ಬ್ರಿಟಿಷರ ನಾಡಿನಲ್ಲಿ ಕನ್ನಡದ ಕಂಪು ಮೊಳಗಿಸಿದ : ಅದೀಶ್‌ ವಾಲಿ

ಬ್ರಿಟಿಷರ ನಾಡಿನಲ್ಲಿ ಕನ್ನಡದ ಕಂಪು ಮೊಳಗಿಸಿದ : ಅದೀಶ್‌ ವಾಲಿ

ಊತ್ತರ ಕರ್ನಾಟಕ ನ್ಯೂಸ್‌ ಡೆಸ್ಕ್‌  ಬೀದ‌ರ್ : ಕನ್ನಡ ಎಂದ್ರೆ ಸಾಕು ಇದು ಸ್ಥಳೀಯ ಭಾಷೆ ಮನೆಯಲ್ಲಿ ಬಿಟ್ಟರೆ ಮಾತ್‌ ಯಾವುದಕ್ಕೂ ಕನ್ನಡ ಬೇಕಾಗಿಲ್ಲ ಎನ್ನುವ ಕಾಲವಿದ್ದು ಅದ್ರೆ ಅದೀಶ್‌ ವಾಲಿ ಬ್ರಿಟಿಷ್‌ ನಾಡಿನಲ್ಲಿ ಕನ್ನಡದ ಕಂಪು ವೊಳಗಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಕಳೆದ ಒಂದು ವರ್ಷದ ಹಿಂದೆ ನಮ್ಮ ಕನ್ನಡದ ಹುಡುಗ ಆಧಿಶ್ ರಜನೀಶ್ ವಾಲಿಗೆ ಕನ್ನಡ ನಾಡಿನ ಮೇಲಿರುವ ಪ್ರೀತಿ ಅಭಿಮಾನ ಕರುನಾಡಿನ ನಮ್ಮೆಲರಿಗೂ ಭಾವುಕರಾಗಿಸಿತ್ತು. ಬೀದರ್ ಜಿಲ್ಲೆಯ ಈ ಯುವಕ ಸಿಟಿ ಯೂನಿರ್ವಸಿಟಿ ಆಫ್ ಲಂಡನ್ ನ ಬೇಸ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ನಿಂದ ಮಾಸ್ಟರ್ಸ್ ಪದವಿ ಪಡೆದಿದ್ದು ಪದವಿಯನ್ನು ಸ್ವೀಕರಿಸುವ ಸಂದರ್ಭದಲ್ಲಿ ಅಂದರೆ ಘಟಿಕೋತ್ಸವ ಸಮಾರಂಭದಲ್ಲಿ ಮೊದಲು ಕನ್ನಡ ನಾಡಿನ ಬಾವುಟ ಎರಡೂ ಕೈಗಳಿಂದ ಎತ್ತಿ ಹಿಡಿದು ಆಮೇಲೆ ಸರ್ಟಿಫಿಕೇಟ್ ಸ್ವೀಕರಿಸಿ ನಮ್ಮೆಲ್ಲರ ಮನಸ್ಸು ಗೆದ್ದಿದರು. ‌
ಅದೀಶ್‌ ವಾಲಿಯವರ ಅಜ್ಜನವರಾದ ಶಿವಶರಣಪ್ಪ ವಾಲಿಯವರು ಬೀದರ್‌ ಜಿಲ್ಲೆಯ ಹಿರಿಯ ಪತ್ರಕರ್ತರು ಮತ್ತು ಅಪ್ಪಟ ಕನ್ನಡಿಗ ಬಾಲ್ಯದಿಂದಲೇ ಅವರ ಕನ್ನಡಾಭಿಮಾನ ವನ್ನು ಕಣ್ಣಾರೆ ಕಂಡ ಯುವಕ ,ಇವಾಗ ಮತ್ತೆ ಕನ್ನಡ ವಿಷಯದಲ್ಲಿ ಸುದ್ದಿಯಲ್ಲಿರುವುದು ನಮ್ಮಗೂ ಸಂತಸ ತರುತ್ತಿದೆ . ಲಂಡನ್ ಯೂತ್ ಕೌನ್ಸಿಲ್ನ ಮೊದಲ ಭಾರತೀಯ ಸದಸ್ಯರಾದ ಅದಿಶ್ ಅವರು ಯುಕೆ ಸಂಸತ್ತಿನಲ್ಲಿ ಹವಮಾನ ವಲಸೆ -ಯಕೆ ಸರಕಾರದ ನೀತಿ ಎಂಬ ವಿಷಯದ ಮೇಲೆ ವಿಷಯ ಮಂಡಿಸುವಾಗ ಅವರು 12 ನೇ ಶತಮಾನದ ತತ್ವಜ್ಞಾನಿ ಮತ್ತು ಸಮಾಜ ಸುಧಾರಕರಾದ ಶ್ರೀ ವಿಶ್ವ ಗುರು ಬಸವಣ್ಣನವರ ಶತಮಾನಗಳಷ್ಟು ಹಳೆಯದಾದ ವಚನಗಳನ್ನು ಪಠಿಸಿ, ಕನ್ನಡದಲ್ಲಿ ಭಾಷಣ ಮಾಡಿದ್ದು ಸಂತಸದ ವಿಷಯವಾಗಿದೆ.
ಒಟ್ಟಾರೆ ಹೇಳುವುದಾದರೆ ಕನ್ನಡ ಎಂದರೆ ಮೂಗು ಮುರಿಯುವ ಈ ಕಾಲದಲ್ಲಿ ಬೀದರ್‌ ಜಿಲ್ಲೆಯ ಈ ಯುವಕ ದೂರ ಇಂಗ್ಲೆಡ್‌ ನಲ್ಲಿ ಕನ್ನಡದ ಕಂಪನ್ನು ಮೊಳಗಿಸಿ ಇತರರಿಗೆ ಮಾದರಿಯಾಗಿದ್ದು,ಕನ್ನಡಿಗರು ಹೆಮ್ಮೆ ಪಡುವ ಸಂಗತಿಯಾಗಿದೆ.

Share this post

Post Comment