ಶ್ರೀಮಂತ ವ್ಯಕ್ತಿ ವಾರೆನ್ ಬಫೆಟ್ ರವರ ವಿಲ್‌ನಲ್ಲಿ ಬದಲಾವಣೆ.

ಶ್ರೀಮಂತ ವ್ಯಕ್ತಿ ವಾರೆನ್ ಬಫೆಟ್ ರವರ ವಿಲ್‌ನಲ್ಲಿ ಬದಲಾವಣೆ.

ಅಮೆರಿಕದ ಖ್ಯಾತ ಉದ್ಯಮಿ ವಾರೆನ್ ಬಫೆಟ್, ತಮ್ಮ ಮರಣಾದ ನಂತರ ಆಸ್ತಿ ಹಂಚಿಕೆಯ ಯಲ್ಲಿ ಬದಲಾವಣೆ ಮಾಡಿದ್ದಾರೆ. . ಬರ್ಕ್‌ಷೈರ್ ಹ್ಯಾಥ್‌ವೇ ಅಧ್ಯಕ್ಷರಾಗಿರುವ 93ವರ್ಷದ ಬಫೆಟ್, ತಮ್ಮ ವಿಲ್ ನಲ್ಲಿ ಬದಲಾವಣೆ ಮಾಡಿದ್ದು, ತಮ್ಮ ಮರಣದ ಬಳಿಕ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ ರವರು ಸ್ಥಾಪಿಸಿದ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್ಗೆ ದೇಣಿಗೆ ಮುಂದುವರಿಸುವುದಿಲ್ಲ ಎಂದು ತಿಳಿಸಿದ್ದಾರೆ. ಬದಲಾಗಿ ಅವರ ಸಂಪತ್ತನ್ನು ತಮ್ಮ ಮೂವರು ಮಕ್ಕಳು ನಡೆಸುತ್ತಿರುವ ಹೊಸ ಚಾರಿಟೇಬಲ್ ಟ್ರಸ್ಟ್ಗೆ ಕೋಡುವುದಾಗಿ ಹೇಳಿದ್ದಾರೆ.

ತಮ್ಮ ವಿಲನಲ್ಲಿ ಅನೇಕ ಬಾರಿ ಬದಲಿಸಿದ್ದು, ತಮ್ಮ ಸಂಪತ್ತನ್ನು ಸಮರ್ಪಕವಾಗಿ ಹಂಚಿಕೆ ಮಾಡುವ ಮಕ್ಕಳ ಮೌಲ್ಯಗಳು ಹಾಗೂ ಸಾಮರ್ಥ್ಯದ ಮೇಲಿನ ನಂಬಿಕೆಯಿಂದಾಗಿ ಈ ಹೊಸ ಬದಲಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಅವರ ಮೂವರೂ ಮಕ್ಕಳು ಪರೋಪಕಾರಿ ದತ್ತಿ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.

ನನ್ನ ಮೂವರು ಮಕ್ಕಳ ಮೌಲ್ಯಗಳ ಬಗ್ಗೆ ನನ್ನಲ್ಲಿ ಬಹಳ ಉತ್ತಮ ಭಾವನೆ ಇದೆ. ಅವರು ಹೇಗೆ ಕೆಲಸ ಮಾಡುತ್ತಾರೆ ಎಂಬ ಬಗ್ಗೆ ಶೇ 100ರಷ್ಟು ನಂಬಿಕೆ ಇದೆ” ಎಂದಿದ್ದಾರೆ.

ಇದಕ್ಕೂ ಮುನ್ನ ವಿಲ್ ಬರೆಸಿದ್ದ ಬಫೆಟ್, ತಮ್ಮ ಒಟ್ಟು ಸಂಪತ್ತಿನ ಶೇ 99ಕ್ಕೂ ಹೆಚ್ಚಿನ ಪಾಲನ್ನು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಪ್ರತಿಷ್ಠಾನ ಹಾಗೂ ಕುಟುಂಬಕ್ಕೆ ಸಂಬಂಧಿಸಿದ ನಾಲ್ಕು ದಾನ ಧರ್ಮ ಸಂಸ್ಥೆಗಳಾದ ಸುಸಾನ್ ಥಾಂಪ್ಸನ್ ಬಫೆಟ್ ಪ್ರತಿಷ್ಠಾನ,ಶೇರ್ವುಡ್ ಫೌಂಡೇಷನ್, ಹೋವರ್ಡ್ ಜಿ ಬಫೆಟ್ ಫೌಂಡೇಷನ್ ಮತ್ತು ನೋವೋ ಫೌಂಡೇಷನ್‌ಗೆ ಪರೋಪಕಾರ ಕೆಲಸಗಳಿಗೆ ಹಂಚುವಂತೆ ವಿಂಗಡಿಸಿದ್ದರು.

ಅವರು ವಿಲ್ ಬದಲಿಸಿದರು ಕೂಡ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್‌ಗೆ ಮತ್ತು ಇನ್ನಿತರ ಸಮಾಜ ಸೇವೆ ಮಾಡುವ ಹಾಗೂ ಸಮಾಜದ ಅವಶ್ಯಕತೆಗಳನ್ನು ಪೂರೈಸುವ ಸಂಸ್ಥೆಗಳಿಗೆ ದಾನ ನೀಡುವ ಸಾಧ್ಯತೆ ಇದೆ.

Share this post

Post Comment