ಉಚಿತ ಗ್ಯಾರಂಟಿಗಳನ್ನು ಕೂಡಲು ಸರ್ಕಾರದ ಬಳಿ ಈಗ ಹಣವಿಲ್ಲ: ಆರ್‌ ಅಶೋಕ್‌

ಉಚಿತ ಗ್ಯಾರಂಟಿಗಳನ್ನು ಕೂಡಲು ಸರ್ಕಾರದ ಬಳಿ ಈಗ ಹಣವಿಲ್ಲ: ಆರ್‌ ಅಶೋಕ್‌

ಉಚಿತ ಗ್ಯಾರಂಟಿಗಳನ್ನು ಕೂಡಲು ಸರ್ಕಾರದ ಬಳಿ ಈಗ ಹಣವಿಲ್ಲ: ಆರ್‌ ಅಶೋಕ್‌

ನ್ಯೂಸ್‌ ಡೆಸ್ಕ್‌ ಉತ್ತರ ಕರ್ನಾಟಕ : ಉಚಿತ ಗ್ಯಾರಂಟಿಗಳನ್ನು ಕೂಡಲು ಸರ್ಕಾರದ ಬಳಿ ಈಗ ಹಣವಿಲ್ಲ. ಹೀಗಾಗಿ ಬಡವರ ರೇಷನ್‌ ಕಾರ್ಡ್‌ಗಳನ್ನು ರದ್ದುಪಡಿಸಲು ಮುಂದಾಗಿದೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್‌ ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಿ 60 ಲಕ್ಷ ರೇಷನ್‌ ಕಾರ್ಡ್‌ಗಳನ್ನು ರದ್ದುಪಡಿಸಲು ಕಾಂಗ್ರೆಸ್‌ ಸರ್ಕಾರ ಹೊರಟಿದೆ.

ಐದು ಗ್ಯಾರಂಟಿಗಳಿಗೆ ಕೊಡಲು ಇವರ ಬಳಿ ಹಣವಿಲ್ಲ. ನಮ್ಮ ರೇಷನ್‌ ಕಾರ್ಡ್‌ಗಳನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ಬಡ ಜನರಿಗೆ ಆತಂಕ ಶುರುವಾಗಿದೆ. ಈ ವಿಚಾರವಾಗಿ ಎಲ್ಲಡೆ ಗೊಂದಲ ಸೃಷ್ಟಿಯಾಗಿದೆ ಎಂದರು.

ರೇಷನ್‌ ಕಾರ್ಡ್‌ ರದ್ದುಪಡಿಸಿದರೆ ಮೂರು-ನಾಲ್ಕು ಸಾವಿರ ಕೋಟಿ ರೂ. ಹಣ ಸಿಗುತ್ತದೆ ಎಂದು ಆ ಕೆಲಸಕ್ಕೆ ಕಾಂಗ್ರೆಸ್‌ ಮುಂದಾಗಿದೆ. 10 ಕೆಜಿ ಅಕ್ಕಿ ಕೊಡುವುದಾಗಿ ಮತದಾರರಿಗೆ ಸುಳ್ಳು ಆಮಿಷಗಳನ್ನು ಒಡ್ಡಿ, ಅಧಿಕಾರಕ್ಕೆ ಬಂದು ಅಕ್ಕಿಯನ್ನೂ ಕೊಡದೆ, ಹಣವೂ ನೀಡದೆ ನಯವಂಚಕತನ ಮೆರೆದ ಕಾಂಗ್ರೆಸ್ ಸರ್ಕಾರದ ಬಂಡವಾಳ ಬಯಲಾಗಿದೆ ಎಂದು ಹೇಳಿದರು.

Share this post

Post Comment