ಚಿಕ್ಕಮಗಳೂರ ನಲ್ಲಿ ನಡೆದ ಅತ್ಯಾಚಾರದ ಆರೋಪದ ಮೇಲೆ ಯೋಗ ಗುರು ಬಂಧನವಾಗಿದೆ. ಪ್ರದೀಪ್ ಉಲ್ಲಾಳ್ (53) ಬಂಧಿತ ಆರೋಪಿ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರದೀಪ್ ಉಲ್ಲಾಳ್ ಮಲ್ಲೇನಹಳ್ಳಿಯಲ್ಲಿ ಯೋಗ ಶಾಲೆ ನಡೆಸುತ್ತಿದ್ದ.
ಯೋಗ ತರಬೇತಿಗೆಂದು ಕ್ಯಾಲಿಫೋರ್ನಿಯಾದಿಂದ ಮಹಿಳೆಯೊಬ್ಬರು ಬಂದಿದ್ದರು. ಕಳೆದ 4 ವರ್ಷದಿಂದಲೂ ಯೋಗ ಗುರು ಜತೆ ಮಹಿಳೆ ಸಂಬಂಧ ಹೊಂದಿದ್ದರು. ಬೇರೆ ಮಹಿಳೆಯರ ಜತೆಯೂ ಗುರುವಿನ ಸಂಬಂಧ ತಿಳಿದ ಮಹಿಳೆ ಜಗಳವಾಡಿದ್ದರು. ವಿದೇಶಿ ಮಹಿಳೆಯಿಂದ ಯೋಗ ಗುರು ಪ್ರದೀಪ್ ಸುಮಾರು 20 ಲಕ್ಷ ರೂ. ಹಣ ಕಿತ್ತಿದ್ದ ಎಂಬ ಆರೋಪವು ಇದೆ. ಇದೇ ವಿಚಾರವಾಗಿ ಯೋಗ ಗುರು ಹಾಗು ಕ್ಯಾಲಿಫೋರ್ನಿಯಾ ಮಹಿಳೆಗೂ ಜಗಳವಾಗಿತ್ತು.
ವಿದೇಶಿ ಮಹಿಳೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಗ ಗುರುವನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.