ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಸಿಇಒ ಅರಸ್ಟ್, ಕಾರಣ ಏನು?

ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್  ಸಿಇಒ ಅರಸ್ಟ್, ಕಾರಣ ಏನು?

ಬಿಲಿಯನೇರ್ ಉದ್ಯಮಿ, ಟೆಲಿಗ್ರಾಮ್ ಮೆಸೆಜಿಂಗ್ ಆಪ್‌ನ ಸ್ಥಾಪಕ ಮತ್ತು ಸಿಇಒ ಪವೆಲ್ ಡೊರಾವ್ ಅವರನ್ನು ಶನಿವಾರ (ಆ.24) ಸಂಜೆ ಪ್ಯಾರಿಸ್ ಹೊರವಲಯದ ಬೌರ್ಗೆಟ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಡೊರಾವ್ ಅವರು ತನ್ನ ಖಾಸಗಿ ಜೆಟ್ ಮೂಲಕ ವಿದೇಶಕ್ಕೆ ಪ್ರಯಾಣಿಸುತ್ತಿದ್ದರು. ಪ್ರಾಥಮಿಕ ತನಿಖಾ ಕಾರಣದಿಂದ ಅವರ ವಿರುದ್ದ ಫ್ರಾನ್ಸ್‌ನಲ್ಲಿ ಪೊಲೀಸ್ ವಾರಂಟ್ ಜಾರಿಯಾಗಿತ್ತು.

ಡುರೊವ್ ತನ್ನ ಅಪ್ಲಿಕೇಷನ್ ಕ್ರಿಮಿನಲ್ ಬಳಕೆಯನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಲು ವಿಫಲರಾಗಿದ್ದಾರೆ ಎಂದು ಶಂಕಿಸಲಾಗಿದೆ. ತನಿಖಾಧಿಕಾರಿಯೊಬ್ಬರು, ‘ಟೆಲಿಗ್ರಾಮ್‌ನಲ್ಲಿ ಸಾಕಷ್ಟು ತೊಂದರೆಗಳು ನಡೆಯುತ್ತಿವೆ’ ಎಂದು ಹೇಳಿದ್ದಾರೆ. ಇನ್ನು ತಾನು ಅರೆಸ್ಟ್ ಆಗಬಹುದೆಂದು ತಿಳಿದಿದ್ದರೂ ಟೆಲಿಗ್ರಾಂ ಸಂಸ್ಥಾಪಕ ಪ್ಯಾರಿಸ್‌ಗೆ ಬಂದಿದ್ದರೆಂಬುವುದು ಅಚ್ಚರಿ ಮೂಡಿಸುವ ವಿಚಾರವಾಗಿದೆ.

Share this post

Post Comment