ಭಾರತದ ರೈಲ್ವೇ ಷೇರುಗಳು ಸೋಮವಾರ ಭಾರೀ ಏರಿಕೆಗೆ ಸಾಕ್ಷಿಯಾಗಿದೆ. ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 79,996 ದಿಂದ 79960 ಮತ್ತು ನಿಫ್ಟಿ 24,323 ದಿಂದ 24320 ನೆಗೆಟಿವ್ ವಹಿವಾಟು ನಡೆಸಿದ್ದರೂ ಸಹ ರೈಲ್ವೇ ಷೇರುಗಳ ಏರಿಕಿಗೆ ಕಾರಣವೇನು..
ಭಾರತೀಯ ಷೇರು ಮಾರುಕಟ್ಟೆಯ ವಾರದ ಮೊದಲ ವಹಿವಾಟಿನಲ್ಲಿ ದುರ್ಬಲ ಆರಂಭವಾಗಿದ್ದರು ರೈಲ್ವೇ ಷೇರುಗಳು ಭರ್ಜರಿ ಏರಿಕೆಯನ್ನು ಸಾಧಿಸಿವೆ. ಭಾರತದ ರೈಲ್ವೇ ಇಲಾಖೆಯ ಪ್ರಮುಖ ಷೇರುಗಳಾದ ಇರ್ಕಾನ್ ಇಂಟರ್ನ್ಯಾಷನಲ್, ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL) ಮತ್ತು ಇಂಡಿಯನ್ ರೈಲ್ವೇ ಫೈನಾನ್ಸ್ ಕರ‍್ಪೊರೇಷನ್ (IRFCL) ಸೋಮವಾರ ಭಾರೀ ಏರಿಕೆ ಯಾಗಿವೆ.
ಭಾರತದ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕರ‍್ಪೊರೇಷನ್ ಷೇರು ಬೆಲೆ ಓಪನಿಂಗ್ ಬೆಲ್ ನಲ್ಲಿ ಶೇಕಡಾ 2ರಷ್ಟು ಏರಿಕೆಯನ್ನು ಸಾಧಿಸಿದವು. ಆರ್ವಿಎನ್ಎಲ್ ಷೇರು ಬೆಲೆ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು, ಶೇಕಡಾ 2ರಷ್ಟು ಜಿಗಿತ ಸಾಧಿಸಿದೆ.ಆರ್ವಿಎನ್ಎಲ್ ಷೇರು ಬೆಲೆ ಹೊಸ ದಾಖಲೆಯ ಮಟ್ಟವನ್ನು ತಲುಪಿದ್ದು, ಇಂದು ಶೇಕಡಾ 12ರಷ್ಟು ಏರಿಕೆಯನ್ನು ಕಂಡಿದೆ.
ಹೊಸ ಸರ‍್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ ಐಆರ್ಎಫ್ಸಿ ಷೇರು ಬೆಲೆ
ಐಆರ್ಎಫ್ಸಿ ಷೇರು ಬೆಲೆ ಸೋಮವಾರ ಹೊಸ ದಾಖಲೆಯ ಮಟ್ಟ 206 ರೂಪಾಯಿಗೆ ತಲುಪಿದ್ದು, ಇಂಟ್ರಾಡೇ ಗರಿಷ್ಠ ಮಟ್ಟದಲ್ಲಿ ಶೇಕಡಾ 9ರಷ್ಟು ಹೆಚ್ಚಾಗಿದೆ. ಇನ್ನು ಇದೇ ವೇಳೆಯಲ್ಲಿ ರ‍್ಕಾನ್ ಷೇರು ಬೆಲೆ ಎನ್ಎಸ್ಇನಲ್ಲಿ ಹೊಸ ದಾಖಲೆಯ ಮಟ್ಟ 334.50 ರೂಪಾಯಿ ತಲುಪಿದ್ದು, ಸೋಮವಾರ ಶೇಕಡಾ 7ರಷ್ಟು ಏರಿಕೆ ಕಂಡಿದೆ.
ಷೇರುಪೇಟೆ ಕುಸಿದರೂ, ರೈಲ್ವೇ ಷೇರುಗಳ ಏರಿಕೆಗೆ ಪ್ರಮುಖ ಕಾರಣವೇನು?
ಪ್ರಮುಖವಾಗಿ ಸೋಮುವಾರ ಕಂಪನಿಗಳ ಬೆಲೆ ಏರಿಕಗೆ ಕೇಂದ್ರ ರೈಲ್ವೇ ಚಿವ ಅಶ್ವಿನಿ ವೈಷ್ಣವ್ ಹೇಳಿಕೆಯಾಗಿದೆ.
ಮುಂಬರುವ ದಿನಗಳಲ್ಲಿ 2500 ಹೊಸ ಪ್ರಯಾಣಿಕ ಕೋಚ್ಗಳು ಮತ್ತು 10,000 ಹೆಚ್ಚುವರಿ ಹೊಸ ಕೋಚ್ ಗಳನ್ನು ಭಾರತೀಯ ರೈಲ್ವೆ ಇಲಾಖೆಗೆ ಸೇರಿಸುವುದಾಗಿ ಕೇಂದ್ರ ಸಚಿವರು ತಿಳಿಸಿದ್ದಾರೆ. ಇದಲ್ಲದೆ ವೈಷ್ಣವ್ 50 ಹೊಸ ಅಮೃತ್ ಭಾರತ್ ರೈಲುಗಳ ಉತ್ಪಾದನೆ ಜೊತೆಗೆ ಹೈ ಸ್ಪೀಡ್ ಮತ್ತು ಲಕ್ಸುರಿ ರೈಲುಗಳ ಸೇವೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಇದರ ಜೊತೆಗೆ ಮುಂಬರುವ ಕೇಂದ್ರ ಬಜೆಟ್ನಲ್ಲಿ ರೈಲ್ವೇ ಸಂಬಂಧಿತ ಘೋಷಣೆಗಳ ನಿರೀಕ್ಷೆಗಳು ಹಾಗೂ ಮೂಲಭೂತ ಸೌರ‍್ಯಗಳ ಅಭಿವೃದ್ಧಿ ಸಹ ಹೆಚ್ಚುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ರೈಲ್ವೇ ಷೇರುಗಳು ಏರಿಕೆ ಮುಖವಾಗಿ ಚಲಿಸಿವೆ.
ರೈಲ್ವೇ ಸ್ಟಾಕ್ಗಳು ಟ್ರಿಗರ್ ಆಗಿವೆ!
ರೈಲ್ವೇ ಷೇರುಗಳ ಏರಿಕೆಗೆ ಪ್ರಮುಖ ಕಾರಣವು ರೈಲ್ವೇ ಸಚಿವರ ಪ್ರಮುಖ ಘೋಷಣೆಯಾಗಿದ್ದು, 2500 ಜನರಲ್ ಪ್ಯಾಸೆಂಜರ್ ಕೋಚ್ಗಳು ಮತ್ತು 10,000 ಹೆಚ್ಚುವರಿ ಕೋಚ್ಗಳ ಖರೀದಿಯಾಗಿದೆ. ಅಲ್ಲದೆ ಅವರು ಹೊಸದಾಗಿ 50 ಅಮೃತ್ ಭಾರತ್ ರೈಲುಗಳನ್ನು ಖರೀದಿಸುವುದಾಗಿ ಹೇಳಿಕೆ ನೀಡಿರುವುದು ರೈಲ್ವೇ ” ಎಂದು ಬಸವ್ ಕ್ಯಾಪಿಟಲ್ನ ಸಂಸ್ಥಾಪಕ ಸಂದೀಪ್ ಪಾಂಡೆ ಹೇಳಿದ್ದಾರೆ. HDFC ಬ್ಯಾಂಕ್ನ ಮಾಜಿ ಡೆಪ್ಯೂಟಿ ಉಪಾಧ್ಯಕ್ಷರ ಪ್ರಕಾರ ಭಾರತೀಯ ರೈಲ್ವೇ ಕಂಪನಿಗಳಲ್ಲಿ ಬಂಡವಾಳ ವೆಚ್ಚವು ವಿಸ್ತರಣೆಯಾಗಬಲ್ಲದು ಮತ್ತು ಬಿಜಿನೆಸ್ ಕೂಡ ಹೆಚ್ಚುವ ಸಾಧ್ಯತೆಯು ಸ್ಟಾಕಗಳ ಅಪ್ಟ್ರೆಂಡ್ ಗೆ ಕಾರಣವಾಗಿದೆ.