ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಕ್ಷೇತ್ರದಲ್ಲೇ ವಕ್ಫ್ ಗೆ ಆಸ್ತಿ ವರ್ಗಾವಣೆಯಾಗಿರುವ ಸಂಗತಿ ರೈತರಲ್ಲಿ ಆತಂಕ ಮೂಡಿಸಿದೆ. ವರುಣಾ ವಿಧಾನ ಸಭಾ ಕ್ಷೇತ್ರದ ರಂಗಸಮುದ್ರ ಗ್ರಾಮದ ಆಸ್ತಿ ಪರಭಾರೆಯಾಗಿದ್ದು, ಸರ್ವೆ ನಂಬರ್ 257 ರ 19 ಗುಂಟೆ ಭೂಮಿಯನ್ನು ವಕ್ಫ್ ಆಸ್ತಿ ಎಂದು ಉಲ್ಲೇಖಿಸಲಾಗಿದೆ.
ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕು ರಂಗಸಮುದ್ರ ಗ್ರಾಮದ ಈ ಆಸ್ತಿ ಪರಭಾರೆಯು 10-01-2022 ರಂದು ಖಾತೆ ಆಗಿರುವುದು ಕಂಡು ಬಂದಿದ್ದು, ಎಂಡಬ್ಲೂಬಿ 19(2) 01-04-1965 ಕ್ರಮ ಸಂಖ್ಯೆ 317 ವಕ್ಫ್ ಅಧಿಸೂಚನೆ ಸಂಖ್ಯೆ ಆಧಾರದ ಮೇಲೆ ಖಾತೆ ಮಾಡಲಾಗಿದೆ. ಖಾತೆ ನಂಬರ್ 999 ಅಡಿ ಭೂಮಿ ಖಾತೆ ಮುಸಲ್ಮಾನರ ಖಬ್ರಸ್ತಾನ್ ಸುನ್ನಿ, ವಕ್ಫ್ ಆಸ್ತಿ ಎಂದು ಉಲ್ಲೇಖಿಸಲಾಗಿದೆ.
2019-20 ರಲ್ಲಿ ಕಪನಯ್ಯನ ತೋಪು ಎಂದು ಉಲ್ಲೇಖವಾಗಿದ್ದ ಈ ಆಸ್ತಿಯನ್ನು 2019-20 ರಲ್ಲಿ ಭೂಮಿಯಲ್ಲಿ ಭತ್ತ ಬೆಳೆದಿರುವ ಕುರಿತು ಆರ್ ಟಿಸಿಯಲ್ಲಿ ಮಾಹಿತಿ ನೀಡಲಾಗಿತ್ತು. ಬಳಿಕ ಆಲದಮರ, ಅರಳಿಮರ ಎಂದು ಉಲ್ಲೇಖಿಸಿ ಭೂಮಿ ಯನ್ನು ಪರಭಾರೆ ಮಾಡಿರುವ ಅನುಮಾನ ಸೃಷ್ಟಿಯಾಗಿದೆ.