ಮೂರನೇ ದಿನಕ್ಕೆ 415 ಕೋಟಿ ರೂ ಟಿಕೆಟ್ ಮಾರಟ “ಕಲ್ಕಿ 2898 ಎಡಿ” ಸಿನಿಮಾ.

ಮೂರನೇ ದಿನಕ್ಕೆ 415 ಕೋಟಿ ರೂ ಟಿಕೆಟ್ ಮಾರಟ “ಕಲ್ಕಿ 2898 ಎಡಿ” ಸಿನಿಮಾ.

ತೆಲುಗು ಸಿನಿಮಾ ಮಾರುಕಟ್ಟೆಯಲ್ಲಿ ಹೆಸರು ಹೊಂದಿರುವ ಪ್ರಭಾಸ್ ರವರು ಆನೇಕ ಸಿನಿಮಾಗಳನ್ನು ಹಲವಾರು ಸಿನಿಮಾ ತಯಾರಿಗೆ ಕಂಪನಿಗಳ ಜೋತೆ ಕೆಲಸ ಮಾಡಿದ್ದಾರೆ, ಇತ್ತಿಚ್ಚಿಗೆ ಅಷ್ಟೇ ಅವರ ನಾಯಕತ್ವದಲ್ಲಿ ಮತ್ತೊಂದು ಸಿನಿಮಾ ‘ಕಲ್ಕಿ 2898 ಎಡಿ’. ನಾಗ್ ಅಶ್ವಿನ್ನಿರ್ದೇಶನ ಮಾಡಿರುವ ಈ ಸಿನಿಮಾವನ್ನು ವೈಜಯಂತಿ ಮೂವೀಸ್ ಸುಮಾರು 600 ಕೋಟಿ ರೂ. ರ‍್ಚು ಮಾಡಿ ನಿರ್ಮಾಣ ಮಾಡಿದೆ. ಸದ್ಯ ಬಾಕ್ಸ್ ಆಫೀಸ್ನಲ್ಲಿ ಸುನಾಮಿ ಎಬ್ಬಿಸಿರುವ ‘ಕಲ್ಕಿ 2898 ಎಡಿ’ ಚಿತ್ರವು ಮೊದಲ ಮೂರು ದಿನಗಳಿಗೆ 415 ಕೋಟಿ ರೂಪಾಯಿ ಬಾಚಿಕೊಂಡಿದೆ.

ಇವರ ಹಿಂದಿನ ಕೆಲವು ಸಿನಮಾಗಳು ಬಹಳಷ್ಟು ಹೆಸರನ್ನು ತಂದು ಕೋಟ್ಟಿವೆ , ಅದರಲ್ಲಿ ಮುಖ್ಯವಾಗಿ ಬಾಹುಬಲಿ ಮತ್ತು ಬಾಹುಬಲ್ಲಿ-2, ಸಲಾರ ಸಿನಿಮಾಗಳು.

ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್’ ಪ್ರಭಾಸ್ ಅವರ ಹೊಸ ಸಿನಿಮಾ ‘ಕಲ್ಕಿ 2898 ಎಡಿ’ ಸಿನಿಮಾಗೆ ಬಾಕ್ಸ್ ಆಫೀಸ್ನಲ್ಲಿಭರ್ಜರಿ ಕಮಾಯಿ ಆಗುತ್ತಿದೆ. ‘ಮಹಾನಟಿ’ ಖ್ಯಾತಿಯ ನಾಗ್ ಅಶ್ವಿನ್ ನಿರ್ದೇಶನ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೂ ಮೊದಲ ಮೂರು ದಿನ ಮಾತ್ರ ನೂರಾರು ಕೋಟಿ ರೂಪಾಯಿಗಳನ್ನು ನಿರ್ಮಾಪಕರಿಗಗೆ ಜೇಬಿಗೆ ಇಳಿಸಿದೆ.

ಮೊದಲ ಮೂರು ದಿನದ ಗಳಿಕೆ ಎಷ್ಟು?
ಸೈನ್ಸ್ ಫಿಕ್ಷನ್ ಮಾದರಿಯ ‘ಕಲ್ಕಿ 2898 ಎಡಿ’ ಸಿನಿಮಾವು ಮೊದಲ ಮೂರು ದಿನಗಳಿಗೆ ವಿಶ್ವಾದ್ಯಂತ 415 ಕೋಟಿ ರೂ. ಬಾಚಿಕೊಂಡಿದೆ. ಮೊದಲ ದಿನ ‘ಕಲ್ಕಿ 2898 ಎಡಿ’ ಸಿನಿಮಾವು 191.50 ಕೋಟಿ ರೂ. ಬಾಚಿಕೊಂಡಿತ್ತು. ಎರಡನೇ ದಿನ 107 ಕೋಟಿ ರೂ. ಗಳಿಸಿತ್ತು. ಮೂರನೇ ದಿನವಾದ ಶನಿವಾರ (ಜೂನ್ 29) 116.5 ಕೋಟಿ ರೂ. ಗಳಿಸಿದೆ.

ಬಾಲಿವುಡ್ನಲ್ಲಿ ಹೇಗಿದೆ ರೆಸ್ಪಾನ್ಸ್?
‘ಕಲ್ಕಿ 2898 ಎಡಿ’ ಸಿನಿಮಾವು ಹಿಂದಿಯಲ್ಲೂ ಉತ್ತಮ ಪ್ರರ‍್ಶನ ಕಾಣುತ್ತಿದೆ. ‘ಬಾಹುಬಲಿ’ ನಂತರ ಪ್ರಭಾಸ್ ಸಿನಿಮಾಗಳಿಗೆ ಹಿಂದಿಯಲ್ಲೂ ಮಾರ್ಕೆಟ್ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಾಗಿಯೇ, ‘ಕಲ್ಕಿ 2898 ಎಡಿ’ ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಕ್ಕಿದೆ. ಇನ್ನು ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾಣಿ ಈ ಸಿನಿಮಾದಲ್ಲಿ ನಟಿಸಿರುವುದು ಇನ್ನೂ ದೊಡ್ಡ ಪ್ಲಸ್ ಪಾಯಿಂಟ್ ಎಂದೇ ಹೇಳಬಹುದು.

‘ಕಲ್ಕಿ 2898 ಎಡಿ’ ಸಿನಿಮಾದ ಹಿಂದಿ ರ‍್ಷನ್ಗೆ ಮೊದಲ ದಿನ 22.50 ಕೋಟಿ ರೂ. ಕಲೆಕ್ಷನ್ ಆಗಿತ್ತು. ಎರಡನೇ ದಿನ 23.25 ಕೋಟಿ ರೂ., ಮೂರನೇ ದಿನ 26.25 ಕೋಟಿ ರೂ., ಗಳಿಕೆ ಆಗಿದೆ. ಒಟ್ಟು ಮೊದಲ ಮೂರು ದಿನಗಳಿಗೆ 72 ಕೋಟಿ ರೂ. ಹಣ ಹರಿದುಬಂದಿದೆ. ಮೊದಲ ದಿನದಿಂದಲೇ ಗಳಿಕೆಯಲ್ಲಿ ಏರಿಕೆಯನ್ನ ಕಾಣುತ್ತಿರುವ ‘ಕಲ್ಕಿ’ ಸಿನಿಮಾ ಹಿಂದಿ ರ‍್ಷನ್ ಮೊದಲ ವಾರಾಂತ್ಯಕ್ಕೆ ಶತಕೋಟಿ ಕ್ಲಬ್ ಸೇರುವ ಸಾಧ್ಯತೆ ಇದೆ.

Share this post

Post Comment