ಸರ್ಕಾರದ ವಿರುದ್ಧ ಪಾದಯಾತ್ರೆಗೆ ಜೆಡಿಎಸ್‌ ಮತ್ತು ಬಿಜೆಪಿ ರೆಡಿ !

ಸರ್ಕಾರದ ವಿರುದ್ಧ ಪಾದಯಾತ್ರೆಗೆ ಜೆಡಿಎಸ್‌ ಮತ್ತು ಬಿಜೆಪಿ ರೆಡಿ !

ಬಿಜೆಪಿ-ಜೆಡಿಎಸ್ ಪಕ್ಷಗಳು ಜೋತೆಗೂಡಿ ಸರ್ಕಾರದ ವಿರುದ್ಧ ಮುಡಾ ಹಗರಣ ಹಾಗೂ ವಾಲ್ಮೀಕಿ ನಿಗಮ ಹಗರಣದ ವಿರುದ್ಧ ಬೆಂಗಳೂರಿಂದ ಮೈಸೂರುವರೆಗೆ ಪ್ರತಿಭಟನಾ ಪಾದಯಾತ್ರೆ ನಡೆಸಲಾಗುವುದು ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ. ಅರೋಗ್ಯದಲ್ಲಿ ಸಮಸ್ಯೆಯಿರುವುದರಿಂದ ಎಚ್‌ಡಿ ಕುಮಾರಸ್ವಾಮಿ ಹಾಗೂ ದೇವೇಗೌಡರಿಗೆ ಸಾಧ್ಯವಾಗದೇ ಇರುವ ಕಾರಣ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿ ಈ ಕಾರ್ಯಕ್ರಮವನ್ನು ಮುಂದುವರಿಸಲಿದ್ದಾರೆ ಎಂದು ಮಾಹಿತಿ ಪ್ರಕಾರ ತಿಳಿದು ಬಂದಿದೆ.

ರಾಜ್ಯದಲ್ಲಿ ಹಲವು ನಿಗಮಗಳಲ್ಲಿ ಹಗರಣ ನಡೆದಿವೆ ಎಂದು ವಿರುದ್ಧ ಪಕ್ಷದವರು ಹೇಳುತ್ತಿದ್ದಾರೆ. ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕೆಂದು ಪಾದ್ರಯಾತ್ರೆ ನಡೆಸಲಾಗುತ್ತಿದೆ. ಅದರ ಸಲುವಾಗಿ ಆಗಷ್ಟ 3 ರಂದು ಬಿಜೆಪಿ ಮತ್ತು ಜೆಡಿಎಸ್‌ ಎರಡು ಪಕ್ಷಗಳ ಘಟಾನುಘಟಿ ನಾಯಕರುಗಳೆಲ್ಲರು ಭಾಗಿಯಾಗಲಿದ್ದಾರೆ. ಆದರೆ, ಕೆಲಸದ ಒತ್ತಡ ಮತ್ತು ಅನಾರೋಗ್ಯದ ನಿಮಿತ್ತ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಭಾಗಿಯುವುದು ಅನುಮಾನ. ಆ ಸ್ಥಾನವನ್ನು ನಿಖಿಲ್‌ ಕುಮಾರಸ್ವಾಮಿ ತುಂಬಲಿದ್ದಾರೆ ಎಂಬ ಎಚ್‌ಡಿಕೆ ಹೇಳಿಕೆಗಳು ಪಕ್ಷದ ರಾಜ್ಯದ ಸಾರಥ್ಯ ಯಾರ ಕೈ ಸೇರಲಿದೆ ಎಂಬುದರ ಸುಳಿವು ನೀಡಿದೆ.

2019 ರಲ್ಲಿ ಮಂಡ್ಯ ಲೋಕಸಭೆಯಲ್ಲಿ ಸುಮಲಾತ ಅಂಬರೀಶ ವಿರುದ್ಧ ಸೋಲು ಕಂಡಿದ್ದರು ಹಾಗೂ 2023 ರಲ್ಲಿ ರಾಮನಗರ ವಿಧಾನಸಭಾ ಚುನಾವಣೆಗಳಲ್ಲಿ ಸೋಲು ಕಂಡಿರುವ ನಿಖಿಲ್‌ ಕುಮಾರಸ್ವಾಮಿ ಅವರು ಜೆಡಿಎಸ್‌ ಯುವ ಘಟಕದ ಅಧ್ಯಕ್ಷರಾಗಿದ್ದಾರೆ. ಎಚ್‌.ಡಿ.ದೇವೇಗೌಡ ಅವರಿಗೆ ವಯಸ್ಸಾಗಿದ್ದು, ಕುಮಾರಸ್ವಾಮಿ ಸಹ ಕೇಂದ್ರ ಸಚಿವರಾಗಿರುವುದು ಮಾತ್ರವಲ್ಲದೇ, ಆರೋಗ್ಯದ ಸಮಸ್ಯೆಯಿಂದ ವಿಶ್ರಾಂತಿ ಪಡೆಯಬೇಕಿದೆ. ಇನ್ನೂ ಎಚ್‌.ಡಿ.ರೇವಣ್ಣ ಅವರ ಕುಟುಂಬ ಕಾನೂನು ಹೋರಾಟದಲ್ಲಿ ಸಿಲುಕಿಕೊಂಡಿದೆ.ಬೆಂಗಳೂರಿನಿಂದ ಮೈಸೂರು ವರೆಗೆ ನಡೆಸುತ್ತಿರುವ ಪಾದಯಾತ್ರೆಯು ಯಾವ ಮಟ್ಟದಲ್ಲಿ ಮತ್ತು ಎಷು ಪ್ರಮಾಣ ಗೆಲುವು ಸಾಧಿಸುತ್ತದೆ ಎಂದು ಕಾದು ನೋಡಬೆಕಾಗುತ್ತದೆ.

Share this post

Post Comment