ತವರು ಜಿಲ್ಲೆಗೆ ಖಡಕ್ ಪೊಲೀಸ್ ಕಮಿಷನರ್

ತವರು ಜಿಲ್ಲೆಗೆ ಖಡಕ್ ಪೊಲೀಸ್ ಕಮಿಷನರ್

ಕಲಬುರಗಿ : ಕಲಬುರಗಿ ನೂತನ ಪೊಲೀಸ್ ಕಮಿಷನರ್ ಆಗಿ 2009ರ ಬ್ಯಾಚಿನ ಐಪಿಎಸ್ ಅಧಿಕಾರಿ ಕಲಬುರಗಿ ಮೂಲದವರೇ ಆದ ಡಾ.ಎಸ್‌‌ಡಿ ಶರಣಪ್ಪ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಈ ಹಿಂದೆ ಇದ್ದ ಪೊಲೀಸ್ ಕಮಿಷನರ್ ಚೇತನ್ ಆರ್ ಅವರು ವರ್ಗಾವಣೆಗೊಂಡಿರುವ ಹಿನ್ನೆಲೆ ಕಳೆದ ಒಂದು ತಿಂಗಳಿನಿಂದ ಖಾಲಿ ಉಳಿದಿದ್ದ ಪೊಲೀಸ್ ಕಮಿಷನರ್ ಹುದ್ದೆಗೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಗ್ರಾಮದವರೆ ಆದ ಐಪಿಎಸ್ ಅಧಿಕಾರಿ ಶರಣಪ್ಪ‌ ಅವರನ್ನು ನಿಯೋಜಿಸಲಾಗಿದೆ. ಈ ಮೂಲಕ ತವರು ಜಿಲ್ಲೆಗೆ ಪೋಲಿಸ್ ಕಮಿಷನರ್ ಆಗಿ ನೇಮಕವಾದ ಮೊದಲ ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಕೆ ಶರಣಪ್ಪ ಅವರದಾಗಿದೆ‌.

ಐಪಿಎಸ್ ಅಧಿಕಾರಿ ಶರಣಪ್ಪ ಅವರು ಈ ಹಿಂದೆ ರೈಲ್ವೆ ಇಲಾಖೆ ಡಿಐಜಿಯಾಗಿ, ಬೆಂಗಳೂರಿನಲ್ಲಿ ದಕ್ಷಿಣ ವಿಭಾಗ, ಪೂರ್ವ ವಿಭಾಗ ಹಾಗೂ ಸಿಸಿಬಿ ಕ್ರೈಂ ವಿಭಾಗದ ಡಿಸಿಪಿಯಾಗಿ ಸೇವೆ ಸಲ್ಲಿಸಿದ್ದು, ಹಲವು ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸಿದ್ದಾರೆ

Share this post

Post Comment