ತಿಮ್ಮಪ್ಪನಾಯಕ ದಾಸರಾಗಿದ್ದು ಹೇಗೆ?

ತಿಮ್ಮಪ್ಪನಾಯಕ ದಾಸರಾಗಿದ್ದು ಹೇಗೆ?

ಕನಕದಾಸರ ಬಗ್ಗೆ ಯಾರಿಗೇ ತಾನೇ ತಿಳಿದಿಲ್ಲ. ಅವರ ಭಕ್ತಿ ಜೊತೆಗೆ ಕೀರ್ತನೆಗಳು ಇಂದಿಗೂ ಅಜರಾಮರವಾಗಿದೆ. ಸುಮಾರು 15-16ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಜನಪ್ರಿಯವಾಗಿದ್ದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಕನಕದಾಸರು ಕೂಡ ಒಬ್ಬರಾಗಿದ್ದಾರು.
ಸಾಮಾನ್ಯವಾಗಿ ಪ್ರತೀ ವರ್ಷ ಕಾರ್ತಿಕ ಮಾಸದ 18ನೇ ದಿನದಂದು ಕನಕದಾಸ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ನ. 18 ರಂದು ಸೋಮವಾರ ಈ ದಿನವನ್ನು ಆಚರಿಸಲಾಗುತ್ತಿದೆ. ನಮ್ಮ ಕರ್ನಾಟಕ ಸರ್ಕಾರ 2008 ರಿಂದ ಕನಕದಾಸ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದೆ. ಹಾಗಾದರೆ ಕನಕರು ಅಥವಾ ತಿಮ್ಮಪ್ಪನಾಯಕ ದಾಸರಾಗಿದ್ದು ಹೇಗೆ?

ಕನಕದಾಸರ ಮೂಲ ಹೆಸರು ತಿಮ್ಮಪ್ಪನಾಯಕ. ಅವರು 1509 ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಹಿಂದೂ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಮೊದಲು ಯೋಧನಾಗಿದ್ದ ಇವರು ಬಳಿಕ ದೇವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹರಿದಾಸರಾದರು. ಕೀರ್ತನೆ, ಮುಂಡಿಗೆ, ಉಗಾಭೋಗ, ಸುಳಾದಿ, ದಂಡಕಗಳು ಮಾತ್ರವಲ್ಲದೇ, ಮೋಹನತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ ಎಂಬ ಕಾವ್ಯಗಳ ಮೂಲಕ ಜೀವನಪರ ಸಂದೇಶ, ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳುವಂತಹ ಉಪದೇಶಗಳನ್ನು ನೀಡಿ ಕನ್ನಡ ಹರಿದಾಸ ಪರಂಪರೆಯಲ್ಲಿ ದಿಟ್ಟ ಹೆಜ್ಜೆ ಇಟ್ಟವರಲ್ಲಿ ಒಬ್ಬರಾದರು.

Share this post

Post Comment