ಇತಿಹಾಸದಿಂದ ಪಾಠ ಕಲಿತಿಲ್ಲ ಪಾಕ್‌ : ನರೇಂದ್ರ ಮೋದಿ

ಇತಿಹಾಸದಿಂದ ಪಾಠ ಕಲಿತಿಲ್ಲ ಪಾಕ್‌ : ನರೇಂದ್ರ ಮೋದಿ

ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ದ್ರಾಸ್ ನಗರದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ, ನಂತರ ಭಾ಼ಷಣ ಮಾಡಿದ ನರೇಂದ್ರ ಮೋದಿ ನಾನಿಲ್ಲಿ ನಿಂತು ಮಾತನಾಡುತ್ತಿರುವ ನೆಲದಿಂದ ಉಗ್ರ ಪೋಷಕರು ನೇರವಾಗಿ ನನ್ನ ಮಾತು ಕೇಳಿಸಿಕೊಳ್ಳಬಲ್ಲರು ಎಂದ ಪ್ರಧಾನಿ ಮೋದಿ, ಉಗ್ರವಾದ ಹಾಗೂ ಸುಳ್ಳನ್ನು ಸತ್ಯ ಎಂದಿಗೂ ಸೋಲಿಸುತ್ತದೆ ಎಂದು ನೇರೆ ರಾಷ್ಟ್ರಗಳಿಗೆ ಪರೋಕ್ಷವಾಗಿ ಹೇಳಿದ್ದರು.

ಕಾರ್ಗಿಲ್ ವಿಜಯ ದಿನದ ಸ್ಮರಣಾರ್ಥ 1999ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಹುತಾತ್ಮರಾದ ಸೈನಿಕರಿಗೆ ಪ್ರಧಾನಿ ಮೋದಿ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು ಕಾರ್ಗಿಲ್ ಯುದ್ಧದಲ್ಲಿ ಆದ ಹಾನಿಯಿಂದ ಪಾಕ್ ಯಾವುದೇ ಪಾಠ ಕಲಿತಿಲ್ಲ, ಇಂದಿಗೂ ಭಯೋತ್ಪಾದಕರನ್ನು ಗಡಿಯಾಚೆಯಿಂದ ಭಾರತಕ್ಕೆ ರವಾನೆ ಮಾಡುತ್ತಿದೆ ಎಂದು ಹರಿಹಾಯ್ದರು.

ಪಾಕಿಸ್ತಾನವು ಎಷ್ಟೂ ಬಾರಿ ಯುಧ ಮಾಡಲು ಪ್ರಯತ್ನಿಸಿತ್ತು ಆದರೆ ಗೆಲ್ಲಲು ಸಾಧ್ಯವಾಗಲಿಲ್ಲ, ಪಾಕಿಸ್ತಾನ ಇತಿಹಾಸದಿಂದ ಯಾವುದೇ ಪಾಠ ಕಲಿತಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

ಕಾರ್ಗಿಲ್ ಜಿಲ್ಲೆಯ ದ್ರಾಸ್ ಪಟ್ಟಣದಲ್ಲಿ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಗೌರವ ಅರ್ಪಣೆ ಮಾಡಿದರು. ದೇಶಕ್ಕಾಗಿ ಸೈನಿಕರ ತ್ಯಾಗ ಅವರನ್ನು ಅಮರರನ್ನಾಗಿಸಿದೆ ಎಂದು ಹೇಳಿದ ಪ್ರಧಾನಿ ಮೋದಿ, ಕಾರ್ಗಿಲ್ ವಿಜಯ ದಿನದಂದು ಅವರನ್ನು ಸ್ಮರಿಸಬೇಕು ಎಂದರು.

ನಾನು ಇಂದು ನಿಂತು ಮಾತನಾಡುತ್ತಿರುವ ನೆಲದಿಂದ ಭಯೋತ್ಪಾದಕರ ಸೂತ್ರದಾರರು ನೇರವಾಗಿ ನನ್ನ ಮಾತುಗಳನ್ನ ಕೇಳಬಲ್ಲರು ಎಂದು ಹೇಳಿದ ಪ್ರಧಾನಿ ಮೋದಿ, ಕಾರ್ಗಿಲ್ ಯುದ್ಧಕ್ಕೂ ಮುನ್ನ ಭಾರತ ಶಾಂತಿ ಸ್ಥಾಪನೆಗೆ ಯತ್ನಿಸುತ್ತಿತ್ತು. ಆದರೆ, ಪಾಕಿಸ್ತಾನ ಯುದ್ಧಕ್ಕೆ ಮುಂದಾಯ್ತು. ಆದರೆ, ಉಗ್ರವಾದ ಹಾಗೂ ಸುಳ್ಳನ್ನ ಸತ್ಯ ಸೋಲಿಸುತ್ತದೆ. ಪಾಕಿಸ್ತಾನ ದುಸ್ಸಾಹಸ ಮಾಡಿದಾಗಲೆಲ್ಲಾ ಪೆಟ್ಟು ತಿಂದಿದೆ. ಇಷ್ಟಾದರೂ ಇತಿಹಾಸದಿಂದ ಪಾಠ ಕಲಿತಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

ಅಗ್ನಿಪಥ ಯೋಜನೆ ವಿಚಾರ ಸಂಬಂಧವೂ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ, ಅಗ್ನಿಪಥ ಯೋಜನೆಯು ಭಾರತೀಯ ಸೇನೆಯ ಸುಧಾರಣೆಗೆ ಕೈಗೊಂಡ ಅಗತ್ಯ ಕ್ರಮವಾಗಿದೆ ಎಂದು ಹೇಳಿದರು. ಆದರೆ, ಕೆಲವರು ಈ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ಹರಿಹಾಯ್ದ ಪ್ರಧಾನಿ ಮೋದಿ, ಇವೆಲ್ಲರೂ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರ ಎಂದು ಹೇಳಿದರು.

Share this post

Post Comment