Category: ನ್ಯೂಸ್

ಎತ್ತಿನಹೊಳೆ ಯೋಜನೆ ಹಂತ-1 ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಇಂದು ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗಯ ಮೊದಲನೇ ಹಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ   ಉದ್ಘಾಟನೆ ಮಾಡಿದ್ದರು. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಬೈಕೆರೆ ದೊಡ್ಡನಗರದ ಪಂಪ್ ಹೌ‌ಸ್‌ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್​, ಉಸ್ತುವರಿ ಸಚಿವ ಕೆ.ಎನ್. ರಾಜಣ್ಣ ಹಾಗೂ ಸಚಿವರ ಸಮ್ಮುಖದಲ್ಲಿ ಸಿಎಂ ಯೋಜನೆಯನ್ನು ಉದ್ಘಾಟನೆಯ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ ಈ ಯೋಜನೆಯಿಂದ…
ನಾವು ಮಾಡಿರುವ ಕೆಲಸಗಳು ಶಾಶ್ವತವಾಗಿ ಇರುತ್ತೆ : ಡಿ.ಕೆ. ಶಿವಕುಮಾರ್

ಟೀಕೆಗಳು ಸಾಯುತ್ತವೆ, ನಾವು ಮಾಡಿರುವ ಕೆಲಸಗಳು ಶಾಶ್ವತವಾಗಿ ಉಳಿಯುತ್ತದೆ ಎಂದು ನಾನು ಅನುಕೊಂಡಿದ್ದೇನೆ. ಈ ಯೋಜನೆ ಬಗ್ಗೆ ಟೀಕೆ ಮಾಡಿದವರಿಗೆ ಮಾಧ್ಯಮಗಳ ಕ್ಯಾಮೆರಾಗಳೇ ಉತ್ತರ ನೀಡುತ್ತದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ಸಕಲೇಶಪುರದ ದೊಡ್ಡನಗರದ ಬಳಿ  ಮಾತನಾಡಿದ  ಶಿವಕುಮಾರ್ ಅವರು, ಕರ್ನಾಟಕ ರಾಜ್ಯ ಇತಿಹಾಸದಲ್ಲಿ ಈ ಘಳಿಗೆಯಲ್ಲಿ ಒಂದು ವಿಶಿಷ್ಟ ಮೈಲಿಗಲ್ಲು ಸ್ಥಾಪನೆಯಾಗುತ್ತಿದೆ ಎಂದು…
ರಾಜ್ಯಾದ್ಯಂತ ಪ್ರಜಾಪ್ರಭುತ್ವಕ್ಕಾಗಿ ಮಾನವ ಸರಪಳಿ

 “ಪ್ರಜಾಪ್ರಭುತ್ವಕ್ಕಾಗಿ ಕರ್ನಾಟಕದಲ್ಲಿ ಮಾನವ ಸರಪಳಿ” ಎಂಬ ಧ್ಯೇಯ ವಾಕ್ಯದೊಂದಿಗೆ ಸೆ. 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ಸಂಬಂಧ ಮೈಸೂರು ಜಿಲ್ಲೆಯಾದ್ಯಂತ 60 ಕಿ.ಮೀ. ಮಾನವ ಸರಪಳಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಜಿಲ್ಲೆಯ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಾರ್ವಜನಿಕರು ಕೈಜೋಡಿಸಬೇಕು ಎಂದು ಮೈಸೂರು ಜಿಲ್ಲಾಧಿಕಾರಿಗಳಾದ ಜಿ ಲಕ್ಷೀಕಾಂತ ರೆಡ್ಡಿ ಅವರು ಹೇಳಿದರು.…
ವಿಐಎಸ್‍ಎಲ್ ಕಾರ್ಖಾನೆ ಪುನರುಜ್ಜೀವನಕ್ಕೆ 15 ಸಾವಿರ ಕೋಟಿ ರೂ. ಅಗತ್ಯ : ಸಚಿವ ಕುಮಾರಸ್ವಾಮಿ

ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಕಷ್ಟವಾದರೂ ಉಳಿಸುತ್ತೇನೆ. ಕಾರ್ಮಿಕರ ಹಿತದೃಷ್ಟಿಯಿಂದ ಮತ್ತು ವಿಶ್ವೇಶ್ವರಯ್ಯನವರ ಹೆಸರು ಉಳಿಸಲು ವಿಐಎಸ್‍ಎಲ್ ಪುನರುಜ್ಜೀವನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನುಡಿದರು. ಶಿವಮೊಗ್ಗನಗರದಲ್ಲಿ  ಮಾತನಾಡಿದ ಅವರು ಈ ಹಿಂದೆ ವಿಐಎಸ್‌ಎಲ್ ಮುಚ್ಚಬೇಕೆಂಬ ತೀರ್ಮಾನಕ್ಕೆ ಬರಲಾಗಿತ್ತು. ಸಾವಿರಾರು ಕುಟುಂಬಗಳಿಗೆ ಕಾರ್ಖಾನೆ ಅನ್ನ ಕೊಟ್ಟಿದೆ. ಅದನ್ನು…
ಗೋ ಮಾತೆ ನಂಬಿದವರಿಗೆ ಯಾವುದೇ ಕಷ್ಟ ಬರಲ್ಲ: ವೀರೇಂದ್ರ ಹೆಗ್ಗಡೆ

ಗೋ ಮಾತೆ ನಂಬಿದವರಿಗೆ ಎಂದೂ ಯಾವುದೇ ಕಷ್ಟ ಬರಲ್ಲ. ಹೈನುಗಾರಿಕೆಯಿಂದ ಆರ್ಥಿಕವಾಗಿ ಸದೃಢರಾಗಿ ಒಳ್ಳಯ  ಜೀವನ ಸಾಗಿಸಬಹುದು’ ಎಂದು ರಾಜ್ಯಸಭೆ ಸದಸ್ಯ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದರು. ಕಲಬುರಗಿ, ಬೀದರ್‌ ಮತ್ತು ಯಾದಗಿರಿ ಜಿಲ್ಲಾ ಹಾಲು ಒಕ್ಕೂಟ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ ಸಹಯೋಗದಲ್ಲಿ ನಗರದ…
ಕೆಂಪಣ್ಣ ಆಯೋಗದ ವರದಿ ಬಗ್ಗೆ ಸಂಪುಟದಲ್ಲಿ ಚರ್ಚೆ ಆಗಲ: ಕುಮಾರಸ್ವಾಮಿ

ಕೋವಿಡ್ ಹಗರಣದ ತನಿಖಾ ವರದಿ ಸಚಿವ ಸಂಪುಟದಲ್ಲಿ ಚರ್ಚೆಗೆ ಬರಲಿದೆ ಎಂಬ ಬಗ್ಗೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​ನವರು ಕೆಂಪಣ್ಣ ಆಯೋಗದ ವರದಿಯನ್ನು ಯಾಕೆ ಬಿಟ್ಟಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.  ಮುಡಾ ಹಿಂದಿನ ಆಯುಕ್ತ ದಿನೇಶ್​ ಕುಮಾರ್ ಅಮಾನತು ವಿಚಾರವಾಗಿ ಪ್ರತಿಕ್ರಿಯಿಸಿ, ಹೈಕೋರ್ಟ್​​ನಲ್ಲಿ ಈ ಪ್ರಕರಣದ…
ಸಾರಿಗೆ ಬಸ್​ ಮತ್ತು ಶಾಲಾ ಬಸ್​ ನಡುವೆ ಭೀಕರ ಅಪಘಾತ : ಇಬ್ಬರು ವಿದ್ಯಾರ್ಥಿಗಳು ಸ್ಥಳದಲೇ ಸಾವು

ಸಾರಿಗೆ ಬಸ್​ ಮತ್ತು ಶಾಲಾ ಬಸ್​ ನಡುವೆ ಭೀಕರ ಅಪಘಾತ ಭೀಕರ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವು, ಕೈಕಾಲು ಛಿದ್ರಗೊಂಡ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ನಡೆದಿದೆ. ಈ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.  ಇನ್ನುಗಂಭೀರ ಗಾಯಗೊಂಡ ಮಕ್ಕಳನ್ನು ರಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ. ಇನ್ನು ಕೆಲವರ…
ಹೆಣ್ಣುಮಗುವಿನ ಹತ್ಯೆ ಮಾಡಿದ ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗಬೇಕು

ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಗ್ರಾಮದ ಭಾಗ್ಯಶ್ರೀ ಎಂಬ ಯುವತಿಯನ್ನ ಭೀಕರವಾಗಿ ಕೊಲೆಮಾಡಿ ಮುಳ್ಳು ಕಂಟಿಯಲ್ಲಿ ಶವ ಬಿಸಾಡಿ ಹೋಗಿರುವ ಅಪರಾಧಿಗಳಿಗೆ ಕಾನೂನಿನ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಬೀದರ್ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಲಾಯಿತು. ಆ ಹೆಣ್ಣುಮಗುವಿನ ಹತ್ಯೆ ಮಾಡಿರುವ ಕೊಲೆಗಾರನಿಗೆ ಕಾನೂನಿನ ಯಾವುದೇ ಭಯವೂ ಇಲ್ಲದೆ ರಾಜಾರೋಷವಾಗಿ…
ಕೆ ಸುಧಾಕರ್‌ಗೆ ಕೋವಿಡ್‌ ಅಕ್ರಮ ಸಂಕಷ್ಟ

ಹಲವರ ಸಾವು ನೋವಿಗೆ ಕಾರಣವಾಗಿದ್ದ ಕೋವಿಡ್ 19 ನಿರ್ವಹಣೆಯಲ್ಲಿ ನಡೆದ ಅಕ್ರಮ ಆರೋಪ ಇದೀಗ ಮಾಜಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ ಗೆ ಉರುಳಾಗುವ ಸಾಧ್ಯತೆ ಇದೆ. ಕೋವಿಡ್‌ ಅಕ್ರಮಗಳ ಬಗ್ಗೆ ಮಧ್ಯಂತರ ವರದಿಯನ್ನು ಸಂಪುಟದ ಮುಂದೆ ಮಂಡಿಸುವ ಸಾಧ್ಯತೆ ಇದೆ. ಕೋವಿಡ್‌ 19 ನಿರ್ವಹಣೆಗಾಗಿ ಖರೀದಿ ಮಾಡಿದ್ದ ಕಿಟ್‌ಗಳು ಹಾಗೂ ಉಪಕರಣಗಳಲ್ಲಿ ಅಕ್ರಮ…
ಸತೀಶ್‌ ಜಾರಕಿಹೊಳಿ ಸಿಎಂ ಆದ್ರೆ  ನಮ್ಮ ಕಡೆಯಿಂದ ಫುಲ್‌ ಸಪೋರ್ಟ್‌ : ಲಕ್ಷ್ಮಣ್‌ ಸವದಿ

ಬೆಳಗಾವಿ ಜಿಲ್ಲೆಯರು ಆಗಲಿ‌ ಅದಕ್ಕೆ ಬೆಂಬಲ ಇದೆ. ಅದರಲ್ಲೂ ಸಚಿವ ಸತೀಶ ಜಾರಕಿಹೋಳಿ ಅವರು ಸಿಎಂ ಆಗುತ್ತಾರೆ ಎಂದಾದರೆ ನನ್ನ ಬೆಂಬಲವಿದೆ ಎಂದು ಕಾಂಗ್ರೆಸ್‌ ಶಾಸಕ ಲಕ್ಷ್ಮಣ್‌ ಸವದಿ ಹೇಳಿದರು. ಜಿಲ್ಲೆಯವರು ಸಿಎಂ ಆಗುವ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಜಿಲ್ಲೆಯವರು ಯಾರೆ ಆಗಲಿ‌ ಅದಕ್ಕೆ ಬೆಂಬಲ ಇದೆ. ಸಚಿವ ಸತೀಶ ಜಾರಕಿಹೋಳಿ ಸಿಎಂ…