ಊತ್ತರ ಕರ್ನಾಟಕ ನ್ಯೂಸ್ ಡೆಸ್ಕ್ ಬೀದರ್:ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ಅಭಿವೃದ್ಧಿಗಾಗಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸಹಯೋಗದಲ್ಲಿ ತಜ್ಞರ ಸಮಿತಿ ರಚನೆ ಮಾಡಲಾಗಿದ್ದು, ತಜ್ಞರ ಸಮಿತಿಗೆ ಅಧ್ಯಕ್ಷರನ್ನಾಗಿ ಖ್ಯಾತ ಶಿಕ್ಷಣ ತಜ್ಞ ಡಾ ಗುರುರಾಜ್ ಕರಜಗಿ ಅವರನ್ನ ನೇಮಕ ಮಾಡಲಾಗಿದೆಯೆಂದು ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ ಅಜಯ್‌ಸಿಂಗ್ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅರು, ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಫಲಿತಾಂಶದಲ್ಲಿ ಈ ಭಾಗದ ಏಳು ಜಿಲ್ಲೆಗಳು ಕೆಳಗಿಬ ಹತ್ತು ಸ್ಥಾನಗಳನ್ನ ಪಡೆಯುತ್ತಿದ್ದು ವಿಷಾದನೀಯವಾಗಿದೆ ಎಂದು ಅಜಯ್‌ಸಿಂಗ್ ಹೇಳಿದರು. ಇನ್ನೂ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿನ ಅಭಿವೃದ್ಧಿ ಕುಂಠಿತಗೊಂಡಿರೋದಕ್ಕೆ ಐತಿಹಾಸಿಕ, ಸಾಮಾಜಿಕ ಇತರೆ ಕಾರಣಗಳಿದ್ದು, ಎಲ್ಲಾ ಕಾರಣಗಳಿಗೆ ಮುಕ್ತಿ ನೀಡಲು ತಜ್ಞರ ಸಮಿತಿ ರಚಿಸಲಾಗಿದೆಯೆಂದು ಅಜಯ್‌ಸಿಂಗ್ ಹೇಳಿದರು.