ಭಾರತದ ತೆಲಂಗಾಣದ ಸಣ್ಣ ಹಳ್ಳಿಯೊಂದರಲ್ಲಿ, ಡೊನಾಲ್ಡ್ ಟ್ರಂಪ್ ಅವರ ನಿರೀಕ್ಷಿತ ಗೆಲುವಿಗೆ ಸಂಭ್ರಮ ಮನೆಮಾಡಿದೆ.
ಯುಎಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರಿಗೆ 2019ರಲ್ಲಿ ದಿವಂಗತ ಬುಸ್ಸಾ ಕೃಷ್ಣ ಎಂಬುವವರು ದೇವಸ್ಥಾನವೊಂದನ್ನು ಕಟ್ಟಿದ್ದರು.
ನಂತರ ಅವರು ಟ್ರಂಪ್ ಕೃಷ್ಣ ಎಂದೇ ಜನಪ್ರಿಯರಾದರು. ಟ್ರಂಪ್‌ಗೆ ಸಮರ್ಪಿತವಾದ ಈ ದೇಗುಲವು ಇದೀಗ ಮತ್ತೊಮ್ಮೆ ಗಮನ ಸೆಳೆಯುತ್ತಿದೆ.
ಜನಗಾಂವ್ ಜಿಲ್ಲೆಯ ಕೊನ್ನೆ ಗ್ರಾಮದ ರೈತ ಬುಸ್ಸಾ ಕೃಷ್ಣ ಅವರು 2011 ರಲ್ಲಿ ಟ್ರಂಪ್ ಅವರಿಂದ ಸ್ಫೂರ್ತಿ ಪಡೆದಿದ್ದರು.
ಅವರು 2018ರಲ್ಲಿ ತಮ್ಮ ಮನೆಯ ಒಂದು ಭಾಗವನ್ನು ದೇವಾಲಯವನ್ನಾಗಿ ಮಾಡಿದರು. ಅಮೇರಿಕಾ ಅಧ್ಯಕ್ಷರ ಮೇಲಿನ ಕೃಷ್ಣನ ಅಭಿಮಾನ ಎಷ್ಟರಮಟ್ಟಿಗೆ ಬೆಳೆಯಿತೆಂದರೆ,
2019ರಲ್ಲಿ ಅವರು ತಮ್ಮ ಮನೆಯ ಹೊರಗೆ 6 ಅಡಿಯ ಟ್ರಂಪ್‌ರ ಪ್ರತಿಮೆಯನ್ನು ಸ್ಥಾಪಿಸಲು ಸುಮಾರು 2 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದರು.
ಆ ಪ್ರತಿಮೆಗೆ ಆಗಾಗ ಹಾಲಿನ ಅಭಿಷೇಕ ಮಾಡುತ್ತಿದ್ದರು. ಇದೀಗ ಮತ್ತೆ ಆ ಪುತ್ಥಳಿಗೆ ಹಾಲಿನ ಅಭಿಷೇಕ ಮಾಡಿ ಟ್ರಂಪ್ ವಿಜಯವನ್ನು ಸಂಭ್ರಮಿಸಲಾಗಿದೆ.