ಭಾರತದ ಅತಿದೊಡ್ಡ ಜಿಯೋ ಐಪಿಯೋ ತರಲು ರೇಡಿಯಾದ ಬಿಲಿನಿಯರ್ ಮುಕೇಶ ಅಂಬನಿ!

ಭಾರತದ ಅತಿದೊಡ್ಡ ಜಿಯೋ ಐಪಿಯೋ ತರಲು ರೇಡಿಯಾದ ಬಿಲಿನಿಯರ್ ಮುಕೇಶ ಅಂಬನಿ!

ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕತ್ವದ ಅಂಗಸಂಸ್ಥೆ ರಿಲಯನ್ಸ್ ಜಿಯೋ ಮೂಲಕ ದೇಶದ ಅತಿದೊಡ್ಡ ಐಪಿಒ ತರಲು RIL ಮುಖ್ಯಸ್ಥ ಮುಖೇಶ್ ಅಂಬಾನಿ ತೆರೆಮರೆಯ ಪ್ರಯತ್ನ ನಡೆಸಿದ್ದಾರೆ. ಈ ಐಪಿಒ ಬಂದಿದ್ದೇ ಆದಲ್ಲಿ ಭಾರತದ ಷೇರು ಮಾರುಕಟ್ಟೆ ಇತಿಹಾಸದಲ್ಲಿ ಅತಿದೊಡ್ಡ ಐಪಿಒ ಆಗಿರಲಿದೆ.

ಜಿಯೋ ಕಂಪನಿಯು ಟೆಲಿಕೋಮ ಇಂಡಸ್ಟಿçಯಲಿ ಕಾಲಿಟ್ಟು ಇಡೀ ಇಂಡಸ್ಟಿçಯನ್ನು ಬದಲಾವಣೆಗೋಳಿಸಿದೆ, ಅದರಲ್ಲಿ ಪ್ರಮುಖವಾಗಿ ದೇಶಿಯ ಮತ್ರು ವಿದೇಶಿ ಕಂಪನಿಗಳು ಕರೆ ಮತ್ತು ಇಟರನೆಟ ದರದಲ್ಲಿ ಹೆಚ್ಚಿನ ಹಣವನ್ನು ತೆಗೆದುಕೊಳುತ್ತಿದ್ದವು, ಜಿಯೋ ಕಂಪನಿಯು ಕರೆ ಮತ್ತು ಡೆಟಾ ದರಗಳನ್ನು ಕಡಿಮೆ ಮಾಡಿ, ಜನರಿಗೆ ಕಡಿಮೆ ದರದಲ್ಲಿ ಹೆಚ್ಚಿನ ಸೇವೆಗಳನ್ನು ನೀಡಲು ಪ್ರಾರಂಭಸಿತ್ತು, ಇದದಾ ನಂತರ ದೇಶಿಯ ಮತ್ತು ವಿದೇಶಿ ಕಂಪನಿಗಳು ದರಗಳನ್ನು Pಡಿಮೆ ಮಾಡಿದ್ದವು,

ದೇಶೀಯ ಷೇರು ಮಾರುಕಟ್ಟೆಯಲ್ಲಿ ಒಂದರ ಹಿಂದೆ ಮತ್ತೊಂದರಂತೆ ಕಂಪನಿಗಳ ಐಪಿಒಗಳು ಎಂಟ್ರಿ ಕೊಡುತ್ತಿದ್ದು, ದೊಡ್ಡ ದೊಡ್ಡ ವಿದೇಶಿ ಕಂಪನಿಗಳು ಸೇರಿದಂತೆ ದೇಶೀಯ ಕಂಪನಿಗಳು ಷೇರುಪೇಟೆಯಲ್ಲಿ ಪಟ್ಟಿಯಾಗಲು ಎದುರು ನೋಡುತ್ತಿವೆ. ಇದೇ ಸಾಲಿನಲ್ಲಿ ದೇಶದ ಅತಿದೊಡ್ಡ ಐಪಿಒ ತರಲು ರಿಲಯನ್ಸ್ ಜಿಯೋ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.

ರಿಲಯನ್ಸ್ ಜಿಯೋ ಐಪಿಒ ಆಗಿ ಎಂಟ್ರಿ ಆದಲ್ಲಿ ಮುಂದಿನ ದಿನಗಳಲ್ಲಿ ದೇಶಿಯ ಷೇರುಪೇಟೆಯಲ್ಲಿ ಐಪಿಒ ಕ್ರೇಜ್ ಮತ್ತಷ್ಟು ತೀವ್ರಗೊಳ್ಳಲಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಹಲವು ಬೃಹತ್ ಐಪಿಒಗಳನ್ನು ಕಾಣಬಹುದು ಮತ್ತು ಎಲ್ಐಸಿಯ ಅತಿ ದೊಡ್ಡ ಐಪಿಒ ದಾಖಲೆಯು ಮೈಲುಗಳಷ್ಟು ಹಿಂದೆ ಉಳಿಯಬಹುದು.

ವರದಿ ಪ್ರಕಾರ, ಐಪಿಒ ಮಾರುಕಟ್ಟೆಯಲ್ಲಿ ತೀವ್ರಗೊಂಡ ಚಟುವಟಿಕೆಗಳ ನಡುವೆ, ದೇಶದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಕೂಡ ರೇಸ್ಗೆ ಪ್ರವೇಶಿಸಲು ತಯಾರಿ ನಡೆಸಿದ್ದಾರೆ. ಮುಕೇಶ್ ಅಂಬಾನಿ ಅವರ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಇನ್ಫೋಕಾಮ್ ಐಪಿಒ ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ವರದಿಯು ಐಪಿಒ ಗಾತ್ರದ ಬಗ್ಗೆ ಸುಳಿವು ನೀಡಿದೆ ಮತ್ತು ಇದು 55 ಸಾವಿರ ಕೋಟಿ ರೂ.ಗಿಂತ ದೊಡ್ಡದಾಗಿರಬಹುದು ಎಂದು ಹೇಳಿದೆ.

ಎಲ್ಐಸಿ ಪೇಟಿಎಂ ದಾಖಲೆಯನ್ನು ಮುರಿದು ನಂಬರ್ 1 ಆಗಬಹುದು!
ಪ್ರಸ್ತುತ ದೇಶದ ಅತಿ ದೊಡ್ಡ ಐಪಿಒ ದಾಖಲೆ ಎಲ್ ಐಸಿ ಹೆಸರಿನಲ್ಲಿದೆ. ಸರ್ಕಾರಿ ವಿಮಾ ಕಂಪನಿ ಎಲ್ಐಸಿ ಮೇ 2022 ರಲ್ಲಿ ಐಪಿಒ ಯೊಂದಿಗೆ ಬಂದಿತ್ತು, ಅದರ ಗಾತ್ರ ಸುಮಾರು 21 ಸಾವಿರ ಕೋಟಿ ರೂ. ನಷ್ಟಿದೆ. ಭಾರತದ ಅತಿ ದೊಡ್ಡ ಐಪಿಒ ವಿಷಯದಲ್ಲಿ, ಎಲ್ಐಸಿ ಪೇಟಿಎಂ ನ ಮೂಲ ಕಂಪನಿ ಒನ್97 ಕಮ್ಯುನಿಕೇಷನ್ಸ್ನ ದಾಖಲೆಯನ್ನು ಮುರಿದಿದೆ. ಇದು ನವೆಂಬರ್ 2021 ರಲ್ಲಿ 18,300 ಕೋಟಿ ರೂಪಾಯಿಗಳ ಐಪಿಒ ಅನ್ನು ಪ್ರಾರಂಭಿಸಿತು.

ಹುಂಡೈ ಇಂಡಿಯಾ ಎಲ್ಐಸಿ ಗಿಂತ ದೊಡ್ಡ ಐಪಿಒ ಅನ್ನು ತರುತ್ತಿದೆ
ಇದೀಗ ಎರಡು ವರ್ಷಗಳ ಅಂತರದ ಬಳಿಕ ಎಲ್ಐಸಿಯ ಅತಿ ದೊಡ್ಡ ಐಪಿಒ ದಾಖಲೆ ಮುರಿಯುವ ಸಾಧ್ಯತೆಯಿದೆ. ರಿಲಯನ್ಸ್ ಜಿಯೋ ಐಪಿಒಗೂ ಮುನ್ನವೇ ಆ ದಾಖಲೆ ಮುರಿಯಬಹುದು. ದಕ್ಷಿಣ ಕೊರಿಯಾದ ಆಟೋಮೊಬೈಲ್ ಕಂಪನಿ ಹ್ಯುಂಡೈ ತನ್ನ ಸ್ಥಳೀಯ ಅಂಗಸಂಸ್ಥೆಯಾದ ಹ್ಯುಂಡೈ ಇಂಡಿಯಾದ IPO ಅನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಹ್ಯುಂಡೈ ಇಂಡಿಯಾ ಐಪಿಒಗಾಗಿ ಸೆಬಿಗೆ ಡ್ರಾಫ್ಟ್ ಅನ್ನು ಸಲ್ಲಿಸಿದೆ. ಕರಡು ಪ್ರಕಾರ, ಹುಂಡೈ ಇಂಡಿಯಾದ ಐಪಿಒ 25 ಸಾವಿರ ಕೋಟಿ ರೂ.

ರಿಲಯನ್ಸ್ ಜಿಯೊದ ಪ್ರಸ್ತಾವಿತ ಐಪಿಒ ಕುರಿತು ನೋಡಿದ್ರೆ, ರಿಲಯನ್ಸ್ ಇಂಡಸ್ಟ್ರೀಸ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ವಿಷಯದ ಕುರಿತು ಸ್ಪಷ್ಟಪಡಿಸಬಹುದು ಎಂದು ವಿಶ್ಲೇಷಕರು ನಂಬಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ನ ಎಜಿಎಂ ಈ ವರ್ಷದ ಆಗಸ್ಟ್ನಲ್ಲಿ ನಡೆಯಲಿದೆ. ಜೆಫರೀಸ್ ಪ್ರಕಾರ, ಸುಂಕ ಹೆಚ್ಚಳ ಮತ್ತು 5G ಹಣಗಳಿಕೆಯ ನಂತರ, ಜಿಯೋ ಮೌಲ್ಯವು 11.11 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಕಂಪನಿಯು ಐಪಿಒದಲ್ಲಿ ಕನಿಷ್ಠ 5% ಪಾಲನ್ನು ಮಾರಾಟ ಮಾಡಿದರೆ, ಅದರ ಗಾತ್ರವು 55,500 ಕೋಟಿ ರೂ. ನಷ್ಟಿದೆ

Share this post

Post Comment