ಇಡೀ ವಿಶ್ವವೇ ಎದುರು ನೋಡುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಕೊನೆಯ ಹಂತಕ್ಕೆ ಮುಟ್ಟಿದೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಸ್ಥಾನ ಹತ್ತಿರದಲ್ಲಿದ್ದು, ಕಮಲಾ ಹ್ಯಾರಿಸ್ ಸೋಲುವುದು ಬಹುತೇಕ ಖಚಿತವಾಗಲಿದೆ. 270 ಸ್ಥಾನಗಳನ್ನು ಗೆಲ್ಲುವುದು ಅನಿವಾರ್ಯವಾಗಿರುವ ಈ ಕಣದಲ್ಲಿ ಡೊನಾಲ್ಡ್ ಟ್ರಂಪ್ 247 ಸ್ಥಾನಗಳನ್ನು ಖಚಿತಪಡಿಸಿಕೊಂಡಿದ್ದರೆ ಕಮಲಾ ಹ್ಯಾರಿಸ್ 214 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ.
ಸಂಸತ್ತಿನಲ್ಲಿ ಪ್ರತಿನಿಧಿಸಲು ಬೇಕಿರುವಷ್ಟು ಸ್ಥಾನಗಳನ್ನು ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಾರ್ಟಿ ಗಳಿಸಿದ್ದು, ಈಗಾಗಲೇ ತನ್ನ ಅಧ್ಯಕ್ಷ ಸ್ಥಾನವನ್ನು ಬಹುತೇಕ ಖಚಿತಪಡಿಸಿದ್ದರೂ ಸಹ ಸ್ಪಷ್ಟ ಫಲಿತಾಂಶ ಇಂದು ಸಂಜೆಯೊಳಗೆ ಹೊರಬೀಳಲಿದೆ. ಪೆನಿಸಲ್ವೇನಿಯಾ, ಜಾರ್ಜಿಯಾ, ಮಿಷಿಗನ್, ಅರಿಝೋನಾ, ವಿಸ್ಕೋನ್ಸಿನ್ ಹಾಗೂ ನೆವಾಡಾದಲ್ಲಿ ಚುನಾವಣೆ ಮತೆ ಎಣಿಕೆ ಪ್ರಕ್ರಿಯೆ ಮುಗಿದಿದ್ದು ಫಲಿತಾಂಶವಷ್ಟೇ ಬಾಕಿ ಇದೆ. ಈ ಚುನಾವಣೆಯಲ್ಲಿ 84 ದಶಲಕ್ಷ ಮಂದಿ ತಮ್ಮ ಮತಚಲಾಯಿಸಿದ್ದು, ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ.