T20 ವರ್ಲ್ಡ್ ಕಪ್ ನಿಂದ ವಿರಾಟ್, ರೋಹಿತ, ಜಡೇಜಾ ನಿವೃತ್ತಿ.

T20 ವರ್ಲ್ಡ್ ಕಪ್ ನಿಂದ ವಿರಾಟ್, ರೋಹಿತ, ಜಡೇಜಾ ನಿವೃತ್ತಿ.

ಇತ್ತಿಚ್ಚಿಗೆ ಅಷ್ಟೇ ನಡೆದ ವಿಶ್ವಕಪ್ ಪಂದ್ಯಗಳಲ್ಲಿ ಭಾರತ ತಂಡವು ಸೌತ ಆಫ್ರಿಕ ವಿರುದ್ಧ ಜಯ ಗಳಿಸಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತವು 17 ವರ್ಷಗಳ ನಂತರ ಐಸಿಸಿ ಟ್ರೋಫಿಯ ಗೆದ್ದಿದೆ. ಇದೆ ಸಮಯಕ್ಕೆ ವಿರಾಟ್ ಕೊಹ್ಲಿ ಮತ್ತು ರೋಹಿತ ಶರ್ಮಾ, ರವಿಂದ್ರ ಜಡೆಜಾ ಅವರ ವೃತಿಜೀವನಕ್ಕೆ ಅಂತ್ಯ ಹೇಳಿದ್ದಾರೆ. ರೋಹಿತ್ ಶರ್ಮಾ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಭಾರತ ಹಲವು ಬಾರಿ ಐಸಿಸಿ ಟ್ರೋಫಿ ಗೆಲ್ಲುವ ಸನಿಹಕ್ಕೆ ಬಂದು ಎಡವಿತ್ತು. ಕಳೆದ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ನಲ್ಲಿ ಸೋಲು, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಸೋಲು, 2023ರ ಏಕದಿನ ವಿಶ್ವಕಪ್ನಲ್ಲಿ ಫೈನಲ್ನಲ್ಲಿ ಸೋಲು ರೋಹಿತ್ ಪಡೆಗೆ ನುಂಗಲಾರದ ತುತ್ತಾಗಿತ್ತು.

ವಿರಾಟ್, ರೋಹಿತ್ ಅವರಿಗೆ ಇದೇ ಕೊನೆಯ ಟಿ20 ವಿಶ್ವಕಪ್ ಎನ್ನುವುದು ಗೊತ್ತಿತ್ತು. ಆಟಗಾರನಾಗಿ ಐಸಿಸಿ ಟ್ರೋಫಿ ಗೆಲ್ಲದ ರಾಹುಲ್ ದ್ರಾವಿಡ್ ಅವರಿಗೆ ಕೋಚ್ ಆಗಿ ಆ ಕೊರತೆ ನೀಗಿಸಿಕೊಳ್ಳಲು ಇದು ಕೊನೆಯ ಅವಕಾಶವಾಗಿತ್ತು. ಕೊನೆಗೂ ಕೋಟ್ಯಂತರ ಭಾರತೀಯರ ಹಾರೈಕೆ, ಆಟಗಾರರ ಛಲ ಭಾರತಕ್ಕೆ ಪ್ರಶಸ್ತಿ ತಂದುಕೊಟ್ಟಿದೆ.

ಇದು ನನ್ನ ಕೊನೆಯ ಪಂದ್ಯವೂ ಆಗಿತ್ತು. ನಾನು ಈ ಸ್ವರೂಪವನ್ನು ಆಡಲು ಪ್ರಾರಂಭಿಸಿದ ಸಮಯದಿಂದ ನಾನು ಆನಂದಿಸಿದೆ. ಈ ಸ್ವರೂಪಕ್ಕೆ ವಿದಾಯ ಹೇಳಲು ಉತ್ತಮ ಸಮಯ. ನಾನು ಈ ಪ್ರತಿಯೊಂದು ಕ್ಷಣವನ್ನು ಪ್ರೀತಿಸುತ್ತೇನೆ. ನಾನು ಬಯಸಿದ್ದು ಇದನ್ನೇ ನಾನು ಕಪ್ ಗೆಲ್ಲಲು ಬಯಸಿದ್ದೆ ಎಂದು ರೋಹಿತ್ ಶರ್ಮಾ ಪಂದ್ಯದ ನಂತರ ಹೇಳಿದರು. ಇಂತಹ ತಂಡವನ್ನು ಹೊಂದಲು ನಾನು ಅದೃಷ್ಟ ಮಾಡಿದ್ದೇನೆ. ಪ್ರಶಸ್ತಿ ಗೆಲ್ಲುವುದು ನನಗೆ ತುಂಬಾ ಅಗತ್ಯವಾಗಿತ್ತು. ಇಷ್ಟು ವರ್ಷಗಳಲ್ಲಿ ನಾನು ಗಳಿಸಿದ ಎಲ್ಲಾ ರನ್, ಅಂಕಿ ಅಂಶಗಳು ನನಗೆ ಮುಖ್ಯವಲ್ಲ. ಆದರೆ ಭಾರತಕ್ಕಾಗಿ ಪಂದ್ಯಗಳನ್ನು ಗೆಲ್ಲುವುದು, ಭಾರತಕ್ಕಾಗಿ ಟ್ರೋಫಿಗಳನ್ನು ಗೆಲ್ಲುವುದು, ಅದನ್ನೇ ನಾನು ಎದುರುನೋಡುತ್ತೇನೆ,” ಎಂದು ಹೇಳಿದ್ದಾರೆ.

ಟಿ20 ಕ್ರಿಕೆಟ್ನಲ್ಲಿ ಇಬ್ಬರು ದಿಗ್ಗಜರ ವೃತ್ತಿಜೀವನ ರಿಟೈರಮೆಂಟ್. ಆದರೆ ಇಬ್ಬರೂ ಇನ್ನೂ ಐಪಿಎಲ್ನಲ್ಲಿ ಆಡುವ ಸಾಧ್ಯತೆ ಇದೆ. ಭಾರತ ತಂಡದ ಜರ‍್ಸಿಯಲ್ಲಿ ಇಬ್ಬರನ್ನು ನೋಡಲು ಆಗದೇ ಇದ್ದರು, ಐಪಿಎಲ್ನಲ್ಲಿ ಇಬ್ಬರನ್ನು ಇನ್ನೊಮ್ಮೆ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ರೋಹಿತ್ ರ‍್ಮಾ ಅವರ ಬದಲಿಗೆ ಆಲ್ರೌಂಡರ್ ಹರ‍್ದಿಕ್ ಪಾಂಡ್ಯ ಅವರನ್ನು ಭಾರತ ತಂಡದ ಪರ‍್ಣಾವಧಿ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆಗಳ ಬಗ್ಗೆ ಬಿಸಿಸಿಐ ಕರ‍್ಯರ‍್ಶಿ ಜಯ್ ಶಾ ಮಾತನಾಡಿದ್ದಾರೆ.

ಹರ‍್ದಿಕ್ ಪಾಂಡ್ಯ ಅವರು ರೋಹಿತ್ ರ‍್ಮಾರಿಂದ ಟಿ20 ನಾಯಕತ್ವ ವಹಿಸಿಕೊಳ್ಳುವ ಮುಂಚೂಣಿಯಲ್ಲಿದ್ದರೆ, ರೋಹಿತ್ ರ‍್ಮಾ ಅವರ ಸ್ಥಾನವನ್ನು ಆಯ್ಕೆಗಾರರೊಂದಿಗೆ ರ‍್ಚಿಸಿದ ನಂತರ ಪ್ರಕಟಿಸಲಾಗುವುದು ಎಂದು ಬಿಸಿಸಿಐ ಕರ‍್ಯರ‍್ಶಿ ಜಯ್ ಶಾ ಹೇಳಿದರು.

Share this post

Post Comment