ಗುರುನಾನಕ್‌ ಜಯಂತಿಯ ಆಚರಣೆ, ಶುಭ ಸಮಯ ಮತ್ತು ಮಹತ್ವದ ಬಗ್ಗೆ ತಿಳಿಯಿರಿ

ಗುರುನಾನಕ್‌ ಜಯಂತಿಯ ಆಚರಣೆ, ಶುಭ ಸಮಯ ಮತ್ತು ಮಹತ್ವದ ಬಗ್ಗೆ ತಿಳಿಯಿರಿ

ಗುರುನಾನಕ್‌ ಜಯಂತಿ ಸಿಖ್‌ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಸಿಖ್‌ ಧರ್ಮದ ಜನರು ಸಿಖ್ಖರ 10 ಧರ್ಮ ಗುರುಗಳಲ್ಲಿ ಮೊದಲಿಗರಾದ ಗುರುನಾನಕ್‌ ಜೀ ಅವರ ಜಯಂತಿಯನ್ನು ಪ್ರಕಾಶ್‌ ಪರ್ವ ಅಥವಾ ಗುರು ಪರ್ಬ ಎಂಬ ಹೆಸರಿನಲ್ಲಿ ಬಹಳ ಭಕ್ತಿಯಿಂದ ಶ್ರದ್ಧಾಪೂರ್ವಕವಾಗಿ ಆಚರಿಸುತ್ತಾರೆ. ಪ್ರತಿವರ್ಷ ಕಾರ್ತಿಕ ಮಾಸದ ಹುಣ್ಣಿಮೆಯ ದಿನ ಪ್ರಕಾಶ್‌ ಪರ್ವ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ 555 ನೇ ಗುರುನಾನಕ್‌ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಯಾರು ಈ ಗುರು ನಾನಕ್‌  ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.

ಗುರುನಾನಕ್‌ ಅವರು ಸಿಖ್‌ ಧರ್ಮದ ಸಂಸ್ಥಾಪಕರು ಮತ್ತು ಮೊದಲ ಸಿಖ್‌ ಗುರು. ಅವರು 1469 ರಲ್ಲಿ ಕಾರ್ತಿಕ ಹುಣ್ಣಿಮೆಯಂದು ಇಂದಿನ ಪಾಕಿಸ್ತಾನದ ಲಹೋರ್‌ ಬಳಿಯ ತಲ್ವಾಂಡಿಯಲ್ಲಿ ಜನಿಸಿದರು. ಈ ಸ್ಥಳವನ್ನು ನಂಕಾನಾ ಸಾಹಿಬ್‌ ಎಂದು ಕರೆಯಲಾಗುತ್ತದೆ. ಸಣ್ಣ ವಯಸ್ಸಿನಿಂದಲೇ ಹೆಚ್ಚಿನ ಸಮಯವನ್ನು ಧ್ಯಾನದಲ್ಲಿ ಕಳೆಯುತ್ತಿದ್ದ ಇವರು ಆಧ್ಯಾತ್ಮಿಕತೆ, ಶುದ್ಧತೆ, ಪಾವಿತ್ರ್ಯತೆ, ಸತ್ಯ, ಒಳ್ಳೆಯತನ ಮತ್ತು ಭಕ್ತಿಗೆ ಹೆಚ್ಚು ಆಕರ್ಷಿತರಾಗಿದ್ದರು. ನಂತರ ಇವರು ಏಕ್‌ ಓಂಕಾರ್‌ (ದೇವರು ಒಬ್ಬನೆ), ಸಮಾನತೆ, ಭ್ರಾತೃತ್ವ, ನಮ್ರತೆ, ಸೇವೆ, ಪ್ರೀತಿ, ಸದ್ಗುಣಗಳ ಜೀವನ ಸಂದೇಶವನ್ನು ಹರಡುವ ಮೂಲಕ ಮನುಕುಲವನ್ನು ಉದ್ಧಾರ ಮಾಡುವ ಕಾರ್ಯದಲ್ಲಿ ಹಾಗೂ ಸಮಾಜ ಸುಧಾರಣೆ ಮಾಡುವಲ್ಲಿ ತಮ್ಮ ಇಡೀ ಜೀವನವನ್ನು ಕಳೆದರು. ಅವರು ತಮ್ಮ ಬೋಧನೆಗಳ ಮೂಲಕ ಸಿಖ್‌ ಧರ್ಮಕ್ಕೆ ಅಡಿಪಾಯ ಹಾಕಿದರು.

Share this post

Post Comment