ನಿನ್ನೆ ಹೆಚ್ ಡಿ ಕುಮಾರಸ್ವಾಮಿ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು ಡಿಸಿಎಂ ಡಿಕೆ ಶಿವಕುಮಾರ್ ಅವರು ಕಣಕ್ಕಿಳಿಯುವ ಆಕಾಂಕ್ಷೆ ತೋರಿಸಿರುವ ಹಿನ್ನೆಲೆಯಲ್ಲಿ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರ ಉಪ ಚುನಾವಣೆ (ಅhಚಿಟಿಟಿಚಿಠಿಚಿಣಟಿಚಿ ಃಥಿ ಇಟeಛಿಣioಟಿ) ಕಣ ತೀವ್ರ ಕುತೂಹಲ ಕೆರಳಿಸಿದೆ. ಇವರ ಎದುರು ಮೈತ್ರಿ ಅಭ್ರ‍್ಥಿಯಾಗಿ ಸಿ.ಪಿ ಯೋಗೇಶ್ವರ್ ನಿಲ್ಲುವುದು ಬಹುತೇಕ ಖಚಿತವಾಗಿದ್ದು, ಬಿಜೆಪಿಯಿಂದ ನಿಲ್ತಾರಾ ಅಥವಾ ಜೆಡಿಎಸ್ನಿಂದಲಾ ಎಂಬ ಕುತೂಹಲ ಮೂಡಿದೆ.
ಹೆಚ್ ಡಿ ಕುಮಾರಸ್ವಾಮಿ ಯವರು ಮಂಡ್ಯ ಲೋಕಾಸಭಾ ಕ್ಷೇತದಿಂದ ಚುನಾವಣೆ ಗೆದಿದ್ದರು ಹಾಗಾಗಿ ಅವರು ಚನ್ನಪಟ್ಟಣ ವಿಧಾನಸಭೆ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ. ಇವಾಗ ಚನ್ನಪಟ್ಟಣದಲ್ಲಿ ಡಿಕೆ ಶಿವಕುಮಾರ್ ಅಥವಾ ಸಹೋದರ ಡಿಕೆ ಸುರೇಶ್ ಕಾಂಗ್ರೆಸ್ನಿಂದ ಅಭ್ರ‍್ಥಿಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಬೊಂಬೆನಾಡಿನಲ್ಲಿ ಬೈ ಎಲೆಕ್ಷನ್ ಜಿದ್ದಾಜಿದ್ದಿನ ಕಾದಾಟದ ಕಣವಾಗುವುದು ಫಿಕ್ಸ್ ಆಗಿದೆ. ಈಗ ಚನ್ನಪಟ್ಟಣದಲ್ಲಿ ಮೈತ್ರಿ ಅಭ್ರ‍್ಥಿ ಯಾರೆಂಬ ತೀವ್ರ ಕುತೂಹಲ ಮೂಡಿದೆ.
ಚನ್ನಪಟ್ಟಣದಲ್ಲಿ ʼಸೈನಿಕʼ ಸಿಪಿ ಯೋಗೇಶ್ವರ್ ಮೈತ್ರಿ ಅಭ್ರ‍್ಥಿಯಾಗಿ ಅಖಾಡಕ್ಕೆ ಧುಮುಕುವ ಸಾಧ್ಯತೆ ಹೆಚ್ಚಿದೆ. ಸಿಪಿವೈ ಬಿಜೆಪಿ ಅಭ್ರ‍್ಥಿಯಾಗುವ ಬದಲು ಜೆಡಿಎಸ್ ಅಭ್ರ‍್ಥಿಯಾದರೆ ಹೇಗೆ ಅಂತಲೂ ರ‍್ಚೆ ಶುರುವಾಗಿದೆ. ಯಾಕೆಂದರೆ ಡಿಕೆಶಿ ಎಂಟ್ರಿಯಿಂದ ಕ್ಷೇತ್ರ ʼಕೈʼ ವಶ ಆಗದಂತೆ ತಡೆಯಲು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಈಗ ತಲೆ ಕೆಡಿಸಿಕೊಳ್ಳಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಒಗ್ಗಟ್ಟಿನಿಂದ ಹೋರಾಟ ಮಾಡಿ ಗೆಲುವು ಸಾಧಿಸಬೇಕಾಗಿದ್ದರೆ, ಯೋಗೇಶ್ವರ್ ಜೆಡಿಎಸ್ನಿಂದ ಸ್ರ‍್ಧೆ ಮಾಡಿದರೆ ಗೆಲುವು ಸುಲಭ ಅನ್ನುವ ಲೆಕ್ಕಾಚಾರದಲ್ಲಿ ಹೆಚ್ಡಿಕೆ ಇದ್ದಾರೆ. ಇಲ್ಲಿ ಒಕ್ಕಲಿಗ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಸಾಂಪ್ರದಾಯಿಕ ಒಕ್ಕಲಿಗ ಮತಗಳು ಜೆಡಿಎಸ್ ಪರವಾಗಿವೆ.
ಜೊತೆಗೆ ಚನ್ನಪಟ್ಟಣದಲ್ಲಿ ಸಿಪಿವೈ ತಮ್ಮದೇ ಆದ ಸ್ವತಃ ಶಕ್ತಿಯನ್ನು ಹೊಂದಿದ್ದಾರೆ. ಚನ್ನಪಟ್ಟಣದಲ್ಲಿ ಬಿಜೆಪಿಗೆ ಮತಗಳ ಬೇಸ್ ಇಲ್ಲ. ಇಲ್ಲಿರುವುದು ಯೋಗೇಶ್ವರ್ ಮತಗಳೇ ಆಗಿವೆ. ಕಳೆದ ನಾಲ್ಕು ಬಾರಿ ಬೇರೆ ಬೇರೆ ಚಿಹ್ನೆಗಳಿಂದ ನಿಂತಿದ್ದರೂ ಸಿಪಿವೈ ಗೆದ್ದು ಬಂದಿದ್ದಾರೆ. ೧೯೯೯ರಲ್ಲಿ ಪಕ್ಷೇತರನಾಗಿ, ೨೦೦೪, ೨೦೦೮ರಲ್ಲಿ ಕಾಂಗ್ರೆಸ್ ಅಭ್ರ‍್ಥಿಯಾಗಿ, ೨೦೧೧ರಲ್ಲಿ ಬಿಜೆಪಿ ಅಭ್ರ‍್ಥಿಯಾಗಿ, ೨೦೧೩ರಲ್ಲಿ ಸಮಾಜವಾದಿ ಪಕ್ಷದ ಅಭ್ರ‍್ಥಿಯಾಗಿ ಗೆಲುವು ಸಾಧಿಸಿದ್ದಾರೆ.
ಸ್ವಂತ ಶಕ್ತಿಯಿಂದ ಬಿಜೆಪಿ ಮತಗಳನ್ನು ಯೋಗೇಶ್ವರ್ ಪಡೆಯಬಹುದು. ಜೊತೆಗೆ ಜೆಡಿಎಸ್ ಚಿಹ್ನೆಯಿಂದ ಸ್ರ‍್ಧಿಸಿದರೆ ಜೆಡಿಎಸ್ ಮತಗಳನ್ನೂ ಪಡೆಯಬಹುದು. ಜೆಡಿಎಸ್ ಚಿಹ್ನೆಯಿಂದ ಸಿಪಿವೈ ಸ್ರ‍್ಧಿಸಿದರೆ ನಮ್ಮ ಕರ‍್ಯರ‍್ತರು ಪಕ್ಷದ ಪರ ಕೆಲಸ ಮಾಡುತ್ತಾರೆ. ಯಾವುದೇ ಗೊಂದಲವಿಲ್ಲದೇ ಚುನಾವಣೆ ಗೆದ್ದು ಕಾಂಗ್ರೆಸ್ಗೆ ಸೋಲಿನ ರುಚಿ ತೋರಿಸಬಹುದು. ಈ ಹಿನ್ನೆಲೆಯಲ್ಲಿ ಸಿಪಿವೈ ಜೆಡಿಎಸ್ನಿಂದ ಸ್ರ‍್ಧೆ ಮಾಡಬೇಕು ಎಂಬ ಚಿಂತನೆಯಲ್ಲಿ ಎಚ್ಡಿಕೆ ಇದ್ದಾರೆ.
ಆದರೆ ಇದಕ್ಕೆ ಸಿಪಿವೈ ಒಪ್ಪುತ್ತಾರಾ? ಬಿಜೆಪಿ ನಾಯಕರು ಏನ್ ಹೇಳ್ತಾರೆ? ಎಂಬ ಚಿಂತೆಯೂ ಇದೆ. ಚನ್ನಪಟ್ಟಣ ಕ್ಷೇತ್ರ ಇದುವರೆಗೆ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎನ್ನುವುದನ್ನು ತೋರಿಸಿದೆ. ಯೋಗೇಶ್ವರ್ ಇಲ್ಲಿ ಭದ್ರ ಹಿಡಿತ ಸಾಧಿಸಿದ್ದಾರೆ. ಆದರೆ ಡಿಕೆಶಿ ಸ್ರ‍್ಧಿಸಿದರೆ ಇಲ್ಲಿ ಲೆಕ್ಕಾಚಾರ ತಲೆಕೆಳಗಾಗಬಹುದು ಎಂಬ ಆತಂಕವೂ ಇದೆ. ೨೦೦೮ರಲ್ಲಿ ಕಾಂಗ್ರೆಸ್ನಿಂದಲೇ ಯೋಗೇಶ್ವರ್ ಗೆದ್ದಿದ್ದು ಬಿಟ್ಟರೆ ಮತ್ತೆ ಕಾಂಗ್ರೆಸ್ ಅಲ್ಲಿ ಮತ್ತೆ ಗೆಲ್ಲಲು ಸಾಧ್ಯವಾಗಿಲ್ಲ. ಈಗ ಡಿಸಿಎಂ ತಮ್ಮ ಶಕ್ತಿ ಹಾಗೂ ಹಣವನ್ನೆಲ್ಲ ಈ ಕ್ಷೇತ್ರದಲ್ಲಿ ತಂದು ಸುರಿಯುವ ಸಾಧ್ಯತೆ ಇರುವುದರಿಂದ ಬಿಜೆಪಿ- ಜೆಡಿಎಸ್ ಕೂಡ ತಲೆ ಕೆಡಿಸಿಕೊಳ್ಳಬೇಕಾಗಿದೆ.