ಶತ್ರುಗಳು’ ನಮ್ಮ ಜೊತೆಯೇ ಇರುತ್ತಾರೆ, ಗೊತ್ತಾಗಲ್ಲ ಅಷ್ಟೆ : ಟಾಂಗ್ ಕೊಟ್ಟ ಜಮೀರ್ ಅಹ್ಮದ್

ಶತ್ರುಗಳು’ ನಮ್ಮ ಜೊತೆಯೇ ಇರುತ್ತಾರೆ, ಗೊತ್ತಾಗಲ್ಲ ಅಷ್ಟೆ : ಟಾಂಗ್ ಕೊಟ್ಟ ಜಮೀರ್ ಅಹ್ಮದ್

ಸಂಗೊಳ್ಳಿ ರಾಯಣ್ಣನನ್ನು ನಮ್ಮವರೇ ಹೇಗೆ ಬ್ರಿಟಿಷರಿಗೆ ಹಿಡಿದು ಕೊಟ್ಟರೊ ಅದೇ ರೀತಿ ನಮ್ಮ ಸುತ್ತಮುತ್ತಲೇ ನಮ್ಮವರೇ ನಮಗೆ ಶತ್ರುಗಳಾಗಿರುತ್ತಾರೆ. ಆದರೆ ಅದು ನಮಗೆ ಗೊತ್ತಾಗುವುದಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಸಿಎಂ ಸಿದ್ದರಾಮಯ್ಯ ಜೊತೆಗೆ ಇದ್ದು ಅವರ ವಿರುದ್ಧ ಪಿತೂರಿ ನಡೆಸುತ್ತಿರುವವರಿಗೆ ತಿರುಗೇಟು ನೀಡಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, ಮನುಷ್ಯನಿಗೆ ಶತ್ರುಗಳಿರುವುದು ಸಹಜ. ಎಲ್ಲರಿಗೂ ಶತ್ರುಗಳು ಇರುತ್ತಾರೆ ಆದ್ರೆ ಯಾರು ಶತ್ರು ಎಂಬುದು ಹೇಗೆ ಗೊತ್ತಾಗುತ್ತದೆ? ಯಾರು ನಿಜವಾದ ಸ್ನೇಹಿತರೆಂಬುದು ಹೇಗೆ ಗೊತ್ತಾಗುತ್ತದೆ? ಆ ಲೆಕ್ಕದಲ್ಲಿ ಸಿದ್ದರಾಮಯ್ಯನವರು ಮಾತನಾಡಿದ್ದಾರೆ. ಆದ್ರೆ ಗೊತ್ತಾಗುವುದಿಲ್ಲ ಎನ್ನುವ ಮೂಲಕ ಸ್ವಪಕ್ಷೀಯ ವಿರೋಧಿಗಳಿಗೂ ಜಮೀರ್ ಟಾಂಗ್ ಕೊಟ್ಟರು.

ಇನ್ನೂ ದರ್ಶನ್​ ಜೈಲು ಅತಿಥ್ಯ ಪ್ರಕರಣದಲ್ಲಿ ನಿಮ್ಮ ಹೆಸರು ಕೇಳಿಬರುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಟ ದರ್ಶನ್ ವಿಚಾರವಾಗಿ ಮಾಧ್ಯಮದಲ್ಲಿ ನನ್ನ ಹೆಸರು ಸೇರಿಸಲಾಗುತ್ತಿದೆ. ನಾನು ದರ್ಶನ್ ಆತ್ಮೀಯ ಸ್ನೇಹಿತರು. ಆದ್ರೆ ದರ್ಶನ್ ತಪ್ಪು ಮಾಡಿದ್ದಕ್ಕೆ ಜೈಲಿಗೆ ಹೋಗಿದ್ದಾರೆ. ಸುಮ್ಮನೆ ಯಾರಾದರೂ ಜೈಲಿಗೆ ಹೋಗ್ತಾರಾ? ಎಂದು ಹೇಳಿದರು.

Share this post

Post Comment