ನ್ಯೂಸ್ ಡೆಸ್ಕ್ ಉತ್ತರ ಕರ್ನಾಟಕ : ಕನ್ನಡ ಚಿತ್ರರಂಗದಲ್ಲಿ ಮೀಟೂ ಆರೋಪಕ್ಕೆ ಸಂಬಂಧಿಸಿದಂತೆ ಚಲನಚಿತ್ರ ವಾಣಿಜ್ಯ ಮಂಡಳಿಯು ಇವತ್ತು ನಡೆಸಿದ ಸಭೆ ಯಶಸ್ವಿಯಾಗಿತ್ತು.
ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಇತಿಹಾಸವಿದೆ. ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆಗಳು ವಾಣಿಜ್ಯ ಮಂಡಳಿ ಗಮನಕ್ಕೆ ಬಂದಿಲ್ಲ. ಒಂದೇ ವೇಳೆ ತೊಂದರೆಯಾಗಿರುವ ಬಗ್ಗೆ ಸಮಸ್ಯೆ ಹೇಳಿಕೊಂಡರೇ ಬಗೆಹರಿಸುವ ಕೆಲಸವನ್ನು ವಾಣಿಜ್ಯ ಮಂಡಳಿ ಮಾಡಲಿದೆ. ಹೀಗಾಗಿ ಕೇರಳ ಮಾದರಿಯಲ್ಲಿ ಸಮಿತಿ ರಚನೆ ಬೇಡ ಎಂಬ ನಿರ್ಧಾರವನ್ನು ವಾಣಿಜ್ಯ ಮಂಡಳಿಯಲ್ಲಿಂದು ನಡೆದ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಮತ್ತು ಇತರ ಸಮಸ್ಯೆಗಳನ್ನು ಪರಿಹರಿಸಲು ಸಮಿತಿ ರಚನೆಯಾಗಬೇಕು ಎಂಬ ಒತ್ತಾಯವನ್ನು ಕೆಲವು ನಟ-ನಟಿಯರು ಸಭೆಯಲ್ಲಿ ಮಂಡಿಸಿದರೆ, ಚಿತ್ರೋದ್ಯಮದ ಸಮಸ್ಯೆ ಪರಿಹಾರಕ್ಕೆ ವಾಣಿಜ್ಯ ಮಂಡಳಿ ಇದೆ. ಸಮಿತಿ ಅಗತ್ಯವಿಲ್ಲ. ನಮ್ಮಲ್ಲೇ ಎಲ್ಲವನ್ನು ಬಗೆಹರಿಸಿಕೊಳ್ಳೋಣ ಎಂಬ ವಿರೋಧದ ಮಾತುಗಳು ವ್ಯಕ್ತವಾಗಿದ್ದು, ಸಮಿತಿ ರಚನೆ ಸಂಬಂಧ ಪರ-ವಿರೋಧ ಅಭಿಪ್ರಾಯಗಳಿಂದ ಸಭೆಯಲ್ಲಿ ಮಾತಿನ ಚಕಮಕಿ, ಗದ್ದಲ ನಡೆಯಿತು ಎಂದು ಹೇಳಲಾಗಿದೆ.ಇವತ್ತಿನ ದಿನ ಸುವರ್ಣಾಕ್ಷರದಲ್ಲಿ ಬರೆಯಬೇಕಾದ ದಿನ ಎಂದು ಹೇಳಿದರು.
ಇದೇ ವೇಳೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಪ್ರತಿಕ್ರಿಯಿಸಿ, ಪಾಶ್ ಕಮಿಟಿ ಮಾಡಬೇಕು ಎಂದು ಹೇಳಿದ್ದೇವೆ. ಕಮಿಟಿ ಹೇಗಿರಬೇಕು ಅಂತಾ ಕಾನೂನು ಇದೆ. ಶೂಟಿಂಗ್ ವೇಳೆ ನಟಿಯರಿಗೆ ಸೌಲಭ್ಯ ನೀಡಿ. 17 ಅಂಶಗಳ ಜಾರಿಗೆ ಮಹಿಳಾ ಆಯೋಗ ಸೂಚನೆ ಕೊಟ್ಟಿದೆ. ವರದಿ ಜಾರಿಗೆ ವಾಣಿಜ್ಯ ಮಂಡಳಿ ಸಮಯಾವಕಾಶ ಮಾಡಲಾಗಿದೆ ಎಂದು ಹೇಳಿದಾರೆ.
ಇನ್ನು ಮೀಟೂ ತಡೆಗೆ ಮುಂದಿನ ದಿನಗಳಲ್ಲಿ ಮತ್ತೊಂದು ಸಭೆ ನಡೆಸಲಾಗುವುದು. ಈ ಸಭೆಗೆ ಎಲ್ಲ ನಟಿಯರನ್ನು ಆಮಂತ್ರಿಸಬೇಕು ಎಂದು ತಿಳಿಸಿದರು.