ಜೈಲಿನಲ್ಲಿ ರಾಜಾತಿಥ್ಯ ಅನುಭವಿಸಿದ ನಟ ದರ್ಶನ್ ನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದ್ದು, ದರ್ಶನ್ ನನ್ನು ಕರೆದೊಯ್ದಿದ್ದ ಪೊಲೀಸ್ ಪಡೆ ಜೈಲು ತಲುಪಿದೆ. ದರ್ಶನ್ ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಬಳಿಕ ಬ್ಯಾರೆಕ್ ಗೆ ಕರೆದೊಯ್ಯಲಾಗುತ್ತದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಗರೇಟು ಸೇವನೆ, ಟೀ ಸೇವನೆ ಸೇರಿದಂತೆ ವಿಡಿಯೋ ಕಾಲ್ ಮಾಡುತ್ತಾ ಐಷಾರಾಮಿ ವೈಭೋಗ ಅನುಭವಿಸುತ್ತಿದ್ದ ದರ್ಶನ್ ಫೋಟೋಗಳು ಬಯಲಾಗಿತ್ತು. ಈ ಕುರಿತು ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಸರ್ಕಾರ ದರ್ಶನ್ ಗ್ಯಾಂಗ್ ವಿವಿಧ ಜೈಲುಗಳಿಗೆ ವರ್ಗಾಯಿಸತಲಾಗಿತ್ತು.
ಬಂಧೀಖಾನೆಯ ಏಳು ಮಂದಿ ಅಧಿಕಾರಿಗಳನ್ನು ಅಮಾನತುಗೊಳಿಸಿ ಆಂತರಿಕ ತನಿಖೆಗೆ ಆದೇಶಿಸಲಾಗಿತ್ತು. ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ದರ್ಶನ್ ಮತ್ತು ಗ್ಯಾಂಗ್ ಜೈಲು ಸೇರಿದ್ದು, ಶೀಘ್ರದಲ್ಲೇ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದೆ.