ಮಹರ್ಷಿ ಟ್ಯುಟೋರಿಯಲ್‌ನಲ್ಲಿ ಶಿವಾಜಿ ಜಯಂತಿ ಆಚರಣೆ

ಮಹರ್ಷಿ ಟ್ಯುಟೋರಿಯಲ್‌ನಲ್ಲಿ ಶಿವಾಜಿ ಜಯಂತಿ ಆಚರಣೆ

ಧಾರವಾಡ : ಜಿಲ್ಲೆ‌ಯ ಕಲಘಟಗಿ ತಾಲೂಕಿನ ಧುಮ್ಮವಾಡ ಗ್ರಾಮದ ಮಹರ್ಷಿ ಟ್ಯುಟೋರಿಯಲ್‌ನಲ್ಲಿ ಶಿವಾಜಿ ಮಾಹಾರಾಜರ 329 ನೇ ಜಯಂತಿ ಆಚರಿಸಲಾಯಿತು. ಧುಮ್ಮವಾಡ ಗ್ರಾಮದ ಪೊಸ್ಟ್ ಆಪೀಸ್ ಹತ್ತಿರ ಇರುವ ಮಹರ್ಷಿ ಟ್ಯುಟೋರಿಯಲ್ ‌ನಲ್ಲಿ ಮಕ್ಕಳು ಹಾಗೂ ಕೋಚಿಂಗ್ ಸೆಂಟರ್‌ನ ಶಿಕ್ಷಕರು ಶಿವಾಜಿ ಪೊಟೋಗೆ ಪೂಜೆ ಸಲ್ಲಿಸಿ ಜಯಂತಿ ಆಚರಣೆ ಮಾಡಿದ್ರು‌. ಈ ವೇಳೆ ಮಾತನಾಡಿದ ಮಹರ್ಷಿ ಟ್ಯುಟೋರಿಯಲ್ ಮುಖ್ಯಸ್ಥ ಗುರುನಾಥ್ ಅರಳಿಹೊಂಡ, ಶಿವಾಜಿ ಅಪ್ರತಿಮ ನಾಯಕಾನಾಗಿ ದೇಶಕ್ಕಾಗಿ ಹೋರಾಟ ನಡೆಸಿದ್ದಾರ. ವಿರೋಧಿಗಳಿಗೆ ಸಿಂಹಸ್ವಪ್ನವಾಗಿದ್ದರು ಎಂದು ಹೊಗಳಿದ್ರು.

ಇದೇ ವೇಳೆ ಮಕ್ಕಳಿಗೆ ಕಿವಿ ಮಾತು ಹೇಳಿದ ಅವರು, 10 ನೇ ತರಗತಿ ಪರೀಕ್ಷೆ ಅಂದರೆ ವಿದ್ಯಾರ್ಥಿ ದೆಸೆಯಲ್ಲಿ ಪ್ರಮುಖ ಘಟ್ಟವಾಗಿದ್ದು, ಪರೀಕ್ಷೆಗೆ ಉತ್ತಮ ತಯಾರಿ ಮುಖ್ಯವಾಗಿರುತ್ತೆ. ಈಗಾಗಲೆ ನಮ್ಮಲ್ಲಿ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಗುಣಮಟ್ಟ ಪರಿಶೀಲಿಸಿ ವೀಕ್ ಇರುವ ವಿಷಯಗಳಲ್ಲಿ ಕೋಚಿಂಗ್ ನೀಡಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ರೀತಿಯಲ್ಲಿ ಮಕ್ಕಳನ್ನ ತಯಾರಿ ಮಾಡಲಾಗುವುದು.

ಜೊತೆಗೆ ಎಲ್ಲ ಪೊಷಕರಿಗೂ ತಮ್ಮ ಮಕ್ಕಳು ಉತ್ತಮ ಫಲಿತಾಂಶ ಪಡೆಯಬೇಕು ಎಂಬುದು ಆಶಯವಾಗಿರುತ್ತೆ. ಹಾಗಾಗಿ ಮಹರ್ಷಿ ಟ್ಯುಟೋರಿಯಲ್ ನಿಮ್ಮ ಮಕ್ಕಳಿಗೆ ಉತ್ತಮ ತರಬೇತಿ ನೀಡಿ ಉತ್ತಮ ಫಲಿತಾಂಶ ಬರುವಲ್ಲಿ ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದ್ರು…

Share this post

Post Comment