ನ್ಯೂಸ್ ಡೆಸ್ಕ್ ಉತ್ತರ ಕರ್ನಾಟಕ : ಗುತ್ತಿಗೆದಾರ ಚೆಲುವರಾಜ್ಗೆ ಜೀವ ಬೆದರಿಕೆ ಹಾಕಿದ್ದು ಅಲ್ಲದೇ, ಜಾತಿ ನಿಂದನೆ ಆರೋಪದಡಿ ಆರ್.ಆರ್.ನಗರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ 2 ಎಪ್ ಐ ಆರ್ ದಾಖಲಾಗುತ್ತಿದ್ದಂತೆ, ಅವರು ನಾಪತ್ತೆಯಾಗಿದ್ದಾರೆ.
ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮುನಿರತ್ನಗಾಗಿ ಪೊಲೀಸರು ಹುಡುಕಾಟ ಚಾಲು ಮಾಡಿದರು, ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ತಿಳಿದುಬಂದಿದೆ.
ಗುತ್ತಿಗೆದಾರನ ಬಳಿ ಲಂಚ ಕೇಳುವಾಗ ಮುನಿರತ್ನ, ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಲ್ಲದೇ ಜಾತಿ ನಿಂದನೆಯೂ ಮಾಡಿದ್ದಾರೆಂಬ ಆಡಿಯೋವೊಂದು ವೈರಲ್ ಆಗಿದೆ. ಇದರ ಬೆನ್ನಲ್ಲೇ ದೂರು ದಾಖಲಾಗಿದ್ದು, ಮುನಿರತ್ನ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಮುನಿರತ್ನ ನಿವಾಸದಲ್ಲಿ ಪೊಲೀಸರು ಮಹಜರ್ ಮಾಡುತ್ತಿದ್ದು, ಮನೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.