ದೇಶ ಸೇವೆಗೆ ಹೊರಟ ಸೈನಿಕರು ಮತ್ತೆ ತಮ್ಮ ಮನೆಗೆ ರ‍್ತಾರೆ ಅಂತಾ ಹೇಳೋಕಾಗಲ್ಲ. ದೇಶ ಸೇವೆಗಾಗಿದೇಶಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧರಾಗಿರುವ ಈ ಸೈನಿಕರ ಶ್ರಮದಿಂದ ಆಯಾ ದೇಶಗಳು ಸುರಕ್ಷಿವಾಗಿರುತ್ತವೆ. ದೇಶಕ್ಕಾಗಿ ಸೇವೆ ಸಲ್ಲಿಸಲು ಹೊರಟ ಸೈನಿಕರು ತಮ್ಜ ತಂದೆ ತಾಯಿ, ಹೆಂಡತಿ, ಮಕ್ಕಳು, ಕುಟುಂಬಸ್ಥರು ಎಲ್ಲರನ್ನೂ ನೆನೆದು ಭಾವುಕರಾಗುವ ಘಟನೆಗಳೂ ಆಗಾಗ ವರದಿಯಾಗುತ್ತವೆ. ಇದೀಗ ಇಂತಹುದೇ ಒಂದು ಹೃದಯ ವಿದ್ರಾವಕ ಘಟನೆಯೊಂದು ಸಂಭವಿಸಿದೆ.
ಹೌದು.. ಉಗ್ರರ ವಿರುದ್ಧ ನಡೆದ ಕರ‍್ಯಾಚರಣೆಯಲ್ಲಿ ಹುತಾತ್ಮರಾಗಿದ್ದ ಯೋಧರೊಬ್ಬರ ಪುಟ್ಟ ಮಗನೊಬ್ಬ ತನ್ನ ತಂದೆ ಸಾವನ್ನಪ್ಪಿ ಒಂದು ರ‍್ಷವಾಗುತ್ತಾ ಬಂದರೂ ಇವಾಗಲೂ ಅವರ ಮೊಬೈಲ್ ನಂರ‍್ಗೆ ‘ಪಪ್ಪಾ, ದಯವಿಟ್ಟು ಒಮ್ಮೆ ಹಿಂತಿರುಗಿ’ ಎಂದು ವಾಯಿಸ್ ಮೆಸೇಜ್ ಕಳಿಸುತ್ತಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.
ಅಂದ ಹಾಗೆ ಕಳೆದ ರ‍್ಷ ಸೆಪ್ಟೆಂಬರ್ ೧೩ರಂದು ಜಮ್ಮು ಕಾಶ್ಮೀರದಲ್ಲಿ ಘಟನೆಯೊಂದು ನಡೆದಿತ್ತು. ಉಗ್ರರ ವಿರುದ್ಧ ನಡೆದ ಜಂಟಿ ಕರ‍್ಯಾಚರಣೆಯ ಸಮಯದಲ್ಲಿ ರ‍್ನಲ್ ಮನ್ಪ್ರೀತ್ ಸಿಂಗ್ ಅವರು ಹುತಾತ್ಮರಾಗಿದ್ದರು. ಅವರು ಇತರ ಸೈನಿಕರೊಂದಿಗೆ ಗದೂಲ್ ಗ್ರಾಮದ ಸುತ್ತಮುತ್ತಲಿನ ಕಾಡುಗಳಲ್ಲಿ ಭಯೋತ್ಪಾದಕರೊಂದಿಗೆ ಭೀಕರ ಗುಂಡಿನ ಕಾಳಗ ನಡೆಸುತ್ತಿದ್ದರು. ಈ ವೇಳೆ ಅವರ ತೀವ್ರ ದಿಟ್ಟೆದೆಯ ಹೋರಾಟದ ಹೊರತಾಗಿಯೂ, ರ‍್ನಲ್ ಸಿಂಗ್, ಮೇಜರ್ ಆಶಿಶ್ ಧೋಂಚಕ್, ಜೆಕೆ ಪೊಲೀಸ್ ಉಪ ಅಧೀಕ್ಷಕ ಹ್ಯುಮನ್ಯುನ್ ಭಟ್ ಮತ್ತು ಸಿಪಾಯಿ ರ‍್ದೀಪ್ ಸಿಂಗ್ ಅವರು ಹುತಾತ್ಮರಾಗಿದ್ದರು. ಆ ಮೂಲಕ ತನ್ನನ್ನೇ ನಂಬಿದ್ದ ಕುಟುಂಬದವರ ಹೃದಯದಲ್ಲಿ ಶೂನ್ಯವನ್ನು ಆವರಿಸಿಬಿಟ್ಟರು.
ಎರಡು ಮಕ್ಕಳ ತಂದೆಯಾಗಿದ್ದ ರ‍್ನಲ್ ಮನ್ಪ್ರೀತ್ ಸಿಂಗ್ ಅವರ ಕುಟುಂಬದಲ್ಲಿ ಈ ಸಾವು ಸಿಡಿಲೆರಗಿದಂತಾಗಿತ್ತು. ರ‍್ನಲ್ ಸಿಂಗ್ ಅವರ ಮರಣವು ಅವರ ಕುಟುಂಬ ಸದಸ್ಯರ ಮೇಲೆ ಭಾರೀ ಆಘಾತವನ್ನುಂಟು ಮಾಡಿತ್ತು. ವಿಶೇಷವಾಗಿ ಅವರ ಪತ್ನಿ ಜಗ್ಮೀತ್, ತಮ್ಮ ಮಕ್ಕಳಾದ ಕಬೀರ್ ಮತ್ತು ವಾಣಿ ಇಂದಿಗೂ ನೋವಲ್ಲೇ ಇದ್ದಾರೆ. ಅವರಿಗೆ ಮಕ್ಕಳ ಮೇಲೆ ಎಷ್ಟು ಪ್ರೀತಿ ಇತ್ತೆಂದರೆ ಅವರು ಮಕ್ಕಳು ಹುಟ್ಟಿದ ನೆನಪಿಗಾಗಿ ಎರಡು ಚಿನಾರ್ ಮರಗಳನ್ನು ನೆಟ್ಟಿದ್ದರು. ೧೯ ರಾಷ್ಟ್ರೀಯ ರೈಫಲ್ಸ್ ಘಟಕದ ಕಮಾಂಡಿಂಗ್ ಆಫೀಸರ್ ಆಗಿದ್ದ ರ‍್ನಲ್ ಮನ್ಪ್ರೀತ್ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಲರ‍್ಕಿಪೋರಾ, ಝಲ್ದೂರ ಮತ್ತು ಕೋರ‍್ನಾಗ್ ಭಯೋತ್ಪಾದನೆ ಪೀಡಿತ ಪ್ರದೇಶಗಳಲ್ಲಿ ಹೀರೋ ಆಗಿ ಉಗ್ರರ ವಿರುದ್ಧ ಕರ‍್ಯಾಚರಣೆ ಮಾಡುತ್ತಿದ್ದರು.
ಆದರೆ ನೋವಿನ ಸಂಗತಿಯೆಂದರೆ ರ‍್ನಲ್ ಮನ್ಪ್ರೀತ್ ಸಿಂಗ್ ಅವರ ಇಬ್ಬರು ಪುಟ್ಟ ಮಕ್ಕಳಿಗೆ ಈಗಲೂ ತಮ್ಮ ತಂದೆ ವೀರ ಮರಣವನ್ನಪ್ಪಿದ್ದಾರೆ, ಮತ್ತೆಂದೂ ಅವರು ನಮ್ಮನ್ನು ನೋಡಲು ಬರುವುದಿಲ್ಲ ಎಂದು ತಿಳಿದಿಲ್ಲ. ಇಂದಿಗೂ ತಮ್ಮ ಅಪ್ಪ ಯಾವುದೋ ದೂರದ ಊರಿಗೆ ಕೆಲಸಕ್ಕೆ ಹೋಗಿದ್ದಾರೆ. ರ‍್ಷಕ್ಕೆ ಒಂದು ಸಲ ಬಂದು ನಮ್ಮನ್ನು ನೋಡಿಕೊಂಡು ಹೋಗುತ್ತಾರೆ ಅನ್ನೋದು ಮಾತ್ರ ತಿಳಿದಿದೆ. ತಮ್ಮ ಅಪ್ಪ ಒಬ್ಬ ಯೋಧ, ಅವರು ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದರು, ಅಸಲಿಗೆ ದೇಶ ಸೇವೆ ಅಂದರೆ ಏನು ಎಂದೂ ಅರಿಯದ ಪುಟ್ಟ ಕಂದಮ್ಮಗಳು. ತನ್ನ ಅಪ್ಪ ಇಂದು ಬರುತ್ತಾರೆ ನಾಳೆ ಬರುತ್ತಾರೆ ಎಂದು ಆಸೆಗಣ್ಣಿನಿಂದ ಎದುರು ನೋಡುತ್ತಲೇ ಇದ್ದಾರೆ.
ಹೀಗಾಗಿಯೇ ವೀರ ಮರಣವನ್ನಪ್ಪಿದ ರ‍್ನಲ್ ಮನ್ಪ್ರೀತ್ ಸಿಂಗ್ ಸಾವನ್ನಪ್ಪಿರುವ ಬಗ್ಗೆ ತಿಳಿಯದ ಅವರ ಮಗ ಕಬೀರ್ ಇಂದಿಗೂ ತನ್ನ ಅಪ್ಪನ ಮೊಬೈಲ್ ಸಂಖ್ಯೆಗೆ ವಾಯಿಸ್ ನೋಟ್ ಕಳಿಸುತ್ತಲೇ ಇದ್ದಾನೆ. “ಪಾಪಾ ಬಸ್ ಏಕ್ ಬಾರ್ ಆ ಜಾವೋ, ಫಿರ್ ಮಿಷನ್ ಪೆ ಚಲೇ ಜಾನಾ ಎಂದು ವಾಯಿಸ್ ನೋಟ್ ಕಳಿಸುತ್ತಿದ್ದಾನೆ. ಆದರೆ ಅತ್ತ ಕಡೆಯಿಂದ ಒಂದೇ ಒಂದು ರಿಪ್ಲೈ ಬರುತ್ತಿಲ್ಲ. ತನ್ನ ಕಂದನ ಮೆಸೇಜ್ಗೆ ಉತ್ತರಿಸದ ಅಪ್ಪನ ಬಗ್ಗೆ ಸಿಟ್ಟು, ಕೋಪ, ಬೇಸರ, ಪ್ರೀತಿ ಎಲ್ಲವೂ ಆ ಪುಟ್ಟ ಕಂದ ಕಬರ‍್ನ ಹೃದಯಲ್ಲಿ ಉಕ್ಕಿ ಬರುತ್ತಿದೆ. ಈ ಸನ್ನಿವೇಶವನ್ನು ಗಮನಿಸಿ ಹುತಾತ್ಮ ಯೋಧನ ಮನೆಯವರು ಮೂಕವಿಸ್ಮಿತರಾಗಿದ್ದಾರೆ.