ತೊಗರಿ ನಾಡಿನಲ್ಲಿ ಗಣೇಶೋತ್ಸವ ಸಂಭ್ರಮ
ನ್ಯೂಸ್ ಡೆಸ್ಕ್ ಉತ್ತರ ಕರ್ನಾಟಕ : ತೊಗರಿ ನಾಡು ಕಲಬುರಗಿಯಲ್ಲಿ ಗಣೇಶೋತ್ಸವಕ್ಕೆ ಸಂಭ್ರಮ ಮನೆ ಮಾಡಿದ್ದು, ನಗರದ ಬಿದ್ದಾಪೂರ ಕಾಲೋನಿ, ಹಿರಾಪುರ ಕ್ರಾಸ್ ಸೂಪರ್ ಮಾರ್ಕೆಟ್ ನಲ್ಲಿ ಗಣೇಶ ಮೂರ್ತಿ ಖರೀದಿ ಭರಾಟೆ ಜೋರಾಗಿತ್ತು.
ಗಣೇಶೋತ್ಸವ ಬಂದರೆ ಸಾಕು, ಯುವಕರಲ್ಲಿ ಎಲ್ಲಿಲ್ಲದ ಸಂಭ್ರಮ, ಮನೆಗಳಲ್ಲಿ, ಬಡಾವಣೆಯಲ್ಲಿ ವಿಘ್ನೇಶ್ವರನ್ನು ಪ್ರತಿಷ್ಠಾಪಿಸಿ ಸಂಭ್ರಮಿಸುತ್ತಾರೆ. ಅದರಂತೆ ಈ ಬಾರಿಯು ಸಹ ಬಿಸಿಲೂರು ಕಲಬುರಗಿ ಗಣೇಶ ಉತ್ಸವಕ್ಕೆ ಸಜ್ಜಾಗಿದ್ದು, ಯುವಕರು ಸಿದ್ದತೆಯಲ್ಲಿ ತೊಡಗಿದ್ದಾರೆ. ಇತ್ತ ಸಾರ್ವಜನಿಕರು ನಗರದ ಬಿದ್ದಾಪೂರ ಕಾಲೋನಿ, ಹೀರಾಪೂರ, ಸೂಪರ್ ಮಾರ್ಕೆಟನಲ್ಲಿ ಮಾರಟಕ್ಕೆ ಇಟ್ಟಿರುವ ಪಿಓಪಿ, ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಖರೀದಿಸುವಲ್ಲಿ ನಿರತರಾದ ದೃಶ್ಯಗಳು ಎಲ್ಲೆಡೆ ಕಂಡುಬಂದವು.