ಗಾಂಧಿ ಗಂಜ್ ಬ್ಯಾಂಕ್ ನ ಸುವರ್ಣ ಮಹೋತ್ಸವ ಆಚರಣೆ

ಗಾಂಧಿ ಗಂಜ್ ಬ್ಯಾಂಕ್ ನ ಸುವರ್ಣ ಮಹೋತ್ಸವ ಆಚರಣೆ

ಬೀದರ್ ನಗರದ ಸಿಂದೋಲ್ ಕಲ್ಯಾಣ ಮಂಟಪದಲ್ಲಿ ಗಾಂಧಿ ಗಂಜ್ ಬ್ಯಾಂಕ್ ನ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಸಹಕಾರಿ ಬ್ಯಾಂಕುಗಳಿಗೆ ಹನ್ನೆರಡನೇ ಶತಮಾನದ ಬಸವಣ್ಣನವರ ಕಾಯಕ ಮತ್ತು ದಾಸೋಹತತ್ವ ಪ್ರೇರಣೆಯಾಗಬೇಕು.ಬಸವಣ್ಣನವರು ಆರ್ಥಿಕತೆಗೆ ಬಹಳ ಒತ್ತು ಕೊಟ್ಟಿದ್ದರು. ಅವರು ಕಾಯಕ ಮತ್ತು ದಾಸೋಹ ತತ್ವವನ್ನು ಜಾರಿಗೆ ತಂದಿದ್ದರು.

ಹಣವನ್ನು ಹೇಗೆ ಸಂಪಾದಿಸಬೇಕು? ಹೇಗೆ ಬಳಸಬೇಕು ಎಂಬುದನ್ನು ತೋರಿಸಿಕೊಟ್ಟಿದ್ದರು. ಅದಕ್ಕಾಗಿಯೇ ಸದಾ ಬಿಜ್ಜಳ ರಾಜನ ಭಂಡಾರ ತುಂಬಿರುತ್ತಿತ್ತು. ಕಲ್ಯಾಣ ಪಟ್ಟಣದಲ್ಲಿ ನೀಡುವವರುಂಟು ಬೇಡುವವರಿಲ್ಲ. ಬೇಡುವವರಿಲ್ಲದ ಕಾರಣ ನಾನು ಬಡವನಾದೆ ಎಂದು ಬಸವಣ್ಣ ಹೇಳಿದ್ದ. ಆ ರೀತಿ ಬ್ಯಾಂಕುಗಳು ಕೆಲಸ ಮಾಡಬೇಕಿದೆ. ಬ್ಯಾಂಕುಗಳಿಗೆ ಸಣ್ಣ ವ್ಯಾಪಾರಿಗಳಿಗೆ ಸಾಲ ಕೊಟ್ಟು ಬೆಳೆಸಿದರೆ ಸಮಾಜ ಅಭಿವೃದ್ಧಿ ಆಗುತ್ತದೆ. ಅದು ಬ್ಯಾಂಕಿನ ನಿಜವಾದ ಕೆಲಸವೂ ಹೌದು. ನಾನು ಕೂಡ ಗಾಂಧಿ ಗಂಜ್ ಬ್ಯಾಂಕಿನಿಂದ ಸಾಲ ಪಡೆದು ಬೀದರ್‌ನಲ್ಲಿ ಪ್ರಸಾದ ನಿಲಯಕ್ಕೆ ಜಾಗ ಖರೀದಿಸಿದ್ದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ. ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್, ಶಾಸಕ ಸಿದ್ದು ಪಾಟೀಲ್, ಪರಿಷತ್ ಸದಸ್ಯ ಚಂದ್ರಶೇಖರ್ ಪಾಟೀಲ್, ಎಂ ಜಿ ಮೂಳೆ, ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ, ನಗರಸಭೆ ಸದಸ್ಯ ಮಹಮ್ಮದ ಗೌಸ್, ಗಾಂಧಿ ಗಂಜ್ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ್ಯ ವಿಜಯ್ ಕುಮಾರ್ ಪಾಟೀಲ್ ಗಾದಗಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Share this post

Post Comment