ಸಿದ್ದರಾಮಯ್ಯ ಅವರ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

ಸಿದ್ದರಾಮಯ್ಯ ಅವರ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

ಊತ್ತರ ಕರ್ನಾಟಕ ನ್ಯೂಸ್‌ ಡೆಸ್ಕ್‌  ಬೀದ‌ರ್ : ಮುಡಾದಿಂದ ಪಡೆಯಲಾಗಿದ್ದ ನಿವೇಶನಗಳನ್ನು ಏಕಾಏಕಿ ಹಿಂದಿರುಗಿಸಲು ಹೇಳಿಕೊಟ್ಟವರು ಯಾರು?, ಇಷ್ಟೆಲ್ಲಾ ಸರ್ಕಸ್ ಏಕೆ ಬೇಕಿತ್ತು ಎಂದು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಕೇಂದ್ರ ಭಾರಿ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ರಾತ್ರಿ ಏಕಾಏಕಿ ಮುಡಾಗೆ ಪತ್ರ ಬರೆದು ನಿವೇಶನ ಬೇಡ ಎಂದು ಕೇಳಿದ್ದಾರೆ.  ಮನೆಯ ಚಿನ್ನ, ಒಡವೆ ಯಾವುದರ ಮೇಲೂ ಮಮತೆ ಇಲ್ಲ ಎಂದು ನುಡಿದ್ದಾರೆ.  ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ಬಾರದೇ ನಿವೇಶನವನ್ನು ವಾಪಸ್ ಕೂಡುವುದಾಗಿ ಹೇಳಿದ್ದಾರೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಕಪ್ಪುಚುಕ್ಕೆ ಇಲ್ಲದಂತೆ ರಾಜಕೀಯ ಮಾಡಿರುವುದಾಗಿ ಹೇಳಿಕೊಂಡಿದ್ದರು. ನನ್ನನ್ನು ಸುಳ್ಳುಗಾರ ಅಂತಾರೆ. ಇವರ ಮಾತು ಕೇಳಿಸಿಕೊಂಡರೆ ಸುಳ್ಳು ಎಲ್ಲಿ ಹುಟ್ಟಿದೆ ಎಂಬುದು ಗೊತ್ತಾಗುತ್ತದೆ. ನನ್ನನ್ನು ಹಿಟ್ ಅಂಡ್ ರನ್ ಎನ್ನುತ್ತಾರೆ. ಇವರೇನು ಯೂಟರ್ನೇ? , ಕಳ್ಳತನ ಮಾಡಿದ ಮೇಲೆ ತಪ್ಪಾಯಿತು ಎಂದರೆ ಬಿಡಲು ಸಾಧ್ಯವೇ? ಎಂದು ತರಾಟೆಗೆ ತೆಗೆದುಕೊಂಡರು.

ಮುಡಾದಿಂದ ಪಡೆಯಲಾಗಿದ್ದ ನಿವೇಶನಗಳನ್ನು ಏಕಾಏಕಿ ಹಿಂದಿರುಗಿಸಲು ಹೇಳಿಕೊಟ್ಟವರು ಯಾರು?, ಇಷ್ಟೆಲ್ಲಾ ಸರ್ಕಸ್ ಏಕೆ ಬೇಕಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೇಂದ್ರ ಭಾರಿ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು. ಮುಡಾ ನಿವೇಶನಗಳನ್ನು ಪಡೆದಿರುವುದಷ್ಟೇ ಅಲ್ಲ, ಈ ಹಿಂದೆ ಏನೆಲ್ಲಾ ಮಾಡಿದ್ದಾರೆ. ವೈಟ್ನರ್ ಹಾಕಿದ್ದು ಮುಗಿದ್ಹೋಯ್ತು. ಈಗ ಇಲ್ಲಿಗೆ ಬಂದಿದ್ದಾರೆ ಎಂದ ಅವರು, ಸಿದ್ದರಾಮಯ್ಯ ಅವರು ಚುನಾವಣಾ ಸಾಲ ತೀರಿಸಲು ಒಂದು ಕೋಟಿ ರೂ.ಗೆ ಮಾರಾಟ ಮಾಡಿದ್ದ ನಿವೇಶನ ಎಲ್ಲಿಂದ ಬಂದಿತು.

ಸಿದ್ದರಾಮಯ್ಯನವರ ಪತ್ನಿ ರಾತ್ರಿ ಏಕಾಏಕಿ ಮುಡಾಗೆ ಪತ್ರ ಬರೆದು ನಿವೇಶನ ಬೇಡ ಎಂದು ಹೇಳಿದ್ದಾರೆ. ಮನೆಯ ಚಿನ್ನ, ಒಡವೆ ಯಾವುದರ ಮೇಲೂ ಮಮತೆ ಇಲ್ಲ ಎಂದು ಹೇಳಿದ್ದಾರೆ. ಇದು ಸಿಎಂ ಗಮನಕ್ಕೆ ಬಾರದೇ ನಿವೇಶನವನ್ನು ವಾಪಸ್ ನೀಡುವುದಾಗಿ ಹೇಳಿದ್ದಾರೆಯೇ? ಎಂದು ಪ್ರಶ್ನಿಸಿದರು. ಕಪ್ಪುಚುಕ್ಕೆ ಇಲ್ಲದಂತೆ ರಾಜಕೀಯ ಮಾಡಿರುವುದಾಗಿ ಹೇಳಿಕೊಂಡಿದ್ದರು. ನನ್ನನ್ನು ಸುಳ್ಳುಗಾರ ಅಂತಾರೆ. ಇವರ ಮಾತು ಕೇಳಿಸಿಕೊಂಡರೆ ಸುಳ್ಳು ಎಲ್ಲಿ ಹುಟ್ಟಿದೆ ಎಂಬುದು ಗೊತ್ತಾಗುತ್ತದೆ. ನನ್ನನ್ನು ಹಿಟ್ ಅಂಡ್ ರನ್ ಎನ್ನುತ್ತಾರೆ. ಇವರೇನು ಯೂಟರ್ನೇ? , ಕಳ್ಳತನ ಮಾಡಿದ ಮೇಲೆ ತಪ್ಪಾಯಿತು ಎಂದರೆ ಬಿಡಲು ಸಾಧ್ಯವೇ? ಎಂದು ತರಾಟೆಗೆ ತೆಗೆದುಕೊಂಡರು.

ಬಡವರ ಮಕ್ಕಳಿಗೆ ವಸತಿ ಶಾಲೆ ನಿರ್ಮಾಣ ಮಾಡಲು ಭೂಮಿ ಡಿ ನೋಟಿಫಿಕೇಷನ್ ಮಾಡಿಸಿಕೊಂಡು ಅದನ್ನು ಸಿದ್ದರಾಮಯ್ಯ ಪಡೆದಿದ್ದಾರೆ. ಇದು 14 ನಿವೇಶನಗಳಿಗಿಂತ ದೊಡ್ಡ ಪ್ರಕರಣ ಎಂದು ಆರೋಪಿಸಿದರು.ಊರಿಗೇ ಬುದ್ಧಿ ಹೇಳುವವರು ಇಲ್ಲಿ ಏನು ಮಾಡಿದ್ದೀರಿ, ಸತ್ಯ ಹೇಳಿ, ಈಗ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿ ಕುಂಕುಮ ಇಟ್ಟುಕೊಂಡು ರಕ್ಷಣೆ ಪಡೆಯುತ್ತಿದ್ದಾರೆ. ಇದರ ಜೊತೆಗೆ ಇನ್ನೂ ಎರಡು ಪ್ರಕರಣಗಳಿವೆ ಎಂದು ಆರೋಪ ಮಾಡಿದರು.

Share this post

Post Comment