ಬೀದರ್ ನಗರದ ಗಾಂಧಿ ಗಂಜ್ ಕೋ ಆಪರೇಟಿವ್ ಬ್ಯಾಂಕ್ ನ ಸುವರ್ಣ ಮಹೋತ್ಸವದ ಅಂಗವಾಗಿ, ಭಾರತ್ ಸೇವಾದಳ ಹಾಗೂ ಗಾಂಧಿ ಗಂಜ್ ಕೋ- ಆಪರೇಟಿವ್ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ಬಸವನಗರ ಉದ್ಯಾನವನದಲ್ಲಿ ಸಸಿ ನೆಡುವ ಕಾರ್ಯ ಹಾಗೂ ರಾಷ್ಟ್ರಧ್ವಜದ ಮಹತ್ವದ ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಹಕಾರ ಸಂಘಗಳ ಉಪ ನಿಬಂಧಕಿ ಮಂಜುಳಾ, ಕರ್ನಾಟಕದ ಮುಕುಟ ಮಣಿ ಬೀದರ್ ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿ ದೇಶಕ್ಕೆ ಮಾದರಿಯಾಗಿದೆ. ಬೀದರ್ ನ ಸಹಕಾರ ಕ್ಷೇತ್ರದ ಕ್ರಾಂತಿ ಹೀಗೆ ಮುಂದುವರೆಯಲಿ ಎಂದು ಆಶಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಮಾತನಾಡಿ, ಗಾಂಧಿ ಗಂಜ್ ಬ್ಯಾಂಕ್ ಕೇವಲ ಲೇವಾ ದೇವಿ ವಹಿವಾಟು ಮಾಡದೆ ಸಮಾಜವನ್ನು ಸುಧಾರಿಸುವ ಕೆಲಸ ಮಾಡುತ್ತಿದೆ. ಅದೇರೀತಿ ನಮ್ಮ ಬೀದರ್ ಜಿಲ್ಲೆ ಹಿಂದುಳಿದಿದೆ ಎಂಬ ಆರೋಪವಿದೆ ಆದರೆ ನಾವು ಹಿಂದುಳಿದಿಲ್ಲ ನಿರ್ಲಕ್ಷಿಸಲಪಟ್ಟಿದೆ.
ವಿಶ್ವಗುರು ಬಸವಣ್ಣನವರು ನಡೆದಾಡಿದ ಈ ನಾಡಿನ ಜನತೆ ಮೂರ್ಖರಲ್ಲ ಮುಗ್ಧರು ಎಂದು ಹೇಳಿದರು ಮತ್ತು ಇತ್ತೀಚಿನ ದಿನಗಳಲ್ಲಿ ರಾಷ್ಟ್ರ ಧ್ವಜಗಳ ಬಗ್ಗೆ ನಿರ್ಲಕ್ಷ ವಹಿಸಲಾಗುತ್ತಿದೇ ಆದ್ದರಿಂದ ಪಾಲಕರು ಮತ್ತು ಶಿಕ್ಷಕರು ತಮ್ಮ ಮಕ್ಕಳಿಗೆ ರಾಷ್ಟಗೀತೆ ಮತ್ತು ರಾಷ್ಟ್ರಧ್ವಜದ ಮಹತ್ವ ತಿಳಿಸಬೇಕು ಎಂದ್ರು…
ಕಾರ್ಯಕ್ರಮದಲ್ಲಿ ಗಾಂಧಿ ಗಂಜ್ ಕೋ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷ್ಯ ವಿಜಯ್ ಕುಮಾರ್ ಪಾಟೀಲ್ ಗಾದಗಿ, ನಗರಸಭೆ ಸದಸ್ಯ ದಿಗಂಬರ್ ಮಡಿವಾಳ, ವೀರಭದ್ರಪ್ಪ ಉಪ್ಪಿನ ಇನ್ನಿತರರು ಉಪಸ್ಥಿತರಿದ್ದರು.