ಮಂಗಳವಾರ ಐಸಿಸಿ, ಭಾರತದ ಕ್ರಿಕೆಟ್ ಅಭಿಮಾನಿಗಳು ಖುಷಿ ಪಡುವ ಸುದ್ದಿಯನ್ನು ನೀಡಿದೆ. ಐಸಿಸಿ ನೂತನ ಅಧ್ಯಕರಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಈ ಮೂಲಕ ಕಿರಿಯ ಅಧ್ಯಕ್ಷ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಐಸಿಸಿ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ ಐದನೇ ಭಾರತೀಯ ಎಂಬ ಹಿರಿಮೆ ಸಹ ಇವರದ್ದಾಗಿದೆ.
ಐಸಿಸಿ ಅಧ್ಯಕ್ಷರ ಹುದ್ದೆಗೆ ಏರಲು 16 ಸದಸ್ಯರ ಪೈಕಿ 9 ಸದಸ್ಯರ ಬೆಂಬಲ ಸಿಗಬೇಕಿತ್ತು. ಇವರಿಗೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಬಹಿರಂಗವಾಗಿ ಬೆಂಬಲವನ್ನು ಸೂಚಿಸಿದ್ದವು.
ಮಂಗಳವಾರ ಅವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಜಯ್ ಶಾ ಕ್ರಿಕೆಟ್ ಬ್ಯಾಕ್ ಗ್ರೌಂಡ್ ಹೊಂದದೇ ಇದ್ದರೂ, ಇಂತಹ ಉನ್ನತ ಹುದ್ದೆಗೆ ಚಿಕ್ಕ ವಯಸ್ಸಿನಲ್ಲಿ ತಲುಪಿದ್ದು ಭಾರತೀಯರು ಖುಷಿಪಡುವ ಸಂಗತಿಯಾಗಿದೆ