ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಆರೋಪದ ಮೇಲೆ ಏಳು ಮಂದಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಜೈಲರ್ ಶರಣಬಸಪ್ಪ ಅಮೀನ್ ಗಢ, ಪ್ರಭು ಎಸ್ , ಅಸಿಸ್ಟೆಂಟ್ ಜೈಲರ್ ತಿಪ್ಪೆಸ್ವಾಮಿ, ಶ್ರೀಕಾಂತ್, ಹೆಡ್ ವಾರ್ಡರ್ ವೆಂಕಪ್ಪ ಕುರ್ತಿ , ಸಂಪತ್ ಕುಮಾರ್, ವಾರ್ಡರ್ ಬಸಪ್ಪ ತೇಲಿ ಅಮಾನತಿಗೊಳಗಾದ ಅಧಿಕಾರಿಗಳಾಗಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ದರ್ಶನ್ ಜೈಲಿನಲ್ಲಿ ಹಾಯಾಗಿ ಕುಳಿತು ಸಿಗರೇಟು ಸೇದುತ್ತಾ ಟೀ ಸವಿಯುತ್ತಿರುವ ದೃಶ್ಯಗಳು ಹರಿದಾಡಿದ್ದವು .
ಬಳಿಕ ದರ್ಶನ್ ವಿಡಿಯೋ ಕಾಲ್ ಮಾಡಿರುವ ವಿಡಿಯೋ ಕೂಡಾ ಹೊರಬಿದ್ದಿತ್ತು. ಇದರಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಭಾನುವಾರ ರಾತ್ರಿಯೇ ಜೈಲಿನ ಆಂತರಿಕ ತನಿಖೆಗೆ ಡಿಜಿ ಆದೇಶಿಸಿದ್ದರು. ಜೈಲು ಅಧಿಕಾರಿಗಳ ವಿರುದ್ದ ಗೃಹಸಚಿವ ಜಿ. ಪರಮೇಶ್ವರ್ ಗರಂ ಆಗಿದ್ದರು.