‘ನಮೋ’ಗೆ ‘ಟಗರು’ ಡಿಚ್ಚಿ..! – ನಿಮ್ಮ ಗ್ಯಾರೆಂಟಿಗಳ ಬಗ್ಗೆ ಚರ್ಚೆ ಮಾಡೇಬಿಡೋಣ ಬನ್ನಿ ಎಂದ ಸಿಎಂ!

‘ನಮೋ’ಗೆ ‘ಟಗರು’ ಡಿಚ್ಚಿ..! – ನಿಮ್ಮ ಗ್ಯಾರೆಂಟಿಗಳ ಬಗ್ಗೆ ಚರ್ಚೆ ಮಾಡೇಬಿಡೋಣ ಬನ್ನಿ ಎಂದ ಸಿಎಂ!

ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪ್ರತಿಷ್ಠೆ ಪಾಲಿಟಿಕ್ಸ್ ನಡೆಯುತ್ತಲೇ ಇದೆ. ಕಾಂಗ್ರೆಸ್ ಯೋಜನೆ ಹಾಗೂ ಭರವಸೆಗಳ ವಿರುದ್ಧ ಪಿಎಂ ಮೋದಿ ಆಗಾಗ್ಗೆ ಟ್ವೀಟಾಸ್ತ್ರ ಪ್ರಯೋಗ ಮಾಡುತ್ತಲೇ ಇರ್ತಾರೆ. ಎರಡು ಪಕ್ಷಗಳ ನಡುವಿನ ಬಹಿರಂಗ ಕಿತ್ತಾಟದ ಸಮರ ಈಗ ಮತ್ತೊಮ್ಮೆ ಸುದ್ದಿಯಾಗುತ್ತಿದೆ. ಕಾಂಗ್ರೆಸ್ ಗ್ಯಾರಂಟಿ ಜಾರಿ ಬಗ್ಗೆ ಆರಂಭದಿಂದಲೂ ಕಾಲೆಳೆಯುತ್ತ ಬಂದಿರುವ ಬಿಜೆಪಿ, ಬಹಿರಂಗವಾಗಿ ಸಾಕಷ್ಟು ಬಾರಿ ಚಾಟಿ ಬೀಸಿದೆ. ಅನುದಾನ ಹಂಚಿಕೆ, ಯೋಜನೆ ಜಾರಿ, ಅಭಿವೃದ್ಧಿ ಕುಂಠಿತ ಹೀಗೆ ಅನೇಕ ಆಯಾಮಗಳಲ್ಲಿ ಜಾಡಿಸಿದೆ. ಈಗ ಕೆಲ ಗ್ಯಾರಂಟಿ ಯೋಜನೆಗೆ ಬ್ರೇಕ್ ಹಾಕುವ ನಿರ್ಧಾರವನ್ನ ಕಾಂಗ್ರೆಸ್ ಕೈಗೊಳ್ಳುತ್ತಿರುವ ಸುಳಿವಿನ ಬೆನ್ನಲ್ಲೇ ಪಿಎಂ ಮೋದಿ ಪೋಸ್ಟ್ ಹಾಕಿ ಲೇವಡಿ ಮಾಡಿದ್ದರು.ಇದಕ್ಕೆ ಪ್ರತಿಯಾಗಿ ಸಿಎಂ ಸಿದ್ದರಾಮಯ್ಯ ಸಕತ್ತಾಗಿಯೇ ಕೌಂಟರ್ ನೀಡಿದ್ದಾರೆ.

ಸಿಎಂ ಸಿದ್ದು ಟ್ವೀಟ್ ನಲ್ಲಿ ಏನಿದೆ..?

ಪ್ರಧಾನಿ ನರೇಂದ್ರ ಮೋದಿ ಅವರೇ, ಆಗಾಗ ನೀವು ಸುಳ್ಳು ಸಂಗತಿಗಳನ್ನು ಪೋಣಿಸಿಕೊಂಡು ಕರ್ನಾಟಕ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಾ ಬಂದಿದ್ದೀರಿ. ಈ “ತೂ ತೂ ಮೈ ಮೈ..” ಚರ್ಚೆಗೆ ತಾರ್ಕಿಕವಾದ ಅಂತ್ಯ ಹಾಡಿ ಬಿಡೋಣ ಎಂದು ಕೆಂಡಕಾರಿದ್ದಾರೆ. ಕಳೆದ ಎರಡು ಲೋಕಸಭಾ ಚುನಾವಣೆಯ ಮುನ್ನ ನಿಮ್ಮ ಪಕ್ಷ ಬಿಡುಗಡೆಗೊಳಿಸಿದ್ದ ಪ್ರಣಾಳಿಕೆಯನ್ನು ಇಟ್ಟುಕೊಂಡು ಒಂದು ಸಾರ್ವಜನಿಕ ಚರ್ಚೆಯನ್ನು ಹಮ್ಮಿಕೊಳ್ಳೋಣ.

ಪ್ರಣಾಳಿಕೆಯಲ್ಲಿ ನೀವು ಕೊಟ್ಟಿರುವ ಭರವಸೆಗಳಲ್ಲಿ ಎಷ್ಟನ್ನು ನೀವು ಈಡೇರಿಸಿದ್ದೀರಿ? ಎನ್ನುವುದನ್ನು ಸಾರ್ವಜನಿಕವಾಗಿಯೇ ಚರ್ಚೆ ಮಾಡೋಣ. ದೇಶದ ಪ್ರಜ್ಞಾವಂತ ಜನರೇ ಯಾರದ್ದು ಎಷ್ಟು ಸತ್ಯ? ಎಷ್ಟು ಸುಳ್ಳು? ಎನ್ನುವುದನ್ನು ತೀರ್ಮಾನಿಸಲಿ ಎಂದು ಪೋಸ್ಟ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಶಕ್ತಿ ಯೋಜನೆಗೆ ಬ್ರೇಕ್ ಹಾಕುವ ಸರ್ಕಾರದ ಸುಳಿವು ಹೊಸ ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾಗುವ ಸುಳಿವು ದೊರೆತಿದೆ. ಒಂದೆಡೆ ಕಾಂಗ್ರೆಸ್ ನದ್ದು ಟೊಳ್ಳು ಭರವಸೆ, ಸುಳ್ಳಿನ ರಾಜಕಾರಣ ಎಂದು ಕೇಸರಿ ಪಾಳಯ ಮುಗಿಬಿದ್ದಿದೆ. ಕಾಂಗ್ರೆಸ್ ಕೂಡ ಬಿಜೆಪಿಯ ದ್ವೇಷದ ರಾಜಕೀಯ, ಪ್ರಣಾಳಿಕೆ ಈಡೇರಿಸದೆ ಮೋಸ ಮಾಡಿರುವ ಕುರಿತು ವಾಗ್ಯುದ್ಧ ನಡೆಸ್ತಿದೆ.

Share this post

Post Comment