ಟೀಂ ಇಂಡಿಯಾದ ರನ್ ಮಷಿನ್, ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಇಂದು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕ್ರಿಕೆಟ್ ಲೋಕದಲ್ಲಿ ಹಲವು ದಾಖಲೆ ಗಳನ್ನು ಮುರಿದು ಶ್ರೇಷ್ಠ ಬ್ಯಾಟರ್ ಎಂಬ ಕೀರ್ತಿಗಳಿಸಿರುವ ವಿರಾಟ್ ಕೊಹ್ಲಿ ಅವರ ಕೆಲು ದಾಖಲೆಗಳನ್ನು ಬೇರೆಯವರು ಬ್ರೇಕ್ ಮಾಡೋದು ಅಸಾಧ್ಯ ಎಂದು ಹೇಳಲಾಗುತ್ತಿದೆ
ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದಿದ್ದಾರೆ. ಕಿಂಗ್ ಕೊಹ್ಲಿ 50 ಶತಕ ಬಾರಿಸುವ ಮೂಲಕ ಜಗತ್ತನ್ನೇ ನಡುಗಿಸಿದ್ದರು. ಸಚಿನ್ ಏಕದಿನ ಕ್ರಿಕೆಟ್‌ನಲ್ಲಿ 49 ಶತಕಗಳನ್ನು ಗಳಿಸಿದ್ದರು. 2023ರ ಐಸಿಸಿ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊಹ್ಲಿ ಈ ಬೃಹತ್ ದಾಖಲೆಯನ್ನು ಮಾಡಿದ್ದರು, ಈ ದಾಖಲೆಯನ್ನು ಬೇರೆಯವರು ಬ್ರೇಕ್ ಮಾಡುವುದು ಅಸಾಧ್ಯವಾಗಿದೆ ವಿರಾಟ್ ಕೊಹ್ಲಿ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ. 68 ಪಂದ್ಯಗಳಲ್ಲಿ 40 ಗೆಲುವು ಸಾಧಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
147 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಕೇವಲ ಮೂವರು ನಾಯಕರು ಮಾತ್ರ ಇಂತಹ ಗೆಲುವಿನ ದಾಖಲೆ ಹೊಂದಿದ್ದಾರೆ.- ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ ಇಲ್ಲಿಯವರೆಗೆ 10 ಏಕದಿನ ಶತಕಗಳನ್ನು ಗಳಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ 9 ಶತಕಗಳು ದಾಖಲಾಗಿದ್ದರೆ, ಆಸ್ಟ್ರೇಲಿಯಾ ವಿರುದ್ಧ 8 ಶತಕಗಳು ದಾಖಲಾಗಿವೆ. ಒಂದೇ ದೇಶದ ವಿರುದ್ಧ ಇಷ್ಟು ಶತಕ ಬಾರಿಸಿದ ವಿಚಾರದಲ್ಲಿ ಅವರ ಹತ್ತಿರ ಯಾರೂ ಇಲ್ಲ.
ರೋಹಿತ್ ಶರ್ಮಾ ಅವರು ಆಸ್ಟ್ರೇಲಿಯಾ ವಿರುದ್ಧ 8 ಶತಕಗಳನ್ನು ಗಳಿಸಿದ್ದಾರೆ ಆದರೆ ಇತರ ದೇಶಗಳ ವಿರುದ್ಧ ಕೊಹ್ಲಿಯಷ್ಟು ಶತಕ ಗಳಿಸಿಲ್ಲ ವಿರಾಟ್ ಕೊಹ್ಲಿ ಟೆಸ್ಟ್ ಸರಣಿಯಲ್ಲಿ ಮೂರು ತಂಡಗಳ ವಿರುದ್ಧ 600ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್‌ಮನ್ ಡಾನ್ ಬ್ರಾಡ್ಮನ್ 6 ಬಾರಿ ಈ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾ (2014-15), ಇಂಗ್ಲೆಂಡ್ (2016) ಮತ್ತು ಶ್ರೀಲಂಕಾ (2017) ವಿರುದ್ಧ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದು, ಈ ಪಟ್ಟಿಯಲ್ಲಿ ಬೇರೆ ಯಾವ ಭಾರತೀಯರೂ ಇಲ್ಲ.