆವಾಸಸ್ಥಾನವನ್ನು ಪಡೆಯಲು ಸಾಧ್ಯವಿರುವ ಎಲ್ಲವನ್ನೂ ಮಾಡುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ. ಭಾರತದಲ್ಲಿ ನಮಗೆ, ಆನೆಯು ನಮ್ಮ ಸಂಸ್ಕೃತಿ ಮತ್ತು ಇತಿಹಾಸಕ್ಕೂ ಸಂಬಂಧ ಹೊಂದಿದೆ. ಮತ್ತು ಕಳೆದ ಕೆಲವು ವರ್ಷಗಳಿಂದ, ಅವರ…
ಹರ್ ಘರ್ ತಿರಂಗ’ ಅಭಿಯಾನ, ಭಾರತದ ಇಲ್ಲಾ ಜನರು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬೇಕು ಹಾಗೂ ರಾಷ್ಟ್ರಧ್ವಜದ ಜೊತಗೆ ಸೆಲ್ಫಿ ತೆಗೆದುಕೊಂಡು, ಆ ಫೋಟೋವನ್ನು ‘ಹರ್ ಘರ್ ತಿರಂಗ’ (harghartiranga.com) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಹರ್ ಘರ್ ತಿರಂಗಾ…
ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ದ್ರಾಸ್ ನಗರದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ, ನಂತರ ಭಾ಼ಷಣ ಮಾಡಿದ ನರೇಂದ್ರ ಮೋದಿ ನಾನಿಲ್ಲಿ ನಿಂತು ಮಾತನಾಡುತ್ತಿರುವ ನೆಲದಿಂದ ಉಗ್ರ ಪೋಷಕರು ನೇರವಾಗಿ ನನ್ನ ಮಾತು ಕೇಳಿಸಿಕೊಳ್ಳಬಲ್ಲರು ಎಂದ ಪ್ರಧಾನಿ ಮೋದಿ, ಉಗ್ರವಾದ ಹಾಗೂ ಸುಳ್ಳನ್ನು ಸತ್ಯ ಎಂದಿಗೂ ಸೋಲಿಸುತ್ತದೆ ಎಂದು…
ಈ ವರ್ಷ ಅಧಿಕಾರಕ್ಕೆ ಬಂದ ತೆಲಂಗಾಣದ ಕಾಂಗ್ರೆಸ್ ಸರ್ಕಾರ, ತನ್ನ ಮೊದಲ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದೆ. 2024- 25ನೇ ಸಾಲಿನ 2.91 ಲಕ್ಷ ಕೋಟಿ ರೂ ಗಾತ್ರದ ಬಜೆಟ್‌ನಲ್ಲಿ ಆರು ಗ್ಯಾರಂಟಿ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ತೆಲಂಗಾಣ ಉಪ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಮಲ್ಲುಭಟ್ಟಿ ವಿಕ್ರಮಾರ್ಕ ಅವರು ಬಜೆಟ್ ಮಂಡನೆ ಮಾಡಿದರು. ಗ್ಯಾರಂಟಿ…