ಸಮಸ್ಯೆಗಳಿಗೆ ಪರಿಹಾರ ಹಾಗೂ ಹೊರಾಟ ಮಾಡಲು ಸಂಘ ಸದಾಸಿದ್ಧ

ಸಮಸ್ಯೆಗಳಿಗೆ ಪರಿಹಾರ ಹಾಗೂ ಹೊರಾಟ ಮಾಡಲು ಸಂಘ ಸದಾಸಿದ್ಧ

ನ್ಯೂಸ್‌ ಡೆಸ್ಕ್‌ ಉತ್ತರ ಕರ್ನಾಟಕ : ರಾಜ್ಯದಲ್ಲಿ ಹೊರಗುತ್ತಿಗೆ ನೌಕರರಿಗೆ ಯಾವುದೇ ತೊಂದರೆಯಾದರು. ಅದರ ಸಮಸ್ಯೆಗಳಿಗೆ ಪರಿಹಾರ ಹಾಗೂ ಹೊರಾಟ ಮಾಡಲು ಸಂಘ ಸದಾಸಿದ್ಧ ಎಂದು ಸರಕಾರಿ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಸುಧಾಕ‌ರ್ ತಿಳಿಸಿದರು.

ದೇವನಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ಖಾಸಗಿ ಹೋಟಲ್‌ನಲ್ಲಿ ನೂತನ ಜಿಲ್ಲಾಧ್ಯಕ್ಷರಿಗೆ ನೇಮಕಾತಿ ಪತ್ರ ವಿತರಿಸಿ ಅವರು ಮಾತನಾಡಿದರು.ನೂತನವಾಗಿ ಆಯ್ಕೆಯಾಗಿರುವ ಸಂಘದ ಜಿಲ್ಲಾಧ್ಯಕ್ಷರು ತಮ್ಮ ಜವಬ್ದಾರಿಗಳನ್ನು ಅರಿತು ಮುನ್ನಡೆಯಬೇಕು.ಸಂಘವನ್ನು ಬಲಿಷ್ಠಗೊಳಿಸಬೇಕೆಂದರು. ನೂತನ ಜಿಲ್ಲಾಧ್ಯಕ್ಷರು ಹೊರಗುತ್ತಿಗೆ ನೌಕರರನ್ನು ಗುರುತಿಸಿ ಅವರನ್ನು ಸಂಘದ ಸದಸ್ಯರನ್ನಾಗಿ ಮಾಡಬೇಕು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಯಾರಿಗಾದರೂ ತೊಂದರೆಯಾದರೆ ತಕ್ಷಣ ಸ್ಪಂದಿಸಿ ಅವರಿಗೆ ಪರಿಹಾರ ಒದಗಿಸುವ ಕೆಲಸ ಮಾಡಬೇಕು ಎಂದರು.

ಸರಕಾರಿ ಹೊರಗುತ್ತಿಗೆ ನೌಕರರ ಸಂಘದ ರಾಯಚೂರು ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ಮುತ್ತಣ್ಣ ಇವರನ್ನು ರಾಜ್ಯಾಧ್ಯಕ್ಷರು  ಮುಂದಿನ ಆದೇಶದ ವರೆಗೂ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

Share this post

Post Comment