ಶಾಸಕ ಮುನಿರತ್ನಗೆ ಶಾಕ್, ಜಾಮೀನು ಅರ್ಜಿ ವಿಚಾರಣೆ  ಸೆ.24 ಮುಂದೂಡಿಕೆ

ಶಾಸಕ ಮುನಿರತ್ನಗೆ ಶಾಕ್, ಜಾಮೀನು ಅರ್ಜಿ ವಿಚಾರಣೆ  ಸೆ.24 ಮುಂದೂಡಿಕೆ

ಊತ್ತರ ಕರ್ನಾಟಕ ನ್ಯೂಸ್‌ ಡೆಸ್ಕ್‌  ಬೀದ‌ರ್: ಮಹಿಳೆಯೋರ್ವಳ ಮೇಲೆ ಆರ್​.ಆರ್​.ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅತ್ಯಾಚಾರ ಮಾಡಿದ್ದಾರೆಂದು ದಾಖಲಾಗಿದ್ದ ರೇಪ್​​ ಕೇಸ್​​​ ಸಂಬಂಧದ ಜಾಮೀನು ಅರ್ಜಿಯ ವಿಚಾರಣೆಯನ್ನು ಇಂದು ನಡೆಸಿರುವ ಕೋರ್ಟ್  ಸೆ.24ಕ್ಕೆ ಮುಂದೂಡಿ ಆದೇಶಿಸಿದೆ.

ಇತ್ತೀಚೆಗೆ ಸಂತ್ರಸ್ತೆಯು ಅತ್ಯಾಚಾರ ಆರೋಪದಡಿ ಕಗ್ಗಲೀಪುರ ಪೊಲೀಸ್​​ ಠಾಣೆಯಲ್ಲಿ ಮುನಿರತ್ನ ವಿರುದ್ಧ ಎಫ್​​​​​​​ಐಆರ್​ ದಾಖಲಿಸಿದ್ದಳು. ಈ ಸಂಬಂಧ ಪೊಲೀಸರು ಮುನಿರತ್ನರನ್ನು ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್​​​ಗೆ ಜಡ್ಜ್​​ ಮುಂದೆ ಇವತು ಹಾಜರುಪಡಿಸಿದ್ದು ಜಾಮೀನು ಅರ್ಜಿ ವಿಚಾರಣೆ ನಡೆಸಿರುವ ಕೋರ್ಟ್ ನಾಳೆ ಮುಂದೂಡಿದೆ.

ಈಗಾಗಲೇ ಮುನಿರತ್ನ ವಿರುದ್ಧ ದಾಖಲಾಗಿದ್ದ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪದ​ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನನ್ನು ಕೋರ್ಟ್​ ನೀಡಿದ ನಂತರದಲ್ಲಿ, ಅತ್ಯಾಚಾರ ಕೇಸ್​​​​​ನಲ್ಲಿ ಕಗ್ಗಲಿಪುರ ಪೊಲೀಸರು ಅವರನ್ನು ಅರೆಸ್ಟ್​​​ ಮಾಡಿದ್ದಾರೆ.

Share this post

Post Comment